ಕುಂದಾಪುರ: ಪ್ರಗತಿಪರ ಕೃಷಿಕರಾದ ತೆಕ್ಕಟ್ಟೆ ನಿವಾಸಿ, ಕೃಷಿಕ ಚಂದ್ರಶೇಖರ ಶೆಟ್ಟಿ (56) ಶನಿವಾರ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಘಟನೆ ವಿವರ: ಶನಿವಾರ ಬೆಳಗ್ಗೆ ಪತ್ನಿ ಶನಿಶ್ವರ ದೇವಸ್ಥಾನಕ್ಕೆ ತೆರಳಿದ್ದು ಪುತ್ರಿಯು ಮಲಗಿದ್ದ ವೇಳೆ ಮನೆಯ ಮಹಡಿ ಮೇಲಿನ ಕೊಣೆಗೆ ತೆರಳಿ ಫ್ಯಾನಿಗೆ ನೇಣುಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ತೆಕ್ಕಟ್ಟೆ ಭಾಗದ ಪ್ರಗತಿಪರ ಕೃಷಿಕರಾಗಿದ್ದ ಇವರು ಕುಂದಾಪುರ ಎಪಿಎಂಸಿ ಸದಸ್ಯರಾಗಿಯೂ ಇದ್ದು ತೆಕ್ಕಟ್ಟೆ ಗ್ರಾ.ಪಂ. ಮಾಜಿ ಸದ್ಯರೂ ಆಗಿದ್ದಾರೆ.
ಅನಾರೋಗ್ಯ ಸಮಸ್ಯೆ ಹಾಗೂ ಆರ್ಥಿಕ ಸಮಸ್ಯೆಯಿಂದ ಮನನೊಂದು ಈ ಕ್ರತ್ಯ ಎಸಗಿದ್ದಾರೆ ಎನ್ನಲಾಗಿದೆ. ಪತ್ನಿ ತಾಲೂಕು ಪಂಚಾಯಿತಿ ಮಾಜಿ ಸದಸ್ಯೆ ಸುಧಾ ಸಿ.ಶೆಟ್ಟಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
