ಕನ್ನಡ ವಾರ್ತೆಗಳು

ಬಿಜೆಪಿಯಿಂದ ಸಮಾಜದಲ್ಲಿ ಶಾಂತಿ ಕದಡಲು ಯತ್ನ : ಎಂಎಲ್‍ ಸಿ ಐವನ್ ಡಿ’ಸೋಜ ಆರೋಪ

Pinterest LinkedIn Tumblr

Ivan_press_meet_1

ಮಂಗಳೂರು,ನ.04 : ದೇಶದಲ್ಲಿ ಆಡಳಿತಾ ನಡೆಸುತ್ತಿರುವ ಬಿಜೆಪಿ ಪಕ್ಷದ ಮುಖಂಡ ಆತಂಕಕಾರಿ ಹೇಳಿಕೆಯನ್ನು ನೀಡುವ ಮೂಲಕ ಸಮಾಜದಲ್ಲಿ ಶಾಂತಿ ಕದಡಲು ಪ್ರಯತ್ನಿಸುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಆರೋಪಿಸಿದ್ದಾರೆ.

ಬುಧವಾರ ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿಯು ಯಾವತ್ತು ಜಾತಿ, ಧರ್ಮದ ವಿಚಾರದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ಗೋಮಾಂಸ ಸೇವನೆ ಬಗ್ಗೆ ಮುಖ್ಯಮಂತ್ರಿ ನೀಡಿರುವ ಹೇಳಿಕೆಯ ವಿರುದ್ಧ ಬಿಜೆಪಿಯವರು ಪ್ರತಿಭಟನೆ ಮಾಡುತ್ತಿದ್ದಾರೆ. ಬಿಜೆಪಿ ನಾಯಕರು ಈ ವಿಚಾರವಾಗಿ ಸಂಬಂಧ ಇಲ್ಲದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆಹಾರ ಸೇವನೆಯು ಪ್ರತಿಯೊಬ್ಬರ ವೈಯಕ್ತಿಕ ವಿಚಾರ. ಹಾಗೆಯೇ ಮುಖ್ಯಮಂತ್ರಿಗಳಿಗೂ ತಮ್ಮ ಆಹಾರದ ಹಕ್ಕಿದೆ ಎಂದು ಹೇಳಿದರು.

Ivan_press_meet_3 Ivan_press_meet_2

ಡಬ್ಬಲ್ ಮರ್ಡರ್ : ಅಧಿಕಾರಿಗಳ ನಿರ್ಲಕ್ಷ್ಯ ಕಾರಣ

ಸಬ್ ಜೈಲಿನಲ್ಲಿ ಮಾಡೂರು ಇಸುಬು ಮತ್ತು ಗಣೇಶ್ ಶೆಟ್ಟಿಯ ಹತ್ಯೆ ನಡೆದ ಬಗ್ಗೆ ಪ್ರತಿಕ್ರಿಯಿಸಿದ ಐವನ್ ಡಿಸೋಜ, ಈ ರೀತಿಯ ಘಟನೆ ನಡೆಯಬಾರದಿತ್ತು. ಈ ಘಟನೆಗೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಹೇಳಿದರು.

ಈ ಹಿಂದೆಯೇ ಹಲವಾರು ಬಾರಿ ವಿಧಾನ ಪರಿಷತ್ ನಲ್ಲಿ ಸಬ್ ಜೈಲ್ ಸಮಸ್ಯೆ ಕುರಿತು ನಾನು ಪ್ರಶ್ನಿಸಿದ್ದೇನೆ. ಜೈಲಿನಲ್ಲಿ ಮೊಬೈಲ್ ಬಳಕೆ ಕುರಿತು ಕೇಳಿದ ಪ್ರಶ್ನೆಗೆ ಮೊಬೈಲ್ ಜಾಮರ್ ಗಳನ್ನು ಅಳವಡಿಸಲಾಗುತ್ತದೆ. ಈ ಕುರಿತು ಮಂಜೂರಾತಿ ಆದೇಶವೂ ಬಂದಿದೆ ಎಂಬ ಉತ್ತರಗಳು ದೊರೆತಿವೆ. ಆದರೆ ಈವರೆಗೂ ಮೊಬೈಲ್ ಜಾಮರ್ ಅಳವಡಿಸಿಲ್ಲ ಎಂದು ಅವರು ಹೇಳಿದ್ದಾರೆ.

ಹಳೆ ಜೈಲಿನಲ್ಲಿ ಈವರೆಗೆ ಸಿಸಿ ಕ್ಯಾಮರ ಅಳವಡಿಸಲಾಗಿಲ್ಲ. ಈ ಕುರಿತು ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ. ಸರಕಾರದಿಂದ ಅನುದಾನವಿಲ್ಲವಾದರೆ ತನ್ನ ಶಾಸಕ ನಿಧಿಯಿಂದ ಈ ವೆಚ್ಚವನ್ನು ಭರಿಸುತ್ತೇನೆ ಎಂದವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮೂಡ ಅಧ್ಯಕ್ಷ ಕೋಡಿಜಾಲ್ ಇಬ್ರಾಹಿಂ, ಪಕ್ಷದ ಪ್ರಮುಖರಾದ ನಝೀರ್ ಬಜಾಲ್ ಮುಂತಾದವರು ಉಪಸ್ಥಿತರಿದ್ದರು.

Write A Comment