ಕನ್ನಡ ವಾರ್ತೆಗಳು

ಆಕಾಶವಾಣಿಯ ಹರ್ಷ ವಾರದ ಅತಿಥಿ – ದೈವನರ್ತಕ ಸರಪಾಡಿಯ ದೇಜಪ್ಪ ಬಾಚಕೆರೆ

Pinterest LinkedIn Tumblr

dejappa_varada_athithi_A

ಮಂಗಳೂರು,ಜುಲೈ.23: ಮಂಗಳೂರು ಆಕಾಶವಾಣಿಯ ಹರ್ಷ ವಾರದ ಅತಿಥಿಯ 196 ನೇ ಕಾರ್ಯಕ್ರಮದಲ್ಲಿ ಜುಲೈ 26 ರಂದು ಬೆಳಿಗ್ಗೆ 8.50ಕ್ಕೆ ದೈವನರ್ತಕರಾದ ಸರಪಾಡಿಯ ದೇಜಪ್ಪ ಬಾಚಕೆರೆ ಭಾಗವಹಿಸಲಿದ್ದಾರೆ.

ಬಾಚಕೆರೆ ಶ್ರೀ ದುರ್ಗಾಪರಮೇಶ್ವರಿ ದೇವಿ ಮಂದಿರದ ಮೊಕ್ತೇಸರರೂ ಆಗಿರುವ ದೇಜಪ್ಪ ಅವರು ತಮ್ಮ ಪಾರಂಪರಿಕ ವೃತ್ತಿ ದೈವ ನರ್ತನ ಸೇವೆಯಲ್ಲಿ ನಿರತರಾದವರು. ಸರಪಾಡಿ ಶ್ರೀ ಶರಬೇಶ್ವರ ದೇವಸ್ಥಾನದಲ್ಲಿ 13ನೇ ವಯಸ್ಸಿನಲ್ಲಿ ಹಾಗೂ ಶ್ರೀ ಕಡೇಶಿವಾಲಯ ಕ್ಷೇತ್ರದಲ್ಲಿ ತಮ್ಮ 16ನೇ ವಯಸ್ಸಿನಲ್ಲಿ ಪ್ರಸಾದ ಸ್ವೀಕರಿಸಿದ ನಂತರ ತುಳುನಾಡಿನ ಉದ್ದಗಲಕ್ಕೂ ಹಾಗೂ ಮುಂಬಯಿಯಲ್ಲಿ ದೈವನರ್ತಕರಾಗಿ ಹೆಸರುವಾಸಿಯಾದವರು.

dejappa_varada_athithi_1

ಆಯುರ್ವೇದ’, ಜ್ಯೋತಿಶ್ಶಾಸ್ತ್ರದಲ್ಲೂ ಪಾರಂಗತರಾದ ಇವರು ಕೊಡುಗೈ ದಾನಿಗಳು. ವಿದ್ಯಾರ್ಥಿಗಳಿಗೆ ಪ್ರತೀವರ್ಷ ಪುಸ್ತಕ ವಿತರಣೆ ಹಾಗೂ ವಿದ್ಯಾರ್ಥಿ ವೇತನ ನೀಡುತ್ತಿದ್ದಾರೆ. ಹಿರಿಯ ಕಲಾವಿದ ಅಶೋಕ್ ಶೆಟ್ಟಿ ಸರಪಾಡಿ ಮಾಗದರ್ಶನದಲ್ಲಿ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿ ಬಾಚಕೆರೆ ಸರಪಾಡಿ ಮೇಳದ ಮೂಲಕ ಸುಮಾರು 30ಕ್ಕೂ ಹೆಚ್ಚು ಕಲಾವಿದರನ್ನೂ ಪೋಷಿಸುತ್ತಿದ್ದಾರೆ .ಕೃಷಿ ಆಸಕ್ತಿ ಹೊಂದಿದ ಇವರು ಭೂತರಾಧನಾ ಕಲೆಗೆ ಹೊಸ ಆವಿಷ್ಕಾರ ನೀಡಿ ಗಾಂಭೀರ್‍ಯ, ನಡೆನುಡಿ, ಹಾವ ಭಾವ, ಅಲಂಕಾರಕ್ಕೆ ಹೊಸ ಭಾಷೆ ಬರೆದವರು. ಇವರು ತಮ್ಮ ಜೀವನದ ಸಾಧನೆಯ ಪುಟಗಳನ್ನು ಸಂದರ್ಶನದಲ್ಲಿ ತಿಳಿಸಲಿದ್ದಾರೆ.

ಇವರನ್ನು ಕಾರ್ಯಕ್ರಮ ನಿರ್ವಾಹಕರಾದ ಡಾ.ಸದಾನಂದ ಪೆರ್ಲ ಸಂದರ್ಶಿಸಲಿದ್ದಾರೆ. ಮುಂದಿನ ವಾರದ ಅತಿಥಿಯಾಗಿ ತೆಂಕು ತಿಟ್ಟಿನ ಹಿರಿಯ ಸ್ತ್ರೀ ವೇಷಧಾರಿ ಶ್ರೀ ಪಾತಾಳ ವೆಂಕಟರಮಣ ಭಟ್ ಭಾಗವಹಿಸಲಿದ್ದಾರೆ.

Write A Comment