ಕನ್ನಡ ವಾರ್ತೆಗಳು

 ವಸಾಯಿ ರೋಡ್-ಮಂಗಳೂರು ಗಣಪತಿ ಉತ್ಸವ ವಿಶೇಷ ರೈಲಿಗೆ ಚಾಲನೆ

Pinterest LinkedIn Tumblr

Vasai_Mnglre_train_1

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಸೆ.12: ರೈಲ್ವೇ ಯಾತ್ರಿ ಸಂಘ ಬೊರಿವಲಿ ಮುಂಬಯಿ ಮತ್ತು ರೈಲ್ವೇ ಯಾತ್ರಿ ಸಂಘ (ರಿ.) ಉಡುಪಿ ಸಂಸ್ಥೆಗಳ ಬೇಡಿಕೆ ಹಾಗೂ ಬೋರಿವಿಲಿ ಸಂಸದ ಗೋಪಾಲ ಸಿ.ಶೆಟ್ಟಿ ಅವರ ಸತತ ಪ್ರಯತ್ನದ ಫಲವಾಗಿ ಇದೇ ಮೊದಲ ಬಾರಿ ಉಪನಗರ ಪಶ್ಚಿಮ ರೈಲ್ವೇಯ ಯಾತ್ರಿಗಳ ಅನುಕೂಲಕ್ಕಾಗಿ ವಸಾಯಿ ರೋಡ್ ಜಂಕ್ಷನ್ ರೈಲ್ವೇ ಸ್ಟೇಶನ್‌ನಿಂದ ಈ ರೈಲು ಸೇವೆ ಕೊಂಕಣ ಮಾರ್ಗವಾಗಿ ಆರಂಭಿಸಲಾದ ವಸಾಯಿ ರೋಡ್-ಮಂಗಳೂರು ಗಣಪತಿ ಉತ್ಸವ ವಿಶೇಷ ರೈಲಿಗೆ ಇಂದಿಲ್ಲಿ ಅಪರಾಹ್ನ 1.45 ಗಂಟೆಗೆ ವಸಾಯಿ ರೋಡ್ ಜಂಕ್ಷನ್ ರೈಲ್ವೇ ಸ್ಟೇಷನ್‌ನಲ್ಲಿ ರೈಲು ಸಂಖ್ಯೆ 00115ಕ್ಕೆ ಚಾಲನೆಯನ್ನೀಡಿಲಾಯಿತು.

ರೈಲ್ವೇ ಯಾತ್ರಿ ಸಂಘ ಬೊರಿವಲಿ ಮುಂಬಯಿ ಸಂಘದ ಸ್ಥಾಪಕ ಗೌರವಾಧ್ಯಕ್ಷ ವಿರಾರ್ ಶಂಕರ್ ಬಿ.ಶೆಟ್ಟಿ, ಅಧ್ಯಕ್ಷ ಶಿಮಂತೂರು ಅವರು ಹಸಿರು ನಿಶಾನೆ ತೋರಿಸಿ ವಿಶೇಷ ರೈಲಿಗೆ ಚಾಲನೆಯನ್ನಿತ್ತರು. ಆ ಮುನ್ನ ಸಂಘದ ಸಲಹಾಗಾರ ಎರ್ಮಾಳ್ ಹರೀಶ್ ಶೆಟ್ಟಿ ನೇತೃತ್ವದಲ್ಲಿ ಸಂಸದ ಗೋಪಾಲ ಸಿ.ಶೆಟ್ಟಿ ಅವರ ಕಛೇರಿಯಲ್ಲಿ ವಿಶೇಷ ರೈಲಿಗಾಗಿ ಶ್ರಮಿಸಿದ ಸಂಸದರಿಗೆ ಪುಷ್ಪಗುಪ್ಚವನ್ನಿತ್ತು ಗೌರವಿಸಲಾಗಿದ್ದು, ಬಳಿಕ ಯಾತ್ರಿ ಸಂಘದ ಪದಾಧಿಕಾರಿಗಳು ತಮ್ಮ ಇನ್ನಿತರ ಯೋಜನೆಗಳ ಬಗ್ಗೆ ಚರ್ಚಿಸಿದರು.

ಈ ಸಂದರ್ಭದಲ್ಲಿ ವಸಾಯಿ ರೋಡ್ ಜಂಕ್ಷನ್ ರೈಲ್ವೇ ಸ್ಟೇಶನ್ ಮಾಸ್ಟರ್ ರಾಜೇಶ್ ಮ್ಹಾತ್ರೆ, ರೈಲ್ವೇ ಯಾತ್ರಿ ಸಂಘದ ಉಪಾಧ್ಯಕ್ಷ ಪ್ರೇಮನಾಥ ಕೋಟ್ಯಾನ್, ಕಾರ್ಯಕಾರಿ ಕಾರ್ಯದರ್ಶಿ ಓಲಿವೆರ್ ಡಿ’ಸೋಜಾ, ಜೊತೆ ಕಾರ್ಯದರ್ಶಿ ರಜಿತ್ ಸುವರ್ಣ, ಕೆ.ಬಿ ಪೂಜಾರಿ, ದೇವೇಂಡ್ರ ಬುನ್ನನ್, ಯಶೋಧರ್ ವಿ.ಕೋಟ್ಯಾನ್, ಅಶೋಕ್ ಶೆಟ್ಟಿ ವಸಾಯಿ, ನಾರಾಯಣ ಕುಕ್ಯಾನ್, ಸುಭಾಶ್ ಪೂಜಾರಿ, ಮೋಹನ್ ಕೆ.ಪುತ್ರನ್, ಕೆ.ಪಿ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

Vasai_Mnglre_train_2 Vasai_Mnglre_train_3 Vasai_Mnglre_train_4 Vasai_Mnglre_train_5

ಮುಹೂರ್ತ ತಪ್ಪಿ ಉತ್ಸಹ ಕುಂದಿಸಿದ ಗಣಪತಿ ಉತ್ಸವ ವಿಶೇಷ ರೈಲು:
ಇಂದಿಲ್ಲಿ ಅಪರಾಹ್ನ 1.45 ಗಂಟೆಗೆ ವಸಾಯಿ ರೋಡ್ ಜಂಕ್ಷನ್ ರೈಲ್ವೇ ಸ್ಟೇಷನ್‌ನಿಂದ ಹೊರಡ ಬೇಕಿದ್ದ ಗಣಪತಿ ಉತ್ಸವ ವಿಶೇಷ ರೈಲು ಪ್ಲಾ ಟ್‌ಫಾರ್ಮ್‌ಗೆ ಬರಲೇ ತಡವಾದ ಕಾರಣ ಸುಮಾರು 2 ಗಂಟೆ ತಡವಾಗಿ ಹೊರಟು ಯಾನಿಗಳಿಗೆ ಕಿರಿಕಿರಿಯನ್ನುಂಟು ಮಾಡಿತು. ಸುಮಾರು 18 ಬೋಗಿಗಳ ದ್ವಿತೀಯ ದರ್ಜೆ ಹಾಗೂ ಸಾಮಾನ್ಯ ಬೋಗಿಗಳಿದ್ದ ರೈಲಿನಲ್ಲಿ ವಾತಾನುಕೂಲ (ಎಸಿ) ಬೋಗಿಗಳೇ ಇಲ್ಲದಿದ್ದು, ಪ್ರಯಾಣಿಕನೇಕರು ಎಸಿ ಇಲ್ಲದ ಬಿಸಿಯಲ್ಲೇ ಯಾನ ಆರಂಭಿಸಿದರು.
ಸೆ.11ರ ಶುಕ್ರವಾರ,16 ಮತ್ತು 26 ರ ಮೂರು ದಿನಗಳಲ್ಲಿ ರೈಲು ಸಂಖ್ಯೆ 00115ಯು ವಸಾಯಿ ರೋಡ್ ಜಂಕ್ಷನ್ ರೈಲ್ವೇ ಸ್ಟೇಷನ್‌ನಿಂದ ನಿರ್ಗಮಿಸಿ ಕೊಂಕಣ್ ರೈಲ್ವೇಯ ಹಳಿ ಮೂಲಕ ಪನ್ವೇಲ್, ರತ್ನಗಿರಿ, ಗೋವಾ (ಮಡ್ಗಾಂವ್), ಮೂಲಕ ಕಾರವಾರ, ಕುಮಟಾ, ಭಟ್ಕಳ ಮಾರ್ಗವಾಗಿ ಸೆ.12ರ ಶನಿವಾರ ಬೆಳಿಗ್ಗೆ 8.43 ರ ವೇಳೆಗೆ ಉಡುಪಿ ತಲುಪಿ ಸುರತ್ಕಲ್ ಮೂಲಕ ಪೂರ್ವಾಹ್ನ 11.00 ಗಂಟೆಗೆ ಮಂಗಳೂರು ಸೇರಲಿದೆ. ಅಂತೆಯೇ ರೈಲು ಸಂಖ್ಯೆ 00116 ಯು ಸೆ.12ರ ಶನಿವಾರ,12 ಮತ್ತು 27 ರ ಮೂರು ದಿನಗಳಲ್ಲಿ ಸಂಜೆ 6.00 ಗಂಟೆಗೆ ಮಂಗಳೂರುನಿಂದ ಹೊರಟು ಆದಿತ್ಯವಾರ ಬೆಳಿಗ್ಗೆ ಪೂರ್ವಾಹ್ನ 11.40 ಗಂಟೆಗೆ ಪನ್ವೇಲ್ ಮೂಲಕ ಮಧ್ಯಾಹ್ನ 1.00  ಗಂಟೆಗೆ ವಸಾಯಿ ರೋಡ್ ಜಂಕ್ಷನ್‌ಗೆ ಆಗಮಿಸಲಿದೆ ಎಂದು ರೈಲ್ವೇ ಮಂಡಳಿ ವೇಳಾಪಟ್ಟಿ ಪ್ರಕಟಿಸಿದೆ. ಈ ಬಗ್ಗೆ ರೈಲ್ವೇ ಯಾತ್ರಿ ಸಂಘ (ರಿ.) ಉಡುಪಿ ಸಂಸ್ಥೆಯೂ ತಮ್ಮ ಸತತ ಪ್ರಯತ್ನ ನಡೆಸಿದ್ದು ರೈಲ್ವೇ ಯಾತ್ರಿ ಸಂಘ (ರಿ.) ಉಡುಪಿ ಇದರ ಅಧ್ಯಕ್ಷ ಆರ್.ಎಲ್ ಡಾಯಸ್ ರೈಲು ಪ್ರಯಾಣಿಕರಿಗೆ ಮಾಹಿತಿ ನೀಡಿದ್ದಾರೆ.

Write A Comment