ಕನ್ನಡ ವಾರ್ತೆಗಳು

ಆರು ದಿನ ಕಳೆದರೂ ಗಂಗೊಳ್ಳಿ ಅಳಿವೆಯಲ್ಲಿ ಬಿದ್ದ ಜಾನುವಾರು, ಹಂದಿಯ ಕಳೇಬರ ವಿಲೇವಾರಿ ಮಾಡದ ಪಂಚಾಯತ್

Pinterest LinkedIn Tumblr

ಕುಂದಾಪುರ: ಗಂಗೊಳ್ಳಿ ಬಂದರಿನ ಅಳಿವೆ ಬಾಗಿಲನ ಸಮೀಪ ಕಡಲ ತೀರದಲ್ಲಿ ಮೃತ ಜಾನುವಾರು ಹಾಗೂ ಹಂದಿಯ ಅವಶೇಷ ಪತ್ತೆಯಾಗಿ ಆರು ದಿನಗಳು ಕಳೆದರೂ ಅದನ್ನು ವಿಲೇವಾರಿ ಮಾಡದ ಗಂಗೊಳ್ಳಿ ಗ್ರಾಮಪಂಚಾಯತ್ ಬೇಜವಬ್ದಾರಿತನದ ವಿರುದ್ಧ ಸ್ಥಳೀಯರು ಆಕ್ರೋಷ ವ್ಯಕ್ತಪಡಿಸಿದ್ದಾರೆ.

Gangolli_Animal_Dead body (2) Gangolli_Animal_Dead body (1) Gangolli_Animal_Dead body (3) Gangolli_Animal_Dead body (4) Gangolli_Animal_Dead body (5)

ಕಳೆದ ಬುಧವಾರದಂದು ಅಳಿವೆ ಬಾಗಿಲಿನ ಕಡಲ ತೀರದಲ್ಲಿ ಮೃತ ಜಾನುವಾರುವೊಂದರ ಮತ್ತು ಹಂದಿಯ ಅವಶೇಷ ಹಾಗೂ ಗಂಗೊಳ್ಳಿಯ ಬಂದರಿನ ಬೇಲಿಕೇರಿ ಸಮೀಪ ಕಡಲ ತೀರದಲ್ಲಿ ಬೃಹತ್ ಗಾತ್ರದ ತಿಮಿಂಗಿಲದ ಕಂಡು ಬಂದಿದ್ದು ಈ ಬಗ್ಗೆ ಸ್ಥಳೀಯರು ಅಂದೇ ಪಂಚಾಯತ್ ಗಮನಕ್ಕೆ ತಂದರೂ ಕೂಡ ನಿರ್ಲಕ್ಷಿಸಿದ ಪಂಚಾಯತ್ ಮೂರು ದಿನಗಳ ಬಳಿಕ ಬೇಲಿಕೇರಿ ತೀರದಲ್ಲಿ ಬಿದ್ದ ಬೃಹತ್ ತಿಮಿಂಗಿಲದ ವಿಲೇವಾರಿ ಕಾರ್ಯ ಮಾಡಿತ್ತು. ಆದರೇ ಆರು ದಿನಗಳು ಕಳೆದರೂ ಹಂದಿ ಹಾಗೂ ಕೋಣದ ಕಳೇಬರದ ವಿಲೇವಾರಿ ಮಾಡದ ಪಂಚಾಯತ್ ನೀರ್ಲ್ಯಕ್ಷ್ಯ ವಹಿಸಿದೆ.

ಕೊಳೆತು ದುರ್ನಾತ: ಆರು ದಿನಗಳು ಕಳೆದ ಎರಡು ಕಳೇಬರಹಗಳು ಸಂಪೂರ್ಣ ಕೊಳೆತಿದ್ದು ಸ್ಥಳೀಯ ಪರಿಸರದಲ್ಲಿ ದುರ್ನಾತ ಬೀರುತ್ತಿದೆ. ಇನ್ನು ಈಗಾಗಲೇ ಮೀನುಗಾರಿಕೆ ಆರಂಭವಾಗಿದ್ದು ಗಂಗೊಳ್ಳಿ ಬಂದರಿಗೆ ದಿನಂಪ್ರತಿ ಸಾವಿರಾರು ಜನರು ಬರುತ್ತಾರೆ. ಸ್ಥಳೀಯರ ಮೀನುಗಾರರು ಸೇರಿದಂತೆ ಇಲ್ಲಿಗೆ ಬರುವವರೆಲ್ಲರೂ ಈ ಸಮಸ್ಯೆಯಿಂದ ಪರಿತಪಿಸುವಂತಾಗಿದೆ.

Write A Comment