ವರದಿ : ಈಶ್ವರ ಎಂ. ಐಲ್/ಚಿತ್ರ,: ದಿನೇಶ್ ಕುಲಾಲ್
ಮುಂಬಯಿ: ಶ್ರೀ ರಾಮಚಂದ್ರ ಕೃಪಾಪೋಷಿತ ಯಕ್ಷಗಾನ ಮಂಡಳಿ 9ನೇ ವಾರ್ಷಿಕ ಮುಂಬಯಿ ಪ್ರವಾಸ, ಯಕ್ಷೋತ್ಸವ ಜು. 5ರಿಂದ 12ರ ವರೆಗೆ ಜರರು ದ್ದು, ಜು.12 ರಂದು ಕುರ್ಲಾ ಬಂಟರ ಭವನದಲ್ಲಿ ಮೇಳದ ಹಿರಿಯ ಕಲಾಇದರಾದ ಅಂಬಾಪ್ರಸಾದ್ ಪಾತಾಳ ಮತ್ತು ಸದಾಶಿವ ಕುಲಾಲ್ ಅವರನ್ನು ಸನ್ಮಾನಿಸುದರ ಮೂಲಕ ’ಕೃಷ್ನ – ಕೃಷ್ನ – ಶ್ರೀಕೃಷ್ನ’ ಯಕ್ಷಗಾನದ ಪ್ರದರ್ಶನದೊಂದಿಗೆ ಸಂಪನ್ನಗೊಂಡಿತು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಬಂಟರ ಸಂಘದ ಅಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿಯವರು ವಹಿಸಿದ್ದು ಹೊಸನಗರ ಮೇಳವು ಕಾಲಮಿತಿಯಲ್ಲಿ ಯಕ್ಷಗಾನವನ್ನು ಪ್ರದರ್ಶಿಸುವ ಮೂಲಕ ಯಕ್ಷಗಾನಕ್ಕೆ ಹೊಸ ಆಯಾಮ ನೀಡಿದೆ ಎಂದರು. ಮುಖ್ಯ ಅತಿಥಿಯಾಗಿ ಬಂಟ್ಸ ನ್ಯಾಯ ಮಂಡಳಿಯ ಅಧ್ಯಕ್ಷ ಪದ್ಮ ನಾಭ ಎಸ್. ಪಯ್ಯಡೆ ಆಗಮಿಸಿದ್ದರು.
ಬಂಟರ ಸಂಘದ ಕಾರ್ಯದರ್ಶಿ ಉಳ್ತೂರು ಮೋಹನ್ ದಾಸ್, ಮಾತೃಭೂಮಿ ಕ್ರೆಡಿಟ್ ಸೊಸೈಟಿಯ ಕಾರ್ಯಾಧ್ಯಕ್ಷ ರತ್ನಾಕರ ಶೆಟ್ಟಿ ಮುಂಡ್ಕೂರು, ಕಮಲಾಕ್ಷ ಸರಾಫ್, ವೆಂಕಟೇಶ ಪೈ ಮೊದಲಾದವರು ಮಾತನಾಡಿದರು.ರವೀಂದ್ರನಾಥ ಭಂಡಾರಿ ಅತಿಥಿಗಳನ್ನು ಸ್ವಾಗತಿಸಿದರು. ಸಂಯೋಜಕ ಪ್ರಕಾಶ್ ಭಟ್ ಪ್ರಾಸ್ತಾವಿಕ ನುಡುಗಳನ್ನಾಡಿದರು. ದಯಾಸಾಗರ ಚೌಟ ಕಾರ್ಯಕ್ರಮವನ್ನು ನಿರ್ವಹಿಸಿದರು.











