ಕನ್ನಡ ವಾರ್ತೆಗಳು

ಸಮುದ್ರಕ್ಕೆ ಹಾರಿ ಜೀವ ತೆತ್ತ ಮಾಡೂರಿನ ಯುವಕ

Pinterest LinkedIn Tumblr

susicde_see_photo

ಮಂಗಳೂರು, ನ.16 : ಯುವಕನೋರ್ವ ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ದುರಂತ ಘಟನೆ ನಿನ್ನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಸೋಮೇಶ್ವರ ಬಳಿ ಸಂಭವಿಸಿದೆ.

ಮಾಡೂರು ನಿವಾಸಿ ದಿ. ನಾರಾಯಣ ಸಪಲ್ಯರ ಪುತ್ರ ರಂಜಿತ್ (25) ಮೃತ ಯುವಕ. ಬೆಂಗಳೂರಿನಲ್ಲಿ ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದ ರಂಜಿತ್ ಇತ್ತೀಚೆಗಷ್ಟೇ ಊರಿಗೆ ಬಂದಿದ್ದ. ನಿನ್ನೆ ಸೋಮೇಶ್ವರ ಬಳಿ ಸಮುದ್ರದತ್ತ ತೆರಳಿದ್ದ. ಅಲ್ಲಿಯ ರುದ್ರಪಾದೆಯ ಮೇಲೆ ಕುಳಿತಿದ್ದ ರಂಜಿತ್ ಏಕಾಏಕಿ ಸಮುದ್ರಕ್ಕೆ ಹಾರಿದ್ದ. ಸ್ಥಳೀಯ ಈಜುಗಾರರಾದ ಅಶೋಕ್ ಮತ್ತು ಮೋಹನ್ ಎನ್ನುವವರು ರಂಜಿತ್‍ನ ರಕ್ಷಣೆಗಾಗಿ ಸಮುದ್ರಕ್ಕೆ ಇಳಿದಿದ್ದರಾದರೂ ಆ ವೇಳೆಗಾಗಲೇ ಆತ ರಭಸದ ಅಲೆಗೆ ಸಿಲುಕಿ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದ. ಸುಮಾರು ಒಂದು ಗಂಟೆಯ ಬಳಿಕ ಆತನ ಶವ ಪತ್ತೆಯಾಗಿದೆ.

ರಂಜಿತ್‍ಗೆ ಆರ್ಥಿಕ ಪರಿಸ್ಥಿತಿ ಕಾಡುತ್ತಿದ್ದು ಇದೇ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Write A Comment