ಕನ್ನಡ ವಾರ್ತೆಗಳು

ಮನಪಾ ಆಡಳಿತಾ ವೈಫಲ್ಯ ಖಂಡಿಸಿ ಹಾಗೂ ಮೂಲಭೂತ ಸಮಸ್ಯೆಗಳ ನಿವಾರಣೆಗೆ ಒತ್ತಾಯಿಸಿ ಸಿಪಿಐಯಿಂದ ಮಹಾಧರಣಿ

Pinterest LinkedIn Tumblr

Cpim_protest_photo_1

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಆಡಳಿತಾ ನಡೆಸುತ್ತಿರುವ ಕಾಂಗ್ರೆಸ್ ದುರಾಡಳಿತದ ವಿರುದ್ಧ ಹಾಗೂ ನಾಗರಿಕ ಸಮಾಜದ ಮೂಲಭೂತ ಸಮಸ್ಯೆಗಳ ನಿವಾರಣೆಗೆ ಒತ್ತಾಯಿಸಿ ಸಿಪಿಐ(ಎಂ) ವತಿಯಿಂದ ಸೋಮವಾರ ಮಹಾನಗರಪಾಲಿಕೆಯ ಮುಂಭಾಗದಲ್ಲಿ ಮಹಾಧರಣಿ ನಡೆಯಿತು.

ಪ್ರತಿಭಟನಕಾರರನ್ನುದ್ದೇಶಿಸಿ ಮಾತನಾಡಿದ ಸಿಪಿಐಎಂ ಪಕ್ಷದ ಮುಖಂಡರು, ಮಂಗಳೂರು ಮಹಾನಗರಪಾಲಿಕೆಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಅಭಿವೃದ್ಧಿ ವಿಚಾರದಲ್ಲಿ ಕಾಂಗ್ರೆಸ್ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ. ಇದರಿಂದಾಗಿ ನಗರದ ಜನತೆ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ ಎಂದು ಆರೋಪಿಸಿದರು.

Cpim_protest_photo_2 Cpim_protest_photo_3 Cpim_protest_photo_4 Cpim_protest_photo_5 Cpim_protest_photo_6 Cpim_protest_photo_7 Cpim_protest_photo_8 Cpim_protest_photo_9 Cpim_protest_photo_10 Cpim_protest_photo_11 Cpim_protest_photo_12Cpim_protest_photo_13 Cpim_protest_photo_14 Cpim_protest_photo_15 Cpim_protest_photo_16 Cpim_protest_photo_17 Cpim_protest_photo_18 Cpim_protest_photo_19

ಮಂಗಳೂರು ಮಹಾನಗರಪಾಲಿಕೆಯಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಪಕ್ಷದ ದುರಾಡಳಿತ ಮತ್ತು ಜನವಿರೋಧಿ ಧೋರಣೆಯನ್ನು ಖಂಡಿಸಿ ಧಿಕ್ಕಾರ ಕೂಗಿದರು. ಕೆಲವರು ಕಾಂಗ್ರೆಸ್ ಸರಕಾರದ ದುರಾಡಳಿತ ಖಂಡಿಸಿ ರಾಜ್ಯ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಪ್ರತಿಭಟನೆಗೂ ಮುನ್ನ ನಗರದ ಯೆಯ್ಯಾಡಿಯಿಂದ ಲಾಲ್ ಬಾಗ್ ನಲ್ಲಿರುವ ಮಹಾನಗರ ಪಾಲಿಕೆ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ಜರಗಿತ್ತು. ಸಿಪಿಐ ಎಂ ಕಾರ್ಯಕರ್ತರು ಹಾಗೂ ಇತರರು ಭಾರೀ ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Write A Comment