ಉಳ್ಳಾಲ. ಆ.20: ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆಗಳನ್ನು ಬೆಳೆಸಲು ಪ್ರತಿಭೋತ್ಸವ ಪೂರಕವಾಗಿರುತ್ತದೆ. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ಪ್ರತಿಭೆಗಳನ್ನು ಬೆಳೆಸಿಕೊಳ್ಳಬೇಕೆಂದು ಅಲ್ ಮದೀನ ಅಧ್ಯಕ್ಷ ಪಿ.ಎಂ. ಅಬ್ಬಾಸ್ ಮುಸ್ಲಿಯಾರ್ ಕರೆ ನೀಡಿದರು.
ಅವರು ಅಲ್ ಮದೀನ ವಠಾರದಲ್ಲಿ ಭಾನುವಾರ ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ವತಿಯಿಂದ ನಡೆದ ಪ್ರತಿಭೋತ್ಸವ -2015 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಜಮಾಲುದ್ದೀನ್ ಸಖಾಫಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ತಲಪಾಡಿ ಮತ್ತು ಉಳ್ಳಾಲ ಎಸ್ಸೆಸ್ಸೆಫ್ ಸೆಕ್ಟರ್ ಪಡಕೊಂಡರೆ, ದ್ವಿತೀಯ ಸ್ಥಾನವನ್ನು ದೇರಳಕಟ್ಟೆ ಎಸ್ಸೆಸ್ಸೆಫ್ ಸೆಕ್ಟರ್, ತೃತೀಯ ಸ್ಥಾನವನ್ನು ಮಂಜನಾಡಿ ಸೆಕ್ಟರ್ ತನ್ನದಾಗಿಸಿಕೊಂಡಿತು. ಕಾರ್ಯಕ್ರಮದ ಸಮಾರೋಪ ಮತ್ತು ಪೊಸೋಟ್ ತಂಙಳ್‌ರವರ ಅನುಸ್ಮರಣೆ ಕಾರ್ಯಕ್ರಮವು ಉಮರ್ ಅಹ್ಸನಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಿಟಿಎಂ ತಂಙಳ್ ಬೋಳಿಯಾರ್ ದುವಾ ನೆರವೇರಿಸಿದರು. ಫಾರೂಕ್ ಸಖಾಫಿ ಪ್ರಾಸ್ತಾವಿಕ ಭಾಷಣ ಮಾಡಿದರು. ಯಾಕೂಬ್ ಸಅದಿ ಅನುಸ್ಮರಣಾ ಭಾಷಣ ಮಾಡಿದರು. ಬಳಿಕ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ತು.ರ.ವೇ ಜಿಲ್ಲಾಧ್ಯಕ್ಷ ಮುನೀರ್ ಬಾವಾ, ದರ್ಗಾ ಅಧ್ಯಕ್ಷ ಯು.ಎಸ್. ಹಂಝ, ಎನ್ ಎಸ್ ಕರೀಂ, ಏಷ್ಯನ್ ಬಾವಾ ಹಾಜಿ, ಎಸ್.ಕೆ. ಖಾದರ್ ಹಾಜಿ, ಕತ್ತರ್ ಬಾವಾ ಹಾಜಿ, ಅಬ್ದುಲ್ ಖಾದರ್ ಸಖಾಫಿ, ನರಿಂಗಾನ ಗ್ರಾ.ಪಂ. ಅಧ್ಯಕ್ಷ ಇಸ್ಮಾಯಿಲ್ ಮೀನಂಕೋಡಿ, ಇಸ್ಮಾಯಿಲ್ ಸಅದಿ ಕಿನ್ಯ, ಅಬ್ದುಲ್ ರಹ್ಮಾನ್ ರಝ್ವಿ ಕಲ್ಕಟ್ಟ, ಇಸ್ಮಾಯಿಲ್ ಸಅದಿ ಉರುಮಣೆ, ಶೌಕತ್ ದೇರಳಕಟ್ಟೆ, ಮುರಳೀಧರ ಶೆಟ್ಟಿ, ಅಲ್ತಾಫ್ ಕುಂಪಲ ಮೊದಲಾದವರು ಉಪಸ್ಥಿತರಿದ್ದರು.
ಇಸ್ಮಾಯಿಲ್ ಮಾಸ್ಟರ್ ಅತಿಥಿಗಳನ್ನು ಸ್ವಾಗತಿಸಿದರು.









