ಕನ್ನಡ ವಾರ್ತೆಗಳು

‘ಫೇ(ಕ್)ಸ್‌ಬುಕ್’ ನಕಲಿ ಖಾತೆ ಮೂಲಕ ಯುವತಿಯ ಮಾನಹಾನಿ

Pinterest LinkedIn Tumblr

facebook_fake_2

ಉಡುಪಿ: ಅಪರಿಚಿತ ವ್ಯಕ್ತಿಗಳು ಯುವತಿಯೊಬ್ಬಳ ಫೋಟೋ ಬಳಸಿಕೊಂಡು ಫೇಸ್‌ಬುಕ್ ಖಾತೆ ತೆರೆದು ಮಾನಹಾನಿ ನಡೆಸಿದ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಡುಪಿ ಮೂಲದ ಅನುಷಾ ಎನ್ನುವವರು ಅನುಷಾ ವಿ. ಪಾಲನ್ ಎನ್ನುವ ಹೆಸರಿನಲ್ಲಿ ಫೇಸ್‌ಬುಕ್ ಖಾತೆಯನ್ನು 2 ವರ್ಷಗಳಿಂದ ಹೊಂದಿದ್ದರು. ಅ. 31 ರಂದು ಇವರ ಎಫ್.ಬಿ. ಖಾತೆಗೆ ಅನ್ವಿತಾ ಪಿ.ಕೆ. ಎನ್ನುವ ಹೆಸರಿನ ಖಾತೆಯಿಂದ ಫ್ರೆಂಡ್ ರಿಕ್ವೆಸ್ಟ್ ಬಂದಿದ್ದು ಆ ಖಾತೆಯ ಚಿತ್ರ ನೋಡಿದಾಗ ಅಲ್ಲಿ ಅನುಷಾ ಅವರ ಭಾವಚಿತ್ರ ಅಪ್‌ಲೋಡ್ ಮಾಡಲಾಗಿತ್ತು.

ಈ ಬಗ್ಗೆ ಪರಿಶೀಲಿಸಿದಾಗ ಯಾರೋ ಅಪರಿಚಿತರು ರಚಿಸಿದ್ದ ಆ ಖಾತೆಯಿಂದ ಅನುಷಾ ಮಿತ್ರರಿಗೂ ಮೆಸೇಜ್ ಕಳುಹಿಸಲಾಗಿತ್ತು ಎನ್ನಲಾಗಿದೆ.ಈ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

Write A Comment