ಕನ್ನಡ ವಾರ್ತೆಗಳು

ನಿಸ್ವಾರ್ಥದ ಸ್ನೇಹ ನಿರಂತರ…

Pinterest LinkedIn Tumblr

20000000000000000ಒಂದು ಹುಡುಗಿ ಒಬ್ಬ ಹುಡುಗನನ್ನು ತೋರಿಸಿ `ಇವನು ನನ್ನ ಬೆಸ್ಟ್ ಫ್ರೆಂಡ್’ ಅಂದರೆ ಸಮಾಜ ಅದನ್ನು ಒಪ್ಪಿಕೊಳ್ಳಲು ಸಿದ್ಧವಿರುವುದಿಲ್ಲ. ಅವರಿಬ್ಬರು `ನಮ್ಮಿಬ್ಬರ ಮಧ್ಯೆ ಫ್ರೆಂಡ್ ಶಿಪ್ ಬಿಟ್ಟರೆ ಬೇರೇನು ಇಲ್ಲ’ ಎಂದು ಹೇಳಿದರೂ ಅದನ್ನು ಒಪ್ಪಿಕೊಳ್ಳಲು ಸಮಾಜ ಹಿಂದೆ-ಮುಂದೆ ನೋಡುತ್ತದೆ. ಅವರಿಬ್ಬರ ಬಗ್ಗೆ ಅನೇಕ ಕಟ್ಟು ಕಥೆಗಳು ಕೇಳಲಾರಂಭಿಸುತ್ತವೆ. ಹಾಗಾದರೆ ಒಂದು ಹೆಣ್ಣು ಮತ್ತು ಗಂಡು ಬರೀ ಫ್ರೆಂಡ್ಸ್ ಆಗಿ ಇರಲು ಸಾಧ್ಯವಿಲ್ಲವೇ? ಖಂಡಿತ ಸಾಧ್ಯ ಇದೆ, ಆದರೆ ಸಮಾಜದ ಸಂಶಯ ದೃಷ್ಟಿ ಅವರ ಮೇಲೆ ಬೀಳದೆ ಬದುಕಲು ಮಾತ್ರ ಖಂಡಿತ ಸಾಧ್ಯವಿಲ್ಲ! ಹೆಚ್ಚಿನ ಹೆಣ್ಣು ಮಕ್ಕಳು ಹುಡುಗರ ಜೊತೆ ಫ್ರೆಂಡ್‍ಷಿಪ್ ಮಾಡಿಕೊಳ್ಳುತ್ತಾರೆ. ಹುಡುಗನನ್ನು ಬೆಸ್ಟ್ ಫ್ರೆಂಡ್ ಎಂದು ಹೇಳುವ ಪ್ರತಿಯೊಂದು ಹೆಣ್ಣಿಗೂ ತನ್ನ ಜೀವದ ಗೆಳತಿಯಿಂದ ಯಾವುದೋ ಒಂದು ಕಹಿ ಅನುಭವವಾಗಿರುತ್ತದೆ. ಫ್ರೆಂಡ್ ಎಂದು ಅಂದುಕೊಂಡವಳು ಯಾವುದೋ ಕಾರಣಕ್ಕೆ ಮೋಸ ಮಾಡಿದರೆ ಅಥವಾ ನಮ್ಮ ಬಗ್ಗೆ ಹೊಟ್ಟೆ ಕಿಚ್ಚು ಪಟ್ಟರೆ ಇನ್ನು ಮುಂದೆ ಈ ರೀತಿಯ ಸ್ನೇಹಿತೆ ನನಗೆ ಬೇಡ ಎಂದು ಅನಿಸಿಬಿಡುತ್ತದೆ. ಈ ರೀತಿ ಅನಿಸಿದರೆ ಮುಂದೆ ಎಲ್ಲಾ ಹುಡುಗಿಯರು ಇದೇ ರೀತಿ ಇರುತ್ತಾರೆ ಎಂಬ ತೀರ್ಮಾನಕ್ಕೆ ಬಂದು ಬಿಡುತ್ತಾರೆ. ಅದೇ ಹುಡುಗನ ಜೊತೆ ಸ್ನೇಹ ಬೆಳೆಸಿದರೆ ಗೆಳೆತನಕ್ಕಾಗಿ ಏನು ಬೇಕಾದರೂ ತ್ಯಾಗ ಮಾಡುವ ಗುಣ ಅವನಲ್ಲಿರುತ್ತದೆ. ಈ ಗುಣದಿಂದಾಗಿಯೇ ಹುಡುಗಿಗೆ ಹುಡುಗನ ಗೆಳೆತನ ತುಂಬಾ ಇಷ್ಟವಾಗುತ್ತದೆ. ಆದರೆ ಅವರಿಬ್ಬರ ಗೆಳೆತನ ಹುಡುಗಿಗೆ ಬೇರೆ ಹುಡುಗನೊಂದಿಗೆ ಮದುವೆಯಾದ ನಂತರ ಕೂಡ ಅದೇ ರೀತಿ ಉಳಿದುಕೊಳ್ಳುವುದು ಕಡಿಮೆ.

ಏಕೆಂದರೆ ಇವರಿಬ್ಬರ ಗೆಳೆತನ ಅವಳ ಗಂಡನಿಗೆ ಇಷ್ಟವಾಗದೇ ಇರಬಹುದು, ಇವರು ತುಂಬಾ ಆತ್ಮೀಯ ಸ್ನೇಹಿತರು ಅಂತ ಅವಳ ಗಂಡನಿಗೆ ಸಹಿಸಿಕೊಳ್ಳದೇ ಹೋಗಬಹುದು. ಈ ರೀತಿಯಾದರೆ ಅನಿವಾರ್ಯವಾಗಿ ಗೆಳೆಯನಿಂದ ದೂರವಾಗಬೇಕಾಗುತ್ತದೆ. ಮತ್ತೆ ಕೆಲವರಿಗೆ `ನನ್ನನ್ನು ಇಷ್ಟೆಲ್ಲಾ ಅರ್ಥ ಮಾಡಿಕೊಂಡಿರುವ ಈ ಫ್ರೆಂಡೇ ನನ್ನ ಬಾಳಸಂಗಾತಿಯಾದರೆ ಚೆನ್ನಾಗಿರುತ್ತದೆ’ ಎಂಬ ಭಾವನೆ ಬಂದು ಮದುವೆಯಾಗಿ ಬಿಡುತ್ತಾರೆ. ಹೀಗೆ ಒಬ್ಬ ಹುಡುಗ ಹಾಗೂ ಮತ್ತೊಬ್ಬ ಹುಡುಗಿಯ ಮಧ್ಯದ ಸ್ವಚ್ಛ ಮನಸ್ಸಿನ ಸ್ನೇಹ ಹಚ್ಚೆಯಂತೆ ಶಾಶ್ವತÀವಾದದ್ದು. ಅದನ್ನು ಯಾರೂ ಯಾವತ್ತೂ ಅಳಿಸಲು ಸಾಧ್ಯವಿಲ್ಲ. ಬದುಕಿನ ಹಾದಿಯಲ್ಲಿ ಭೇಟಿÀಯಾಗುವವರು ನೂರಾರು ಮಂದಿ. ಮನದಲ್ಲಿ ಉಳಿಯುವವರಲ್ಲಿ ಸ್ನೇಹಿತರೇ ಹೆಚ್ಚು. ಅದೇ ಆ ಸ್ನೇಹಕ್ಕಿರುವ ಒಂದು ಅನನ್ಯ ಭಾವ. ಇಲ್ಲಿ ಮುಚ್ಚು ಮರೆಯಿರುವುದಿಲ್ಲ. ತನ್ನವರೊಂದಿಗೆ ಹೇಳಲಾಗದ ಸಂಗತಿಗಳನ್ನು ಸ್ನೇಹಿತರೊಂದಿಗೆ ಸಲೀಸಾಗಿ ಹಂಚಿಕೊಳ್ಳಲು ಸಾಧ್ಯವಾಗುವುದು ಈ ಭಾವದಿಂದಲೇ.

ಹಾಗೆ, ಸ್ನೇಹದ ಇನ್ನೊಂದು ಮುಖವನ್ನು ನೀವು ನೋಡಿರಲೇಬೇಕು. ಪ್ರತಿಯೊಂದು ಪ್ರೀತಿಗೆ ಬುನಾದಿ ಈ ಸ್ನೇಹ. ಸ್ನೇಹವಿಲ್ಲದೇ ಯಾವುದೇ ಪ್ರೀತಿ ಸೌಧ ತಲೆಎತ್ತಿ ನಿಲ್ಲಲಾರದು. ಆದರ್ಶ ದಂಪತಿಗಳ ಸಾಲಿನಲ್ಲಿ ನಿಲ್ಲಬೇಕಾದರೆ ಪ್ರೀತಿಯೊಂದೇ ಇದ್ದರೆ ಸಾಕಾಗುವುದಿಲ್ಲ. ಉತ್ತಮ ಸ್ನೇಹಿತರು ಮಾತ್ರ ಉತ್ತಮ ದಂಪತಿಗಳಾಗಲು ಸಾಧ್ಯ.  ಅದಕ್ಕೇ ಹೇಳೋದು ಪ್ರೀತಿ ಮತ್ತು ಸ್ನೇಹ ಒಂದೇ  ನಾಣ್ಯದ ಎರಡು ಮುಖಗಳು ಎಂದು,. ಒಂದು ಮುಖ ಕಣ್ಣಿಗೆ ಕಾಣಿಸಿದರೆ ಇನ್ನೊಂದು ಮುಖ ಅದರ ಬೆನ್ನ ಹಿಂದೇ ಇರುತ್ತೆ. ಕೊನೆಯದಾಗಿ ನಾಕಂಡ ಸ್ನೇಹದ ಬಗ್ಗೆ ಒಂದು ಮಾತು ಹೇಳಬೇಕೆಂದರೆ ಪ್ರೀತಿಯಲ್ಲಿರುವ ಸ್ವಾರ್ಥ ಸ್ನೇಹದಲ್ಲಿರುವುದಿಲ್ಲ. ಅಂದರೆ, ಸ್ನೇಹಕ್ಕೆ ಸ್ವಾರ್ಥವಿಲ್ಲ. ನಿಸ್ವಾರ್ಥದ ಈ ಪ್ರೇಮ ಯಾವ ಹೆಣ್ಣು-ಗಂಡುಗಳ ಮಧ್ಯೆ ಇದ್ದರೂ ಅವರು ಸದಾಕಾಲ ಬೆಸ್ಟ್‍ಫ್ರೆಡ್ಸ್ ಆಗಿಯೇ ಉಳಿಯುತ್ತಾರೆ.

ಗೆಳೆತನ ಅಂದರೆ ಬರಿಯ ಫ್ರೆಂಡ್‍ಶಿಪ್ ಡೇಗೆ ವಿಶ್ ಮಾಡಿ ಕೈಗೆ ಫ್ರೆಂಡ್‍ಶಿಪ್ ಬ್ಯಾಂಡ್ ಕಟ್ಟೋದಲ್ಲ, ಒಬ್ಬ ಗೆಳೆಯನ ಸುಖ ದುಃಖಗಳೆರಡರಲ್ಲೂ ಭಾಗಿಯಾಗುವವನೆ ನಿಜವಾದ ಗೆಳೆಯ/ಗೆಳತಿ. ಬಹುಶಃ ಹೆತ್ತವರಿಗೆ ಗೊತ್ತಿರದ ಅದೆಷ್ಟೋ ವಿಷಯಗಳನ್ನು ಒಬ್ಬಾತ/ಕೆ ಅವರ ಗೆಳೆಯರಲ್ಲಿ ಹಂಚಿಕೊಳ್ಳುತ್ತಾರೆ. ಒಬ್ಬ ತಪ್ಪು ಹೆಜ್ಜೆಯನ್ನಿಟ್ಟಿದ್ದಾನೋ ಇಲ್ಲವೋ ಅನ್ನೋದು ಗೆಳೆಯನಿಗೆ ಮೊದಲು ಗೊತ್ತಾಗುತ್ತೆ. ಅಂತಹ ಸಂದರ್ಭದಲ್ಲಿ ಹಾದಿ ತಪ್ಪದಂತೆ ನೋಡಿಕೊಳ್ಳುವುದು ನಿಜವಾದ ಗೆಳೆಯನ ಕರ್ತವ್ಯ. ಹಾಗೇಯೇ ಸ್ನೇಹವೇ ಪ್ರೀತಿಗೆ ತಳಪಾಯ. ಸ್ನೇಹದಿಂದ ಪ್ರೀತಿ ಆರಂಭವಾಗುತ್ತವೆ ಹೊರತು ಯಾವ ಪ್ರೀತಿಯೂ ಸಹ ಸ್ನೇಹದಲ್ಲಿ ಕೊನೆಯಾಗುವುದಿಲ್ಲ. ಪ್ರೀತಿ ಯಾವುದೋ ಒಂದು ಕಾರಣದಿಂದ ಕೊನೆಯಾಗಬಹುದು ಆದರೆ ಸ್ನೇಹ ಶಾಶ್ವತ….ಅದಕ್ಕೆ ಕೊನೆಯೆಂಬುದೇ ಇಲ್ಲ.

ಫ್ರೆಂಡ್‍ಶಿಪ್‍ನಲ್ಲಿ ಇದು ಸರಿಯಲ್ಲ :
ಸ್ನೇಹ ಸಾಮಾನ್ಯವಾಗಿ ಯಾವ ಬೇಧಬಾವವೂ ಇಲ್ಲದೇ ಶುರುವಾಗುತ್ತೆ, ಆದರೆ ದಿನಕಳೆದಂತೆ ಹುಡುಗ-ಹುಡುಗಿರ ನಡುವಿನ ಸ್ನೇಹ ನಾನಾ ರೂಪಗಳನ್ನು ಪಡೆದುಕೊಳ್ಳುತ್ತೆ.  ಗಂಡು-ಹೆಣ್ಣಿನ ನಡುವಿನ ಸಂಬಂಧದಲ್ಲಿ ಆಕರ್ಷಣೆ ಎಂಬುದು ಅತಿ ಸಾಮಾನ್ಯ. ಅದು ಕಚೇರಿ ಇರಲಿ, ತರಗತಿ ಇರಲಿ, ಒಂದೇ ನೆರೆಹೊರೆಯಾಗಿರಲಿ, ಇಬ್ಬರು ವಿರುದ್ಧ ಲಿಂಗಗಳ ನಡುವೆ ಪರಿಚಯ ಬೆಳೆದರೆ, ಅದಕ್ಕೆ ಸಂಬಂಧದ ಚೌಕಟ್ಟೊಂದನ್ನು ನಿರ್ಧರಿಸುವ ಅನಿವಾರ್ಯತೆ ಬಲುಬೇಗ ಉಂಟಾಗಿಬಿಡುತ್ತೆ. ಆದ್ದರಿಂದ ಸ್ನೇಹಿತರ ಮಧ್ಯೆ ನಾನಾ ಅನ್ಯ ವಿಚಾರಗಳಿಗೆ ಎಡೆಮಾಡಿಕೊಡೆದೆ ಸ್ಪಷ್ಟತೆಯಿಂದ, ಮುಕ್ತವಾಗಿ ಆ ಸ್ನೇಹ ಸಂಬಂಧವನ್ನು ವ್ಯಕ್ತಪಡಿಸಬೇಕು. ಅದರಲ್ಲಿ ಯಾವ ಕಲ್ಮಷವೂ ಇರಬಾರದು.

Write A Comment