ಕನ್ನಡ ವಾರ್ತೆಗಳು

ಚೈಲ್ಡ್‌ಲೈನ್-1098 ನಿಂದ ‘ತೆರೆದ ಮನೆ’

Pinterest LinkedIn Tumblr

Child_line_photo_1

ಮಂಗಳೂರು,ಆಗಸ್ಟ್.27 : ಚೈಲ್ಡ್‌ಲೈನ್-1098  ಮಂಗಳೂರು ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ದಿನದ 24 ಗಂಟೆಯೂ ದೂರವಾಣಿ ಮೂಲಕ ಸೇವೆಯನ್ನು ನೀಡುತ್ತಿರುವ ಬಗ್ಗೆ ಸಮುದಾಯದ ಜನರಲ್ಲಿ ಜಾಗೃತಿ ಮೂಡಿಸುವ `ತೆರೆದ ಮನೆ’ ಕಾರ್ಯಕ್ರಮವನ್ನು ಅಂಗನವಾಡಿ ಕೇಂದ್ರ, ಸ್ವ-ಸಹಾಯ ಹಾಗೂ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ದ.ಕ.ಹಿ.ಪ್ರಾ.ಶಾಲೆ ಪಾಂಡೇಶ್ವರ ಮಂಗಳೂರು ಇಲ್ಲಿ ಹಮ್ಮಿಕೊಳ್ಳಲಾಯಿತು.

ಮಕ್ಕಳಿಂದ ಹಾಗೂ ಆಗಮಿಸಿದ ಅತಿಥಿಗಳಿಂದ ಚೈಲ್ಡ್‌ಲೈನ್‌ನ ಭಿತ್ತಿ ಪತ್ರವನ್ನು ಪ್ರದರ್ಶಿಸುವ ಮೂಲಕ ಉದ್ಘಾಟಿಸಲಾಯಿತು. ಪ್ರಾಸ್ತಾವಿಕವಾಗಿ ಚೈಲ್ಡ್‌ಲೈನ್-1098 ರ ಕೇಂದ್ರ ಸಂಯೋಜನಾಧಿಕಾರಿಯಾದ ಶ್ರೀ ಸಂಪತ್ ಕಟ್ಟಿರವರು ಮಾತುಗಳನ್ನಾಡುತ್ತಾ, ತೊಂದರೆಯಲ್ಲಿರುವ ಮಕ್ಕಳ ರಕ್ಷಣೆಗಾಗಿ ಸಾರ್ವಜನಿಕರು ಚೈಲ್ಡ್‌ಲೈನ್ -1098ಗೆ ದೂರವಾಣಿ ಕರೆಯನ್ನು ಮಾಡಿ ದೂರು ನೀಡಬಹುದು, ದಿನದ 24 ಗಂಟೆಯೂ ಕಾರ್ಯನಿರತವಾಗಿರುತ್ತದೆ ಎಂದ ಅವರು, ಮಕ್ಕಳ ಸಹಾಯವಾಣಿಯ ಕಾರ್ಯಚಟುವಟಿಕೆಯನ್ನು ಮತ್ತು ಮಕ್ಕಳ ಹಕ್ಕುಗಳ ಬಗ್ಗೆ ಹಾಗೂ ತೆರೆದ ಮನೆ ಕಾರ್ಯಕ್ರಮದ ಪ್ರಾಮುಖ್ಯತೆ ಹಾಗೂ ಅದರ ಕಾರ್ಯ ಚಟುವಟಿಕೆಗಳ ಕುರಿತು ಪ್ರಮುಖ ಅಂಶಗಳನ್ನು ವಿವರಿಸಿದರು.

Child_line_photo_2 Child_line_photo_3 Child_line_photo_4

ಕಾರ್ಯಕ್ರಮಕ್ಕೆ ಆಗಮಿಸಿದ ಮಂಗಳೂರು ಆರೋಗ್ಯ ಇಲಾಖೆಯ ಮಂಗಳೂರು ಪ್ರಭಾರ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿಯವರು ಮಾತನಾಡುತ್ತ ಮಲೇರಿಯಾ ರೋಗ ಹರಡದಂತೆ, ಮುಂಜಾಗ್ರತೆಯಾಗಿ, ಪರಿಸರದ ಸ್ವಚ್ಛತೆಯನ್ನು ಹೆಣ್ಣುಮಕ್ಕಳು ವೈಯಕ್ತಿಕ ಸ್ವಚ್ಚತೆಯನ್ನು ಕಾಪಾಡುವುದರ ಮೂಲಕ ಆರೋಗ್ಯವಂತ ಕುಟುಂಬ ಜೀವನ ಹಾಗೂ ಮಕ್ಕಳನ್ನು ಸಮಾಜಕ್ಕೆ ನೀಡಬೇಕೆಂದು ತಿಳಿಸಿದರು.

ಮಲೇರಿಯಾ ಸೊಳ್ಳೆ ಎಲ್ಲಿ ಯಾವ ರೀತಿ ಉತ್ಪತ್ತಿಯಾಗುತ್ತದೆ, ಅದರ ನಿಯಂತ್ರಣವನ್ನು ಯಾವ ರೀತಿ ಮಾಡಬೇಕೆಂಬುದರ ಬಗ್ಗೆ, ಮತ್ತು ಈಗಿನ ಮಕ್ಕಳು ಡ್ರಗ್ಸ ಹಾಗೂ ಮಾದಕ ವ್ಯಸನಕ್ಕೆ ಬಲಿಯಾಗುತ್ತಾರೆ.ಮಕ್ಕಳಹೆತ್ತವರು ಇದರ ಬಗ್ಗೆ ಜಾಗರುಕತೆ ವಹಿಸಬೇಕು ಎಂದು ತಿಳಿಸಿದರು. ಶಿಕ್ಷಣ ಇಲಾಖೆಯ ಕುರಿತು ಕ್ಷೇತ್ರ ಶಿಕ್ಷಣ ವಲಯ ಸಂಪನ್ಮೂಲ ವ್ಯಕ್ತಿಯಾದ ಶ್ರೀಮತಿ ವಿಜಯಲಕ್ಷ್ಮಿ ಶಿಕ್ಷಣ ಹಾಗೂ ಶಿಕ್ಷಣ ಇಲಾಖೆಯಿಂದ ಇರುವ ಸವಲತ್ತುಗಳ ಕುರಿತು. ನಗರ ಪ್ರಭಾರ ಶಿಶು ಯೋಜನಾಭಿವೃದ್ಧಿ ಇಲಾಖೆಯಿಂದ ಯೋಜನಾಭಿವೃದ್ಧಿ ಅಧಿಕಾರಿಯಾದ ಶ್ರೀಮತಿ ಗುಲಾಬಿಯವರು ಮಾತನಾಡುತ್ತಾ ಮಹಿಳೆಯರು ಮಕ್ಕಳ ಪಾಲನೆ ಪೋಷಣೆ ಬಗ್ಗೆ ಎಚ್ಚರವಹಿಸಬೇಕು ಎನ್ನುತ್ತ, ಇಲಾಖೆಯಿಂದ ಮಕ್ಕಳಿಗೆ ಹಾಗೂ ಮಹಿಳೆಯರಿಗೆ ಇರುವ ಸವಲತ್ತುಗಳ ಮಾಹಿತಿಯನ್ನು ತಿಳಿಸಿದರು.

ಅಪರಾಧಗಳು ನಡೆದಾಗ ಹಾಗೂ ಸಂಶಯಿತ ವ್ಯಕ್ತಿಗಳು ತಮ್ಮ ಪರಿಸರದಲ್ಲಿ ಕಂಡುಬಂದಾಗ ತಕ್ಷಣ ಜನಸಾಮಾನ್ಯರು ಪೊಲೀಸ್ ಇಲಾಖೆಗೆ ಮಾಹಿತಿಯನ್ನು ನೀಡುವಂತೆ, ಜನಸ್ನೇಹಿ ಪೊಲೀಸ್ ವ್ಯವಸ್ಥೆ ಜಾರಿಯಾಗಿದ್ದು, ಮಕ್ಕಳನ್ನು ಒಳ್ಳೆಯ ರೀತಿಯಲ್ಲಿ ನೋಡಬೇಕು ಎಂದ ಅವರು, ಸಮಸ್ಯೆಗಳು ಬಂದಾಗ ಮಕ್ಕಳು ಮಹಿಳೆಯರು ಭಯವ ಮುಕ್ತರಾಗಿ ನೇರವಾಗಿ ಪೊಲೀಸ್ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸುವಂತೆ, ಪಾಂಡೇಶ್ವರ ಪೊಲೀಸ್ ಠಾಣೆಯ, ಸಹಾಯಕ ಪೊಲೀಸ್ ಉಪನಿರೀಕ್ಷಕರಾದ ಶ್ರೀಮತಿ ಮಂಜುಳಾರವರು ತಿಳಿಸಿದರು. ಸರಕಾರದಿಂದ ಮಕ್ಕಳಿಗಿರುವ ಸವಲತ್ತುಗಳು, ಮಕ್ಕಳ ಕಾವಲು ಸಮಿತಿ, ಮಕ್ಕಳ ಹಕ್ಕುಗಳು, ಮಹಿಳೆಯರ, ಮಕ್ಕಳ ಮಾರಾಟ ಹಾಗೂ ಸಾಗಾಣೆ, ಮಗುವನ್ನು ದತು ಸ್ವೀಕಾರ ಮಾಡುವ ಬಗ್ಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಮಕ್ಕಳ ರಕ್ಷಣಾಧಿಕಾರಿ ಶ್ರೀ ಕುಮಾರ್ ಶೆಟ್ಟಿಗಾರ್‌ರವರು ವಿವರವಾದ ಮಾಹಿತಿ ನೀಡಿದರು,

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಹಿರಿಯ ನಾಗರಿಕರ ಸೇವಾ ಸಮಿತಿಯ ಸದಸ್ಯರಾದ ಶ್ರೀ ಕೆ.ಶಿವಾನಂದ ಕರ್ಕೆರ ಇವರು ಮಾತನಾಡುತ್ತ ಮಕ್ಕಳು ಗುರುಹಿರಿಯರಿಗೆ ವಿಧೆಯರಾಗಿ ನಡೆದುಕೊಳ್ಳಬೇಕು. ಮಕ್ಕಳು ವಿಧ್ಯಾಭ್ಯಾಸದ ಕಡೆಗೆ ಹೆಚ್ಚಿನ ಸಮಯವನ್ನು ನೀಡಬೇಕು. ಸಾಮಾಜಿಕ ಜಾಲತಾಣಗಳ ಮೊಹಕ್ಕೆ ಒಳಗಾಗದೆ, ಒಳ್ಳೆಯ ಮೌಲ್ಯಗಳ ಕಡೆಗೆ ಗಮನ ನೀಡಬೇಕು ಎಂದು ಮಕ್ಕಳಿಗೆ ತಿಳಿಸಿದರು.

ಕಾರ್ಯಕ್ರಮಕ್ಕೆ ಆಗಮಿಸಿದ ಸ್ಥಳೀಯ ವಾರ್ಡಿನ ಸದಸ್ಯರಾದ ಶ್ರೀ ಅಬ್ದುಲ್ ಲತೀಫ್ ಇವರು ಮಾತನಾಡುತ್ತ ಚೈಲ್ಡ್‌ಲೈನ್-1098ರ ಕಾರ್ಯಗಳನ್ನು ಶ್ಲಾಘಿಸುತ್ತ, ವಾರ್ಡಿಗೆ ಸಂಬಂಧಿಸಿದ ಯಾವೂದೇ ಸಮಸ್ಯೆಗಳಿದ್ದರು ನನ್ನ ಗಮನಕ್ಕೆ ತಂದಲ್ಲಿ ಅವುಗಳನ್ನು ನಿವಾರಿಸುವತ್ತ ನನ್ನ ಶಕ್ತಿ ಮೀರಿ ಪ್ರಯತ್ನ ಮಾಡುವುದ್ದಾಗಿ ತಿಳಿಸಿದರು.

ಕಾರ್ಯಕ್ರಮದ ಪ್ರಾರಂಭದಲ್ಲಿ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕುರಿತು ‘ಕೋಮಲ್’ ಎಂಬ ಸಾಕ್ಷ್ಯ ಚಿತ್ರವನ್ನು ಪ್ರದರ್ಶಿಸಲಾಯಿತು. ಶಾಲಾ ಅಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಅಧ್ಯಕ್ಷರಾದ ಶ್ರೀ ದಿನೇಶ್ ಪಿ.ಎಸ್, ಬಾಲಾ ವಿಕಾಸ ಸಮಿತಿ ಸದಸ್ಯರಾದ ಶ್ರೀ ಮುನೀರ್ ಅಹಮದ್, ಶಾಲಾ ಶಿಕ್ಷಕರು, ಅಂಗನವಾಡಿ ಶಿಕ್ಷಕರು ಹಾಗೂ ಚೈಲ್ಡ್ ಲೈನ್ ಸಿಬಂದಿಗಳು ಉಪಸ್ಥಿತರಿದ್ದರು

ಚೈಲ್‌ಲೈನ್-1098 ತಂಡ ಸದಸ್ಯೆಯಾದ ಕು ಪವಿತ್ರ ಜ್ಯೋತಿಗುಡ್ಡೆಯವರು ಚೈಲ್ಡ್‌ಲೈನ್‌ನ ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟರು, ಶಾಲಾ ಮುಖ್ಯೋಪಾದ್ಯಯ ರಾದ ಶ್ರೀಮತಿ ವನಮಾಲ ಸ್ವಾಗತಿಸಿ, ಚೈಲ್ಡ್‌ಲೈನ್ ತಂಡ ಸದಸ್ಯೆಯಾದ ಜಯಂತಿ ಕೊಕಳ ವಂದಿಸಿ, ತಂಡ ಸದಸ್ಯೆಯಾದ ರೇವತಿಯವರು ಕಾರ್ಯಕ್ರಮವನ್ನು ಸಂಘಟಿಸಿ, ನಿರೂಪಿಸಿದರು.

Write A Comment