ವರದಿ : ಈಶ್ವರ ಎಂ. ಐಲ್
ಮುಂಬಯಿ : ಸೆ. 13 ರಂದು ಮಧ್ಯಾಹ್ನ 2 ಗಂಟೆಗೆ ನಗರದ ಮಾಟುಂಗಾ ಪಶ್ಚಿಮದಲ್ಲಿನ ಡಾ|ಎಂ.ವಿಶ್ವೇಶ್ವರಯ್ಯ ಸಭಾಗೃಹದಲ್ಲಿ ನಡೆಯಲಿರುವ ಕುಲಾಲ ಡಾನ್ಸ್ ಫೆಸ್ಟಿವಲ್ – 2 ಇದರ ಪೂರ್ವ ಸಿದ್ದತೆಯು ಭರದಿಂದ ಸಾಗುತ್ತಿದ್ದು. ಸೆ. 6 ರಂದು ಈ ಕುರಿತು ಸಮಾಲೋಚನೆ ಸಭೆ ಆ ನಂತರ ಪತ್ರಿಕಾ ಗೋಷ್ಥಿಯು ನಡೆಯಿತು.
ಈ ಗೋಷ್ಥಿಯಲ್ಲಿ ಮಾತನಾಡಿದ ಕುಲಾಲ ಸಂಘದ ಅಧ್ಯಕ್ಷ ಗಿರೀಶ್ ಸಾಲ್ಯಾನ್, ಗೌರವ ಪ್ರಧಾನ ಕಾರ್ಯದರ್ಶಿ ಡಿ. ಐ. ಮೂಲ್ಯ, ಗೌರವ ಕೋಶಾಧಿಕಾರಿ ಜಯ ಎಸ್. ಅಂಚನ್ ಮತ್ತು ಸಮಾಜಿಕ ಹಾಗೂ ಆರ್ಥಿಕ ಸಮಿತಿಯ ಕಾರ್ಯಾಧ್ಯಕ್ಷ ಉಮೇಶ್ ಎಂ. ಬಂಗೇರ ಅವರು ಸಮಾಜದ ಯುವ ಜನಾಂಗದಲ್ಲಿನ ಪ್ರತಿಭೆಯನ್ನು ಗುರುತಿಸಿ ಅವರಿಗೆ ಪ್ರೋತ್ಸಾಹಿಸುದರೊಂದಿಗೆ ಯುವ ಜನಾಂಗವನ್ನು ಒಂದೇ ವೇದಿಕೆಯಲ್ಲಿ ತರುವುದರೊಂದಿಗೆ, ಸಮಾಜದ ಮುಖ್ಯವಾಹಿನಿಯಲ್ಲಿ ತಂದು ಕ್ರೀಯಾಶೀಲರಾಗುವಂತೆ ಮಾಡಲು ಹಮ್ಮಿಕೊಂಡ ಈ ಕಾರ್ಯಕ್ರಮವು ಕಳೆದ ವರ್ಷ ಬಹಳ ಯಶಸ್ವಿಯಾಗಿ ಜರಗಿದೆ. ಈ ಸಲವೂ ಇದನ್ನು ಅಂತರಾಷ್ಟೀಯ ಮಟ್ಟದಲ್ಲಿ ಜರಗಿಸಲು ನಿರ್ದರಿಸಿದ್ದು ಇದಕ್ಕೆ ಈಗಾಗಲೆ ನಾವು ನಿರೀಕ್ಷಿಸಿದಂತೆ ಪ್ರವೇಶ ಪತ್ರವು ಬಂದಿರುತ್ತದೆ.
ವಯೋಮಿತಿಗನುಸಾರವಾಗಿ ಈ ನೃತ್ಯೋತ್ಸವಕ್ಕೆ ಕೇವಲ ದೇಶದ ವಿವಿಧ ಬಾಗಗಳಿಂದ ಮಾತ್ರವಲ್ಲದೆ ಕೊಲ್ಲಿ ರಾಜ್ಯವೂ ಸೇರಿ ವಿದೇಶದಲ್ಲಿನ ನಮ್ಮ ಸಮಾಜದ ಯುವಜನಾಂಗದವರಿಂದಲೂ ಪ್ರವೇಶ ಪತ್ರವನ್ನು ಆಹ್ವಾನಿಸಿದ್ದು ಪ್ರವೇಶ ಪತ್ರವು ದುರುಪಯೋಗವಾಗದಂತೆ, ನೃತ್ಯದಲ್ಲಿ ಬಾಗವಹಿಸುವವರ ಗುರುತು ಪತ್ರವನ್ನು ಪಡೆಯಲಾಗಿದೆ. ನೃತ್ಯೋತ್ಸವದಲ್ಲಿ ನಡೆಯಲಿರುವ ವಿವಿಧ ನೃತ್ಯ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಗುವುದು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಮೀರಾರೋಡ್ ಅಮಿತಾ ಕಲಾ ಮಂದಿರದ ಅಮಿತಾ ಜತಿನ್, ಪೊವಾಯಿಯ ನಟನಾ ನೃತ್ಯ ಅಕಾಡೆಮಿಯ ಗೀತಾ ಸಾಲ್ಯಾನ್ ಮತ್ತು ನಾಸಿಕ್ ನ ಕ್ಷಮಾ ಆರ್. ಬಂಗೇರ ಮತ್ತು ಬಳಗದವರಿಂದ ವಿಶೇಷ ನೃತ್ಯ ಪ್ರದರ್ಶನವು ನಡೆಯಲಿದೆ. ಪತ್ರಕರ್ತ ದಿನೇಶ್ ಕುಲಾಲ್ ಅವರು ಕುಲಾಲ ನೃತ್ಯೋತ್ಸವ ದ ಬಗ್ಗೆ ಮಾಹಿತಿಯನ್ನು ನೀಡಿದರು.
