ಕನ್ನಡ ವಾರ್ತೆಗಳು

ವಿವಿಯಲ್ಲಿ ಮಾನವ ಹಕ್ಕುಗಳೊಂದಿಗೆ ದ್ವನಿ- ಪ್ರತಿದ್ವನಿ ಕಾರ್ಯಗಾರ

Pinterest LinkedIn Tumblr

Vv_college_photo_1

ಮಂಗಳೂರು,ಆಗಸ್ಟ್.08: ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಮಾನವ ಹಕ್ಕುಗಳ ಭಾರತೀಯ ಮಹಾಮೈತ್ರಿ ಹಾಗೂ ಮಾನವ ಹಕ್ಕುಗಳ ಸಂಘ, ವಿಶ್ವವಿದ್ಯಾನಿಯ ಕಾಲೇಜು ಮಂಗಳೂರು ಇವರ ಸಹಯೋಗದಲ್ಲಿ ನಡೆದ ಮಾನವ ಹಕ್ಕುಗಳೊಂದಿಗೆ ನಾವು ‘ಧ್ವನಿ-ಪ್ರತಿಧ್ವನಿ’ ಒಂದು ದಿನದ ಕಾರ್ಯಗಾರವನ್ನು ಕರ್ನಾಟಕ ಕಾನೂನು ಆಯೋಗದ ಅಧ್ಯಕ್ಷ ನಾಡೋಜ ನ್ಯಾಯಮೂರ್ತಿ ಡಾ.ಎಸ್.ಆರ್. ನಾಯಕ್ ಉದ್ಘಾಟಿಸಿದರು.

ಲಿಂಗ, ಜಾತಿ,ಮತ ಭೇದಭಾವ ಒದ್ದೊಡಿಸುವ ದೃಷ್ಠಿಯಿಂದ ವಚನಕಾರ ಬಸವಣ್ಣನವರು ಅನುಭವ ಮಂಟಪ ಸ್ಥಾಪಿಸಿ ಇದರ ಮೌಲ್ಯವನ್ನು ತಿಳಿಯಬೇಕು ಎಂದರು, ಆದರೆ ಬಸವಣ್ಣ ತೋರಿದ ಮೌಲ್ಯಗಳು ಸಮಾಜದಲ್ಲಿ ಇಂದಿಗೂ ಬೆಳಕಿಗೆ ಬಂದೇ ಇಲ್ಲ ಎಂದು ಈ ಸಂಧರ್ಭದಲ್ಲಿ ಹೇಳಿದರು.

Vv_college_photo_2 Vv_college_photo_4 Vv_college_photo_3

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು ಇದರ ಪ್ರೋ.ಸುನಂದಾ ಯು. ವಹಿಸಿದ್ದರು.

ವೇದಿಕೆಯಲ್ಲಿ ದ.ಕ ಜಿಲ್ಲಾಧಿಕಾರಿ ಎ.ಬಿ ಇಬ್ರಾಹಿಂ, ಎಮ್ ಎಲ್ ಸಿ ಐವನ್ ಡಿಸೋಜಾ, ಹೆಚ್.ಆರ್.ಎಫ್.ಐ ಅಧ್ಯಕ್ಷ ಕೊಲ್ಲಾಡಿ ಬಾಲಕೃಷ್ಣ ರೈ ಮೊದಲಾದವರು ಉಪಸ್ಥಿತರಿದ್ದರು.

Write A Comment