ಮಂಗಳೂರು/ಮೂಲ್ಕಿ,ಆಗಸ್ಟ್.17: ಮಹಿಳೆಯ ಸ್ಥಾನಮಾನದ ಗೌರವವು ಸಮಾಜದಲ್ಲಿ ಆಕೆಯ ಜವಬ್ದಾರಿಯನ್ನು ಹೆಚ್ಚಿಸಿದೆ, ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಉಳಿಸುವಲ್ಲಿ ಮಹಿಳೆಯು ಸಹ ತನ್ನದೇ ಆದ ಕೊಡುಗೆಯನ್ನು ಕುಟುಂಬದ ಒತ್ತಡದ ನಡುವೆಯು ನೀಡುತ್ತಿದ್ದಾಳೆ ಅದರಿಂದ ಆಕೆ ಎಂದಿಗೂ ವಿಮುಖಳಾಗ ಬಾರ ದು ಎಂದು ಲಯನ್ಸ್ ಕ್ಲಬ್‌ನ ಜಿಲ್ಲಾ ರಾಜ್ಯಪಾಲೆ ಎಂ.ಕವಿತಾ ಶಾಸ್ತ್ರಿ ಹೇಳಿದರು.
ಅವರು ಹಳೆಯಂಗಡಿಯ ಬ್ರಹ್ಮಶ್ರೀ ನಾರಾಯಣ ಗುರು ಸಭಾಗೃಹದಲ್ಲಿ ಬಿಲ್ಲವ ಸಮಾಜ ಸೇವಾ ಸಂಘ ಮತ್ತು ಯುವವಾಹಿನಿ ಘಟಕದ ಜಂಟಿ ಸಂಯೋಜನೆ ಯಲ್ಲಿ ಭಾನುವಾರ ನಡೆದ `ಆಟಿದ ತಿರ್ಲ್’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಗಣೇಶ್ ಜಿ. ಬಂಗೇರ ಅಧ್ಯಕ್ಷತೆಯನ್ನು ವಹಿಸಿದ್ದರು.ಕಲಾವಿದ ದಿನೇಶ್ ಅತ್ತಾವರ ಮತ್ತು ಪತ್ರಕರ್ತ ನರೇಶ್ ಸಸಿಹಿತ್ಲು ಆಷಾಢ ಮಾಸದ ಬಗ್ಗೆ ವಿಶೇಷವಾಗಿ ಮಾತನಾಡಿದರು.
ಮೂಲ್ಕಿ ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷ ಜಯ ಸಿ. ಸುವರ್ಣ ಮತ್ತು ಸಸಿಹಿತ್ಲು ಶ್ರಿ ಭಗವತೀ ಕ್ಷೇತ್ರದ ಧರ್ಮದರ್ಶಿ ಅಪ್ಪು ಯಾನೆ ಶ್ರಿನಿವಾಸ ಪೂಜಾರಿಯವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.
ಲಯನ್ಸ್ ಸಂಸ್ಥೆಯ ಮಾಜಿ ಜಿಲ್ಲಾ ರಾಜ್ಯಪಾಲ ಸಂತೋಷ್‌ಕುಮಾರ್ ಶಾಸ್ತ್ರಿ ಮತ್ತು ಮೂಲ್ಕಿ ಪ್ರೆಸ್ ಕ್ಲಬ್‌ನ ಅಧ್ಯಕ್ಷ ನರೇಂದ್ರ ಕೆರೆಕಾಡುರವರನ್ನು ಗೌರವಿಸ ಲಾಯಿತು. ಮಂಗಳೂರಿನ ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಪ್ರೇಮ್‌ನಾಥ್ ಕೆ., ಲಯನ್ಸ್ ಕ್ಲಬ್‌ನ ಪ್ರಾಂತೀಯ ಅಧ್ಯಕ್ಷ ಯಾದವ ದೇವಾಡಿಗ, ಹಳೆಯಂಗಡಿ ಬಿಲ್ಲವ ಸಂಘದ ಕಟ್ಟಡ ಸಮಿತಿಯ ಅಧ್ಯಕ್ಷ ಮೋಹನ್ ಎಸ್. ಸುವರ್ಣ, ಯುವವಾಹಿನಿ ಹಳೆಯಂಗಡಿ ಘಟಕದ ಅಧ್ಯಕ್ಷ ಉಮೇಶ್ ಪೂಜಾರಿ ಉಪಸ್ಥಿತರಿದ್ದರು.
ಜಾನಪದ ವಿದ್ವಾಂಸ ಡಾ.ಗಣೇಶ್ ಅಮಿನ್ ಸಂಕಮಾರ್ ಪ್ರಸ್ತಾವನೆಗೈದು ಸ್ವಾಗತಿಸಿದರು, ಬಿಲ್ಲವ ಸಂಘದ ಕಾರ್ಯದರ್ಶಿ ಎಚ್. ಭಾಸ್ಕರ್ ಸಾಲ್ಯಾನ್ ಸನ್ಮಾನಿತರನ್ನು ಪರಿಚಯಿಸಿದರು. ಹಳೆಯಂಗಡಿ ಲಯನ್ಸ್‌ಕ್ಲಬ್‌ನ ಅಧ್ಯಕ್ಷ ರಮೇಶ್ ಬಂಗೇರ ವಂದಿಸಿದರು. ಹಿಮಕರ್ ಡಿ. ಸುವರ್ಣ ಮತ್ತು ಬ್ರಿಜೇಶ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.
ನರೇಂದ್ರ ಕೆರೆಕಾಡು_