ಮಂಗಳೂರು: ಶ್ರೀ ಸಿದ್ಧಿವಿನಾಯಕ ಪ್ರತಿಷ್ಠಾನ ಶ್ರೀ ಸಾರ್ವಜನಿಕ ಗಣೇಶೋತ್ಸವದ ವತಿಯಿಂದ ಮಂಗಳೂರಿನ ಬಂಟ್ಸ್ ಹಾಸ್ಟೆಲಿನಲ್ಲಿರುವ ಶ್ರೀ ರಾಮಕೃಷ್ಣ ಕಾಲೇಜಿನ ಆವರಣದಲ್ಲಿ ಬಂಟಕ್ರೀಡೋತ್ಸವ ಭಾನುವಾರ ಜರಗಿತು.
ಶ್ರೀ ಸಿದ್ಧಿ ವಿನಾಯಕ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಅಜಿತ್ ಕುಮಾರ್ ರೈ ಮಾಲಾಡಿ ಅವರು ಕ್ರೀಡೋತ್ಸವವನ್ನು ಉದ್ಘಾಟಿಸಿ ಮಾತನಾಡಿ, ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಈ ಕ್ರೀಡಾಕೂಟದಲ್ಲಿ ಭಾಗವಹಿಸುವ ಮೂಲಕ ಕ್ರೀಡೋತ್ಸವ ಯಶಸ್ವಿಯಾಗಲಿ ಎಂದು ಹಾರೈಸಿದರು.
ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಸಿಎ ಶಾಂತರಾಮ ಶೆಟ್ಟಿ ಅವರು ಮಾತನಾಡಿ, ಕ್ರೀಡೆಯಿಂದ ಆರೋಗ್ಯ ವೃದ್ಧಿಯಾಗುತ್ತದೆ. ಸಮಾಜ ಬಾಂಧವರ ನಡುವೆ ಒಗ್ಗಟ್ಟಿಗೆ, ಸಾಮರಸ್ಯಕ್ಕೆ ಕ್ರೀಡೆ ಪೂರಕ ಎಂದರು.
ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷೆ ಡಾ.ಆಶಾಜ್ಯೋತಿ ರೈ, ಶ್ರೀಮತಿ ರಶ್ಮಿ ಶಾಂತಾರಾಮ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ದಿವಾಕರ ಸಾಮಾನಿ, ಜೊತೆ ಕಾರ್ಯದರ್ಶಿಗಳಾದ ಶಶಿರಾಜ್ ಶೆಟ್ಟಿ, ಪ್ರತಿಮಾ ಆರ್.ಶೆಟ್ಟಿ, ಮೀನಾ ಆರ್.ಶೆಟ್ಟಿ, ಕ್ರೀಡಾಕೂಟದ ಸಂಘಟಕ ಕಿರಣ್ ಪಕ್ಕಳ, ಟ್ರಸ್ಟಿ ರವಿರಾಜ ಶೆಟ್ಟಿ, ಕ್ರೀಡಾಕೂಟದ ಸಂಘಟಕ ಕಿರಣ್ ಪಕ್ಕಳ, ಟ್ರಸ್ಟಿ ರವಿರಾಜ ಶೆಟ್ಟಿ ನಿಟ್ಟೆಗುತ್ತು, ಜಯಲಕ್ಷ್ಮೀ ಹೆಗ್ಡೆ, ಕೃಷ್ಣರಾಜ ಸುಲಾಯ, ಮನಮೋಹನ ಶೆಟ್ಟಿ, ಜಗನ್ನಾಥ್ ನಾಕ್ ಮತ್ತಿತರರು ಉಪಸ್ಥಿತರಿದ್ದರು.
ಕಿರಣ್ ಪಕ್ಕಳ ಸ್ವಾಗತಿಸಿದರು. ಶರತ್‌ಶೆಟ್ಟಿ ಪಡುಪಳ್ಳಿ ಕಾರ್ಯಕ್ರಮ ನಿರ್ವಹಿಸಿದರು. ಕ್ರೀಡಾಕೂಟದ ಪೂರ್ವಭಾವಿಯಾಗಿ ಲಾಲ್‌ಭಾಗ್ ಬಂಟ್ಸ್‌ಹಾಸ್ಟೆಲ್‌ನಿಂದ ಕ್ರೀಡಾಜ್ಯೋತಿಯನ್ನು ತರಲಾಯಿತು.



