ಕನ್ನಡ ವಾರ್ತೆಗಳು

ಅತ್ತಾವರ ಹಲ್ಲೆ ಪ್ರಕರಣ | ಆರೋಪಿಗಳು ಯಾವೂದೇ ಧರ್ಮದವರಾದರೂ ಅವರ ವಿರುದ್ದ ಕಠಿಣ ಕಾನೂನು ಕ್ರಮ : ಶಾಸಕ ಲೋಬೋ

Pinterest LinkedIn Tumblr

Lobo_Visit_hospital_1

ಮಂಗಳೂರು: ಈಝೀ ಡೇ ಸೂಪರ್ ಮಾರ್ಕೇಟ್‌ನ ಸಹೊದ್ಯೋಗಿಯನ್ನು ( ಅನ್ಯ ಕೋಮಿನ ಯುವತಿಯನ್ನು) ಕಾರಿನಲ್ಲಿ ಬಿಡುವ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಸಂಜೆ ಅತ್ತಾವರದಲ್ಲಿ ನಡೆದ ಹಲ್ಲೆ ಪ್ರಕರಣದಲ್ಲಿ ಗಾಯಗೊಂಡು ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಾಕೀರ್ ನನ್ನು ಮಂಗಳೂರು ದಕ್ಷಿಣ ವಿಧಾನ ಸಭಾದ ಶಾಸಕ ಜೆ. ಆರ್. ಲೋಬೋ ಅವರು ಮಂಗಳವಾರ ಅಸ್ಪತ್ರೆಯಲ್ಲಿ ಭೇಟಿ ನೀಡಿ, ಅರೋಗ್ಯ ವಿಚಾರಿಸಿದರು.

Lobo_Visit_hospital_2

ಕಾನೂನು ಕೈಗೆತ್ತಿಕೊಂಡವರ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಲು ಪೋಲಿಸರಿಗೆ ತೀಳಿಸಿರುವುದಾಗಿ ಈ ಸಂದರ್ಭದಲ್ಲಿ ಶಾಸಕರು ಹೇಳಿದರು. ಇಂತಹ ಅಹಿತಕರ ಘಟನೆಯಿಂದ ಮಂಗಳೂರಿನ ಹೆಸರು ಕೇಡುವುದಲ್ಲದೆ, ಸೌಹರ್ದಯುತ ವಾತವರಣಕ್ಕೆ ದಕ್ಕೆ ಬರುವ ಕ್ರತ್ಯಗಳು ಖಂಡನಿಯ. ಈ ಅಮಾನವೀಯ ಘಟನೆ ಕೇಳಿ ನನಗೆ ತುಂಬಾ ದುಃಖವಾಗಿದೆ ಎಂದರು.

Babugudde_Morl_Police_1

ವಿದ್ಯವಂತರಿರುವ ಈ ಜಿಲ್ಲೆಯಲ್ಲಿ, ಕೆಲವೆ ಕೆಲವು ವ್ಯಕ್ತಿಗಳು ಈ ರೀತಿ ದುಷ್ಕ್ರತ್ಯ ವೇಸಗಿ ನಗರದ ಹೆಸರನ್ನು ಕೇಡಿಸು ಪ್ರಯತ್ನ ಮಾಡುತ್ತಿದ್ದಾರೆ. ಈ ಕ್ರತ್ಯವನ್ನು ಹೇಸಗಿರುವ, ಯಾವುದೆ ಧರ್ಮದವರಾಗಿದ್ದರು, ಅವರ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮಾದ್ಯಮ ಪ್ರತಿನಿಧಿಗಳಲ್ಲಿ ಶಾಸಕರು ತಿಳಿಸಿದರು.

Write A Comment