ಕನ್ನಡ ವಾರ್ತೆಗಳು

ರಂಗ ಸಂಸ್ಕೃತಿ ಬದುಕಿಗೆ ದಾರಿದೀಪ: ಕಾಸರಗೋಡು ಚಿನ್ನಾ

Pinterest LinkedIn Tumblr

Rang_tarni_photo_1

ಮಂಗಳೂರು,ಆಗಸ್ಟ್.25 : ರಂಗ ಸಂಸ್ಕೃತಿ ಎನ್ನುವುದು ಒಂದು ಜೀವನದ ಪದ್ದತಿ, ಮಕ್ಕಳಲ್ಲಿ ಸುಕ್ತವಾಗಿ ಅಡಗಿದ ಪ್ರತಿಭೆಗಳನ್ನು ಬೆಳಕಿಗೆ ತರುವಲ್ಲಿ ಇದು ಸಹಕಾರಿಯಾಗುತ್ತದೆ. ಉತ್ತಮ ಧ್ವನಿಯನ್ನು ಹೊಂದುವುದರ ಮುಖಾಂತರ ಕೊನೆಯ ಸಾಲಿನಲ್ಲಿ ಇರುವವರನ್ನು ತಲುಪುವುದರ ಜೊತೆಗೆ ಆತ್ಮಸ್ಥೈರ್ಯ ನೀಡಲು ನೆರೆವಾಗುತ್ತದೆ. ಶಾಲಾಮಟ್ಟದಲ್ಲಿ ಇಂತಹ ರಂಗ ಸಂಸ್ಕೃತಿಯನ್ನು ಕಲಿಯುವುದರಿಂದ ರಂಗಕಲೆಯನ್ನು ಮೈಗೂಡಿಸಿಕೊಂಡಂತಾಗುತ್ತದೆ ಎಂದು ಶಿಭಿರದ ನಿರ್ದೇಶಕ ಹಾಗೂ ರಂಗನಟ/ನಿರ್ದೇಶಕ ಕಾಸರಗೋಡು ಚಿನ್ನಾ ಹೇಳಿದರು.

ಶ್ರೀಯುತರು ಭಾನುವಾರ ಸಂಜೆ 4.30ಕ್ಕೆ ಹಿರಿಯಡಕದ ಸ.ಪ.ಪೂ ಕಾಲೇಜಿನ ಪ್ರೌಢ ಶಾಲಾ ಮಕ್ಕಳಿಗಾಗಿ ನಡೆದ ಎರಡು ದಿನದ ‘ರಂಗ ಸಂಸ್ಕೃತಿ’ ಕಾರ್ಯಗಾರದ ಸಮಾರೋಪ ಸಮಾರಂಭದಲ್ಲಿ ಶಿಭಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತಿದ್ದರು. ಇದನ್ನು ರೋಟರಿ ಕ್ಲಬ್ ಮಣಿಪಾಲ ಟೌನ್, ಮಣಿಪಾಲ ಇದರ ಪ್ರಾಯೋಜಕತ್ವದಲ್ಲಿ ಪಳ್ಳಿ ಶ್ರೀನಿವಾಸ ಹೆಗ್ಡೆ ಚಾರಿಟೇಬಲ್ ಟ್ರಸ್ಟ್, ಕೋಟ್ನಕಟ್ಟೆ ಫ್ರೆಂಡ್ಸ್ ಸರ್ಕಲ್-ಹಿರಿಯಡಕ, ರಂಗಚಿನ್ನಾರಿ-ಕಾಸರಗೋಡು ಮತ್ತು ರಂಗಭೂಷಣ-ಮಣಿಪಾಲ ಇವರುಗಳ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿತ್ತು. ಸಂಪನ್ಮೂಲ ವ್ಯಕ್ತಿಗಳಾಗಿ ಕ್ರಿಸ್ಟೋಫರ್, ಪ್ರಕಾಶ್ ನಾಯಕ್, ಸುಹಾಸ್ ರಾವ್, ವೆಂಕಟೇಶ್ ಶೇಟ್, ವಸಂತ ರಾವ್ ಇವರುಗಳು ಚಿನ್ನಾರವರ ಕೈಜೋಡಿಸಿದ್ದರು.

Rang_tarni_photo_2

ಕಾರ್ಯಕ್ರಮದ ಮುಖ್ಯ ಅತಿಥಿ ಕುಯಿಲಾಡಿ ಸುರೇಶ್ ನಾಯಕ್ “ಶಿಬಿರದಲ್ಲಿ ಕಲಿತದನ್ನು ನಿರಂತರ ಅಭ್ಯಸಿಸುವುದರ ಮುಖೇನ ಉತ್ತಮ ಕಲಾವಿದರುಗಳಾಗಿ” ಎಂದು ಮಕ್ಕಳಿಗೆ ಹಾರೈಸಿದರು.

ಇನ್ನೊರ್ವ ಮುಖ್ಯ ಅತಿಥಿ ನೃತ್ಯ ವಿಧುಷಿ ಮಂಗಳಾ ದೇವಾಡಿಗ ಇವರು “ಶ್ರದ್ದೆ, ಭಕ್ತಿ ಮತ್ತು ತಾಳ್ಮೆ ಈ ಮೂರು ಕಲೆಗಳನ್ನು ಬಾಲ್ಯದಲ್ಲಿಯೇ ಮ್ಯಗೂಡಿಸಿಕೊಂಡರೆ ಜೀವನದಲ್ಲಿ ಸಾಧನೆಮಾಡುವುದು ಸುಲಭ” ಎಂದು ವಿಧ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಪಳ್ಳಿ ಶ್ರೀನಿವಾಸ ಹೆಗ್ಡೆ ಚಾರಿಟೇಬಲ್ ಟ್ರಸ್‍ನ ಕಾರ್ಯದರ್ಶಿ ನಟರಾಜ ಹೆಗ್ಡೆ ಇವರು “ಗ್ರಾಮೀಣ ಪ್ರತಿಭೆಗಳಿಗೆ ರಂಗ ಸಂಸ್ಕೃತಿಯನ್ನು ಕಳಿಸಿ ನಿಜವಾದ ಅರ್ಥದಲ್ಲಿ ಸರಸ್ವತಿಯ ಸೇವೆಮಾಡಿದ್ದಾರೆ” ಎಂದು ಹೇಳಿದರು, ರಂಗ ಭೂಷಣ ಸಂಸ್ಥೆಯ ಶಶಿಭೂಷಣ್ ಕಿಣಿ ತೋನ್ಸೆ ಮಕ್ಕಳ ರಂಗ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿದರು. ಹಾಗೂ ಇದೇ ಸಂಧರ್ಭದಲ್ಲಿ ಉಪಸ್ಥಿತರಿದ್ದ ರೋಟರಿ ಜಿಲ್ಲಾ 3180 ಇದರ ಕಾರ್ಯದರ್ಶಿ ರೊ. ಬಾಲಕೃಷ್ಣ ಮದ್ದೋಡಿ ರೋಟರಿ ಸಂಸ್ಥೆ ದೇಶದ ಸಂಸ್ಕøತಿಯನ್ನು ಉಳಿಸಲು ಮತ್ತು ಬೆಳೆಸಲು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿಬರುತ್ತಿದೆ ಎಂದು ಹೇಳಿದರು.

ರೊ. ಡಾ. ಸೇಸಪ್ಪ ಎ ರೈ ಇವರ ಅಧ್ಯಕ್ಷತಯಲ್ಲಿ ನಡೆದ ಈ ಸಮಾರಂಭದಲ್ಲಿ, ರೊ.ಪ್ರಜ್ವಲ್ ಕುಮಾರ್ ಟಿ ಸ್ವಾಗತಗೈದು, ವಿದ್ಯಾರ್ಥಿಗಳಾದ ಮಧುಶ್ರೀ ಮತ್ತು ಸಂಗಡಿಗರು ಪ್ರಾರ್ಥನೆಗೈದರು. ರಾಘವೇಂದ್ರ ಜಿ ಹಿರಿಯಡಕ ಧನ್ಯವಾದ ಸಮರ್ಪಿಸಿ, ಬಾಲಕೃಷ್ಣ ಬಿ ಕೆ ಕಾರ್ಯಕ್ರಮವನ್ನು ನಿರೂಪಿಸಿದರು. ಮೋಹನ್ ಕಡಬ, ಗುರುನಾಥ ಶೆಟ್ಟಿ, ಶ್ರೀನಿವಾಸ ರಾವ್, ದಿವಾಕರ ಭಂಡಾರಿ ಇವರುಗಳು ಸಹಕರಿಸಿದರು.

ಶಿಭಿರಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು, ಮಕ್ಕಳು ಮಾಡಿಟ್ಟ ಮುಖವಾಡಗಳು, ಅವರ ಪ್ರಸಾದನ ಮತ್ತು ಸಭೆಯಲ್ಲಿ ಮಕ್ಕಳು ತೋರಿದ ದ್ವನಿ ಪರಿಚಯಗಳು ಕಾರ್ಯಗಾರದ ಯಶಸ್ಸಿನ ಸಾಕ್ಷಿಗಳಾಗಿದ್ದವು.ಶಿಭಿರಾರ್ಥಿಗಳ ಪ್ರಹಸನ, ಮೂಕಾಭಿನಯ ಅತ್ಯಂತ ವಿಭಿನ್ನವಾಗಿ ಮೂಡಿಬಂದವು.

Write A Comment