ಮಂಗಳೂರು,ನ.05: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಗಿಡಿಗೆರೆ ರಾಮಕ್ಕ ಅವರನ್ನು ಮಂಗಳೂರಿನ ಶಾರದಾ ವಿದ್ಯಾಲಯದ ಧ್ಯಾನ ಮಂದಿರ ಸಭಾಭವನದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕ್ನನಡ ಸಾಹಿತ್ಯ ಪರಿಷತ್ತು ಮತ್ತು ಕಲ್ಕೂರ ಪ್ರತಿಷ್ಠಾನದ ವತಿಯಿಂದ ಸನ್ಮಾನಿಸಲಾಯಿತು.
ಎಸ್. ಪ್ರದೀಪ ಕುಮಾರ ಕಲ್ಕೂರ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹಿರಿಯ ಸಾಹಿತಿಗಳಾದ ಏರ್ಯ ಲಕ್ಷ್ಮೀ ನಾರಾಯಣ ಆಳ್ವರ ಉಪಸ್ಥಿತಿಯಲ್ಲಿ ಮಂಗಳೂರಿನ ಮೇಯರ್ ಜೆಸಿಂತಾ ವಿಜಯ ಆಲ್‌ಫ್ರೇಡ್ ಗಿಡಿಗೆರೆ ರಾಮ್ಕಕ ಅವರಿಗೆ ಪೌರ ಸಂಮಾನ ನೀಡಿ ಗೌರವಿಸಿದರು.
ಶಾರದಾ ವಿದ್ಯಾಲಯದ ಉಪಾಧ್ಯಕ್ಷರಾದ ಕೆ.ಎಸ್. ಕಲ್ಲೂರಾಯ, ಧರ್ಮದರ್ಶಿ ಹರಿಕೃಷ್ಣ ಪುನರೂರು, ಪ್ರೊ. ಲೀಲಾ ಉಪಾಧ್ಯಾಯ, ಪ್ರೊ. ಶ್ರೀಪತಿ ರಾವ್, ವಸಂತ ಭಾರಧ್ವಾಜ್ ಉಸ್ಥಿತರಿದ್ದರು. ಶ್ರೀ ದಯಾನಂದ ಕಟೀಲು ಸ್ವಾಗತಿಸಿದರು. ಜನಾರ್ದನ ಹಂದೆ ವಂದಿಸಿದರು. ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.
