ಚಿತ್ರ : ನಿತ್ಯ ಪ್ರಕಾಶ್ ಬಂಟ್ವಾಳ್
ಬಂಟ್ವಾಳ,ಆಗಸ್ಟ್.08: ಬಂಟ್ವಾಳ ತಾಲೂಕಿನ ಅಮ್ಟಾಡಿ ಗ್ರಾಮದ ಕಾಯರ್ ಮಾರ್ ಎಂಬಲ್ಲಿ ಕೆ.ಹರಿಕೃಷ್ಣರವರ ಅಡಿಕೆ ತೋಟದಲ್ಲಿ ಸುಮಾರು 13 ಅಡಿ ಉದ್ದದ ಕಾಳಿಂಗ ಸರ್ಪವೊಂದು ಕಂಡು ಬಂದಿದ್ದು , ಅದನ್ನು ಕೂಡಲೇ ಹರಿಕೃಷ್ಣ ಬಂಟ್ವಾಳ ರವರು ಸ್ಥಳೀಯ ಆರಣ್ಯಾಧಿಕಾರಿಗಳ ನೆರೆವಿನಿಂದ ಉರಗ ಸ್ನೇಹಿ ಕಿರಣ್ ಪಿಂಟೋ ನೇತೃತ್ವದಲ್ಲಿ ಯಶಸ್ವಿಯಾಗಿ ಹಿಡಿದು ಶಿರಾಡಿ ಘಾಟ್ ನ ದಟ್ಟಡವಿಗೆ ಕೊಂಡೊಯ್ದು ಬಿಟ್ಟು ಬಿಡಲಾಯಿತು.
ಈ ಸಂದರ್ಭದಲ್ಲಿ ವಲಯ ಅರಣ್ಯಧಿಕಾರಿ ಸುಬ್ರಮಣ್ಯ ರಾವ್, ಉಪವಲಯ ಅರಣ್ಯಧಿಕಾರಿ ಸೀತಾರಾಮ ಶೆಟ್ಟಿ ಹಾಗೂ ಅರಣ್ಯ ರಕ್ಷಕ ಶಿವಲಿಂಗ ಸ್ವಾಮಿ ಭಾಗವಹಿಸಿ ಸಹಕರಿಸಿದ್ದರು.