ಮಂಗಳೂರು,ಅ.05 : ಅಕ್ಟೋಬರ್ 8 ಮತ್ತು 9 ಕ್ಕೆ ಮಂಗಳೂರಿನ ಶಾರದಾ ವಿದಾಲಯದಲ್ಲಿ ನಡೆಯಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಶತಮಾನೋತ್ಸವ ಕಾರ್‍ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಅಕ್ಟೋಬರ್ ೩ರಂದು ಕರ್ಣಾಟಕ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಪಿ. ಜಯರಾಮ ಭಟ್ ಬಿಡುಗಡೆ ಮಾಡಿದರು.
ಈ ಸಂದರ್ಭ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಸ್. ಪ್ರದೀಪ ಕುಮಾರ ಕಲ್ಕೂರ, ಎಂ.ಬಿ. ಪುರಾಣಿಕ್, ಶ್ರೀನಿವಾಸ್ ದೇಶಪಾಂಡೆ, ಪಿ. ಅನಂತಕೃಷ್ಣ ಭಟ್, ಕೆ.ಎಸ್. ಕಲ್ಲೂರಾಯ, ಶ್ರೀಮತಿ ಲೀಲಾ ಉಪಾಧ್ಯಾಯ, ದಯಾನಂದ ಕಟೀಲು ಮತ್ತು ಇತರರು ಉಪಸ್ಥಿತರಿದ್ದರು.
