ಕನ್ನಡ ವಾರ್ತೆಗಳು

ಅಕ್ರಮ ಮಾರಾಟಕ್ಕೆ ಯತ್ನ – ಕೃಷ್ಣ ಮೃಗದ ಚರ್ಮ ಸಹಿತಾ ಓರ್ವನ ಬಂಧನ :

Pinterest LinkedIn Tumblr

Black_Buck_arest_1

ಮಂಗಳೂರು,ಜುಲೈ.30 : ನಗರದ ಬಿಜೈ ಕೆ.ಎಸ್.ಆರ್.ಟಿ ಬಸ್ಸು ನಿಲ್ದಾಣದ ಬಳಿ ಅಕ್ರಮವಾಗಿ ಕೃಷ್ಣ ಮೃಗದ ಚರ್ಮವನ್ನು ಮಾರಾಟಕ್ಕೆ ಪ್ರಯತ್ನಿಸುತ್ತಿದ್ದ ಆರೋಪಿಯನ್ನು ಗುರುವಾರ ಮಂಗಳೂರು ವಿಶೇಷ ಪೊಲೀಸ್ ಅರಣ್ಯ ಸಂಚಾರಿ ದಳದ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಹಾವೇರಿಯ ಮಾರುತಿ ಶಿವಪ್ಪ ಶಿಗಟ್ಟಿ (27) ಎಂದು ಗುರುತಿಸಲಾಗಿದ್ದು, ಆರೋಪಿಯಿಂದ 2-ಕೃಷ್ಣ ಮೃಗದ ಚರ್ಮವನ್ನು ವಶಪಡಿಸಿಕೊಳ್ಳಲಾಗಿದೆ.

Black_Buck_arest_2 Black_Buck_arest_3 Black_Buck_arest_4

ಮಂಗಳೂರು ವಿಶೇಷ ಪೊಲೀಸ್ ಅರಣ್ಯ ಸಂಚಾರಿ ದಳದ ಪಿಎಸ್‍ಐ ಶ್ರೀ ಶೇಖರ್ ರವರು ಖಚಿತ ವರ್ತಮಾನದ ಮೇರೆಗೆ ವನ್ಯ ಜೀವಿಯಾದ 2-ಕೃಷ್ಣ ಮೃಗದ ಚರ್ಮಗಳನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ಆರೋಪಿ ಮಾರುತಿ ಶಿವಪ್ಪ ಶಿಗಟ್ಟಿಎಂಬವರನ್ನು ಸೊತ್ತು ಸಮೇತ ದಸ್ತಗಿರಿ ಮಾಡಿದ್ದು, ಇನ್ನೊಬ್ಬ ಆರೋಪಿ ಹಾವೇರಿಯ ಮೊಳಲಿ ಮಾಬುಲಿ ಬಡೇ ಸಾಬ್ ದುಲ್ಸಿ ಎಂಬತಾ ತಲೆಮರೆಸಿಕೊಂಡಿದ್ದಾನೆ. ಈತನ ಬಂಧನಕ್ಕೆ ಪ್ರಯತ್ನ ಮುಂದುವರಿದಿದೆ.

ಪ್ರಕರಣದಲ್ಲಿ ದಸ್ತಗಿರಿಯಾದ ಮಾರುತಿ ಶಿವಪ್ಪ ಶಿಗಟ್ಟಿ ಹಾಗೂ ಆರೋಪಿಯಿಂದ ಸ್ವಾಧೀನ ಪಡಿಸಿಕೊಂಡ 2-ಕೃಷ್ಣ ಮೃಗದ ಚರ್ಮವನ್ನು ಬರ್ಕೆ ಪೊಲೀಸ್ ಠಾಣೆಗೆ ಮುಂದಿನ ಕ್ರಮದ ಬಗ್ಗೆ ಹಸ್ತಾಂತರಿಸಲಾಗಿದೆ. ಬರ್ಕೆ ಪೊಲೀಸ್ ಠಾಣೆಯಲ್ಲಿ ವನ್ಯ ಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.

ಈ ಕಾರ್ಯಾಚರಣೆಯಲ್ಲಿ ಬೆಂಗಳೂರು ಅರಣ್ಯ ಘಟಕದ ಮಾನ್ಯ ಪೊಲೀಸ್ ಮಹಾನಿರೀಕ್ಷಕರಾದ ಶ್ರೀ ಹೇಮಂತ್ ನಿಂಬಾಳ್ಕರ್ ಐಪಿಎಸ್., ಹಾಗೂ ಮಾನ್ಯ ಪೊಲೀಸ್ ಅಧೀಕ್ಷಕರಾದ ಶ್ರೀ ವೆಂಕಟ್ ನಾಯ್ಕ್ ರವರ ನಿರ್ಧೇಶನದಂತೆ ಮಂಗಳೂರು ವಿಶೇಷ ಪೊಲೀಸ್ ಅರಣ್ಯ ಸಂಚಾರಿ ದಳದ ಪಿಎಸ್‍ಐ ಶ್ರೀ ಶೇಖರ್, ಹೆಚ್‍ಸಿ ಉಮೇಶ್ ಹೊಸೊಳಿಕೆ, ಜಯರಾಮ ರೈ, ಹೊನ್ನಪ್ಪ ಗೌಡ, ರಾಮಚಂದ್ರ ಜಿ, ಬಶೀರ್ ಹಾಗೂ ನಾರಾಯಣ ರವರು ಪಾಲ್ಗೊಂಡಿದ್ದರು.

ಚಿತ್ರ : ಮಂಜು ನಿರೇಶ್ವಾಲ್ಯ

Write A Comment