ಕನ್ನಡ ವಾರ್ತೆಗಳು

ಕರ್ನಾಟಕ ಕೋಆಪರೇಟೀವ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್, ವಸಯಿ, ಮಹಾಸಭೆ

Pinterest LinkedIn Tumblr

Mumbai_photo_1

ಮುಂಬಯಿ : ಕರ್ನಾಟಕ ಕೋಆಪರೇಟೀವ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್, ವಸಯಿ, ಇದರ ೧೮ನೇ ವಾರ್ಷಿಕ ಮಹಾಸಭೆಯು ವಸಯಿಯ ಧೂರಿ ಫುಡ್ ಪ್ಲಾಜ ಸಭಾಗೃಹದಲ್ಲಿ ದಿನಾಂಕ 13.09.2015  ಕ್ಕೆ ನಡೆಯಿತು.ಸಭೆಯ ಅಧ್ಯಕ್ಷ ಸ್ಥಾನವನ್ನು ಸೊಸೈಟಿಯ ಅಧ್ಯಕ್ಷರಾದ ಮುಕುಂದ ಶೆಟ್ಟಿಯವರು ವಹಿಸಿದ್ದರು.

ವಸಯಿ ಕರ್ನಾಟಕ ಸಂಘದ ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಮಂಜುಳ ಆನಂದ ಶೆಟ್ಟಿಯವರ ಪ್ರಾರ್ಥನೆಯೊಂದಿಗೆ ಮುಖ್ಯ ಅತಿಥಿಗಳಾದ ಸರ್ವಶ್ರೀ ವಿಶ್ವನಾಥ ಪಿ. ಶೆಟ್ಟಿ, ಗೌರವ ಅಧ್ಯಕ್ಷ -ವಕಸ, ಕರ್ನಿರೆ ಶ್ರೀಧರ ಶೆಟ್ಟಿ,ಅಧ್ಯಕ್ಷ-ವಕಸ,ಪಾಂಡು ಯಲ್ ಶೆಟ್ಟಿ, ಅಧ್ಯಕ್ಷ, ಸಲಹಾ ಸಮಿತಿ-ವಕಸ, ಇವರ ಶುಭಹಸ್ತದಿಂದ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

Mumbai_photo_2 Mumbai_photo_3 Mumbai_photo_4

ಸೊಸೈಟಿಯ ಕಾರ್ಯದರ್ಶಿ, ಶ್ರೀ ಭಾಸ್ಕರ ಕೆ ಶೆಟ್ಟಿಯವರು 17ನೇ ಮಹಾಸಭೆಯಲ್ಲಿ ವರದಿ,2004-15ರ ವಾರ್ಷಿಕ ವರದಿಯನ್ನು ಸಭೆಗೆ ಮಂಡಿಸುತ್ತ ಗತವರ್ಷಕ್ಕೆ ತುಲನೆ ಮಾಢಿದಾಗ ಜಮಾರಾಶಿ ರೂ ೩೬೨.೩೫ ಲಕ್ಷದಿಂದ ರೂ ೩೭೫.೪೯ ಲಕ್ಷಕ್ಕೆ, ಸಾಲ ರೂ ೧೪೫.೨೧ ಲಕ್ಷದಿಂದ ರೂ ೧೬೩.೨೨ ಲಕ್ಷ, ಲಾಭ ರೂ ೪.೭೩ ಲಕ್ಷದಿಂದ ರೂ ೫.೬೧ ಲಕ್ಷಕ್ಕೆ ವೃದ್ದಿಯಾಗಿರುವುದಾಗಿಯೂ, ಆದಾಯ ನೀಡದ ಒಟ್ಟು ಋಣ ರೂ ೧೦.೩೦ ಲಕ್ಷ, ಪರಿಶಿಷ್ಟ ಆದಾಯರಹಿತ ಋಣ ಕೇವಲ ರೂ ೧೫೬೦೬.೦೦ ಆಗಿರುವುದಾಗಿ ತಿಳಿಸಿದರು. ಪಾಲುದಾರರ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಿ ವರದಿಗೆ ಒಪ್ಪಿಗೆಯನ್ನು ಪಡೆದರೆ, ಖಜಾಂಜಿ ಶ್ರೀ ಓ ಪಿ ಪೂಜಾರಿಯವರು ೨೦೧೪-೧೫ರ ಸಾಲಿನ ಆಯವ್ಯಯ ಪಟ್ಟಿ ಮತ್ತು ತುಲನಾ ಪತ್ರವನ್ನು ಸಭೆಗೆ ಮಂಡಿಸಿ ಪಾಲುದಾರರ ಒಪ್ಪಿಗೆಯನ್ನು ಪಡೆದರು.ಇದೇ ಸಮಯದಲ್ಲಿ ಕಾರ್ಯದರ್ಶಿಯವರು ಲಾಭಾಂಶದ 12% ವನ್ನು ಪಾಲುದಾರರೀಗೆ ನೀಢುವ ಪ್ರಸ್ತಾವವನ್ನಿತ್ತು ಮನ್ನಣೆ ಪಡೆದರು.ಸೊಸೈಟಿಯು ಕಳೆದ ಎರಡು ವರ್ಷದಿಂದ ೧೩% ಲಾಭಾಂಶವನ್ನು ಪಾಲುದಾರರೀಗೆ ನೀಡುತ್ತಾ ಬಂದಿದೆ.ಸಭೆಯಲ್ಲಿ ಉಪಸ್ಥಿತರಿದ್ದ ಪಾಲುದಾರರು ಮೆಚ್ಚುಗೆ ವ್ಯಕ್ತಪಡಿಸಿದರು.

ನಂತರ ೨೦೧೫-೧೬ ರ ಮುಂಗಡ ಪತ್ರ, ಪಾಲುದಾರರ ಬಂಡವಾಳದr ಮಿತಿ ಏರಿಕೆ, ಋಣದ ಮಿತಿಯ ಏರಿಕೆ,ಹೊಸ ಕಮಿಟಿಯ ರಚನೆಯ ಮುಂದೂಡಿಕೆ, ಆಂತರಿಕ ಲೆಕ್ಕ ಪರೀಕ್ಷಕರು ಮತ್ತು ಅಧಿಕೃತ ಲೆಕ್ಕ ಪರೀಕ್ಷಕರು ಮರುನೇಮಕ,ಹೊಸ ಉಪನಿಯಮ ಜಾರಿಗೆ ತರುವ ಪ್ರಸ್ತಾವಗಳಿಗೆ ಆಂತರಿಕ ಲೆಕ್ಕ ಪರೀಕ್ಷಕರು ಮತ್ತು ಅಧಿಕೃತ ಲೆಕ್ಜ ಪರಿಶೋಧಕರ ಮರುನೇಮಕ,ಹೊಸ ಉಪನಿಯಮ ಜಾರೀಗೆ ತರುವ ಪ್ರಸ್ತಾವಗಳಿಗೆ ಪಾಲುದಾರರ ಒಪ್ಪಿಗೆ ಪಡೆಯಲಾಯಿತು.

ಮುಖ್ಯ ಅತಿಥಿ ಶ್ರೀ ವಿಶ್ವನಾಥ ಶೆಟ್ಟಿಯವರು ಮಾತಾಡಿ ಸೊಸೈಟಿಯ ಸಾಧನೆಗಳ ಬಗ್ಗೆ ಪ್ರಶಂಸೆ ಮಾಡಿ ಕನ್ನಡಿಗರೆಲ್ಲರು ಪಾಲುದಾರರಾಗಬೇಕು , ಠೇವಣಿ ಇಡುವುದು ಮತ್ತು ಋಣ ಇಲ್ಲಿಂದ ಪಡೆದು ಪ್ರಗತಿಗೆ ಸಹಕಾರ ನೀಡಬೇಕೆಂದು ವಿನಂತಿ ಮಾಡಿದರು. ನಂತರ ಮಾತಾಡಿದ ವಸಯಿ ಕರ್ನಾಟಕ ಸಂಘದ ಅಧ್ಯಕ್ಷ, ಕರ್ನಿರೆ ಶ್ರೀಧರ ಶೆಟ್ಟಿಯವರು ಸಾಲದ ಮಿತಿ ಏರಿಕೆ, ೧೩% ಲಾಭಾಂಶದ ಬಿಡುಗಡೆ ಹೆಚ್ಚಿನ ಸದಸ್ಯರನ್ನು ಆಕರ್ಷಿಸಲಿದೆ ಎಂದರಲ್ಲದೆ ಇದರ ಪ್ರಗತಿಯ ಜವಾಬ್ದಾರಿ ನಮ್ನೆಲ್ಲರನ್ನು ನಿರ್ಭರಿಸಿದೆ ಎಂದರು. ಮುಂಬರುವ ದಿನಗಲ್ಲಿ ಇದು ಬ್ಯಾಂಕಾಗಿ ಪರವರ್ತನೆಯಾಗಲಿ ಎಂದು ಆಶೆ ವ್ಯಕ್ತಪಡಿಸಿದರು.

ಅಧ್ಯಕ್ಷ ಶ್ರೀ ಮುಕುಂದ ಶೆಟ್ಟಿಯವರು ಮಾತಾಡುತ್ತ ಬಹುದಿನಗಳ ಬೇಡಿಕೆಯಾದ ವಿದ್ಯಾಋಣ ಯೋಜನೆಯನ್ನು ಜಾರಿಗೆ ತರಲಾಗುವುದೆಂದು ಘೋಷಿಸಿದರು.ಸೊಸೈಟಿಯಲ್ಲಿ ವಾಹನ ಮತ್ತು ಮನೆ ಖರೀದಿಗೆ ಕೂಡಾ ಆಕರ್ಷಕ ಬಡ್ಡಿದರದಲ್ಲಿ ಸಾಲ ನೀಡಲಾಗುತ್ತಿದ್ದು ಇದರ ಪ್ರಚಾರವಾಗಬೇಕಾಗಿದೆ ಎಂದರಲ್ಲದೆ ಮುಂದಿನ ವರ್ಷಗಳಲ್ಲಿ ಸದಸ್ಯರಿಂದ ಬಂದ ಸಲಹೆ-ಸೂಚನೆಗಳನ್ನು ಪರಿಶೀಲಿಸಿ, ಜಾರೀಗೆ ತರಲಾಗುವುದೆಂದರು. ವಸಯಿ ಕರ್ನಾಟಕ ಸಂಘ ಮತ್ತು ವಸಯಿ ಯ ಸ್ಥಳೀಯ ಸಂಘ-ಸಂಸ್ಥೆಗಳ ಸಹಕಾರಕ್ಕೆ ಕೃತಜ್ಞತೆ ವ್ಯಕ್ತಪಡಿಸಿದರು.

ಸ್ಥಳೀಯ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸೊಸೈಟಿಯ ಕರ್ಮಚಾರಿಗಳು ಮತ್ತು ಪಾಲುದಾರರೀಗೆ ಪುಷ್ಪಗುಚ್ಚೆ ಇತ್ತು ಸತ್ಕರಿಸಲಾಯಿತು.ಕಾರ್ಯಕ್ರಮದ ನಿರೂಪಣೆ ಚಂದ್ರಶೇಖರ ಪುತ್ರನ್ ಮಾಡಿದರೆ ಶ್ರೀ ಓ ಪಿ ಪೂಜಾರಿ, ಕೋಶಾಧಿಕಾರಿ ದನ್ಯವಾದಾರ್ಪಣೆ ಮಾಡಿದರು. ಪ್ರೀತಿ ಭೋಜನದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

Write A Comment