ಕನ್ನಡ ವಾರ್ತೆಗಳು

‘ಬಂಟ್ವಾಳದಲ್ಲೊಂದು ವಿನೂತನ ಶೈಲಿಯ “ತೆಂಗು ಪಾರ್ಕ್‌” ಆರಂಭ.

Pinterest LinkedIn Tumblr

coconut-tree

ಬಂಟ್ವಾಳ,ಆಗಸ್ಟ್.17 : ತೆಂಗು ಅಭಿವೃದ್ಧಿ ಮಂಡಳಿ ವತಿಯಿಂದ ನೂತನವಾಗಿ ರಚನೆಗೊಂಡ ನೀರಾ ಮೂರ್ತೆದಾರರ ಮತ್ತು ತೆಂಗು ಉತ್ಪಾದಕರ ಫೆಡರೇಶನ್ ನ್ನು  ಬಿ.ಸಿ.ರೋಡ್‌ನಲ್ಲಿ ಆರಂಭಿಸಲು ನಿರ್ಧರಿಸಿದ್ದು ಇದರ ಉದ್ಘಾಟನೆಯನ್ನು ಸಂಸದ ನಳಿನ್ ಕುಮಾರ್ ಕಟೀಲ್ ನೆರೆವೇರಿಸಿದ್ದರು.

ಬಳಿಕ ಮಾತನಾಡಿದ ಅವರು ತೆಂಗು ಉತ್ಪನ್ನಗಳಿಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಇರುವ ಕಾರಣ ಮುಂದಿನ ದಿನಗಳಲ್ಲಿ ತೆಂಗು ಲಾಭದಾಯಕ ಕೃಷಿ ಯಾಗಿ ಪರಿವರ್ತನೆಯಾಗಲಿದೆ ಎಂದರು.

ಪ್ರಗತಿಪರ ಕೃಷಿಕ ಉಳಿಪಾಡಿಗುತ್ತು ರಾಜೇಶ್ ನಾಯ್ಕ್ ಮಾತನಾಡಿ, ತೆಂಗು ಕೃಷಿಯಿಂದ ಲಾಭದಾಯಕ ಉದ್ಯಮ ಆರಂಭಿಸಲು ಸಾಧ್ಯವಿದೆ ಎಂದರು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಯಶವಂತ ಡಿ. ಅಧ್ಯಕ್ಷತೆ ವಹಿಸಿದ್ದರು.

ಸಹಕಾರ ಭಾರತಿ ಅಧ್ಯಕ್ಷ ಜಯ ಶಂಕರ ಬಾಸ್ರಿತ್ತಾಯ, ಕ್ಷೇತ್ರ ಬಿಜೆಪಿ ಸಮಿತಿ ಅಧ್ಯಕ್ಷ ಜಿ.ಆನಂದ, ಶಂಭೂರುಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪುರುಷೋತ್ತಮ ಸಾಲ್ಯಾನ್, ಎಪಿಎಂಸಿ ಅಧ್ಯಕ್ಷ ಸಾಂತಪ್ಪ ಪೂಜಾರಿ, ಜಿಲ್ಲಾ ಪಂಚಾಯಿತಿ ಸದಸ್ಯ ರಾದ ಸಂತೋಷ್‌ ಕುಮಾರ್ ರೈ ಬೋಳಿ ಯಾರ್, ನಳಿನಿ ಬಿ.ಶೆಟ್ಟಿ, ನರಿಕೊಂಬು ಗ್ರಾಮ ಪಂಚಾಯಿತಿ ಅಧ್ಯಕ್ಷ ಯಶೋಧರ ಕರ್ಬೆಟ್ಟು, ಉಡುಪಿ ತೋಟಗಾರಿಕಾ ಸಹಾಯಕ ನಿರ್ದೇಶಕ ಸಂಜೀವ ನಾಯ್ಕ, ಬಂಟ್ವಾಳ ತೋಟಗಾರಿಕಾ ಸಹಾಯಕ ನಿರ್ದೇಶಕ ದಿನೇಶ್, ಸಂಘದ ಪ್ರಮುಖ ರಾದ ಜನಾರ್ದನ ಕುಲಾಲ್ ಮೊದಲಾದವರು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.

Write A Comment