ಕನ್ನಡ ವಾರ್ತೆಗಳು

‘ಸತ್ಯ ಉತ್ಪಾದಿಸಲು’ ಹೊರಟಿರುವುದು ವಿಷಾದನೀಯ : ಪತ್ರಿಕಾದಿನಾಚರಣೆ ಉದ್ಘಾಟಿಸಿ ಡಾ.ಮೋಹನ್ ಆಳ್ವ

Pinterest LinkedIn Tumblr

Patrika_dhinacharane_1

ಮಂಗಳೂರು : ಮಾಧ್ಯಮಗಳು ಸತ್ಯದ ಪ್ರತಿಪಾದನೆ ಮಾಡುವ ಪ್ರಜಾಪ್ರಭುತ್ವದ ನಾಲ್ಕನೆ ಅಂಗ ಎನ್ನುವ ಕಾರಣದಿಂದ ಸಮಾಜದಲ್ಲಿ ಮಾನ್ಯತೆಯನ್ನು ಪಡೆದಿದೆ.ಆದರೆ ಇತ್ತೀಚಿನ ದಿನಗಳಲ್ಲಿ ಕೆಲವು ಮಾಧ್ಯಮಗಳು ಸಮಾಜದಲ್ಲಿಎಂದು ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಮೋಹನ್ ಆಳ್ವ ಅವರು ಹೇಳಿದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಬುಧವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾದಿನಾಚರಣಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮುಖ್ಯ ಅಥಿಗಳಾಗಿ ಭಾಗವಹಿಸಿದ ಹಿರಿಯ ಪತ್ರಕರ್ತ ಎನ್.ಗುರುರಾಜ್ ಅವರು ‘ಪತ್ರಿಕೋದ್ಯಮ ಸಾಗುತ್ತಿರುವ ಹಾದಿ’ವಿಷಯದ ಬಗ್ಗೆ ಉಪನ್ಯಾಸ ನೀಡಿದರು. ಪತ್ರಿಕೆಗಳು ಜನರಲ್ಲಿ ವೌಢ್ಯವನ್ನು ತುಂಬುವ ಕೆಲಸ ಮಾಡಬಾರದು ಎಂದು ಸಲಹೆ ನೀಡಿದರು.

ಪತ್ರಿಕೆಗಳು ಜನರಿಗೆ ಸರಿಯಾದ ಮಾಹಿತಿಯನ್ನು ನಿಖರವಾದ ಸುದ್ದಿಯನ್ನು ನೀಡುವ ಮಹತ್ವದ ಹೊಣೆಗಾರಿಕೆಯನ್ನು ಹೊಂದಿದೆ. ಇತ್ತೀಚೆಗೆ ಮಂಗಳೂರಿನಲ್ಲಿ ‘ಮಾರ್ಸ್’ ಬಗ್ಗೆ ಉಂಟಾದ ಗೊಂದಲದಲ್ಲಿ ಮಾಧ್ಯಮಗಳ ಪಾತ್ರವೂ ಇದೆ. ಇಂತಹ ಸಂದರ್ಭದಲ್ಲಿ ಮಾಹಿತಿಯನ್ನು ಸಂಗ್ರಹಿಸುವ ತಾಳ್ಮೆ ನಮ್ಮ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುವವರಿಗೆ ಅಗತ್ಯವಾಗಿ ಇರಬೇಕು. ಪ್ರಸಕ್ತ ಇತರ ಕ್ಷೇತ್ರಗಳಂತೆಯೇ ಪತ್ರಿಕಾ ಕ್ಷೇತ್ರವೂ ಉದ್ಯಮವಾಗಿ ಮಾರ್ಪಾಡು ಹೊಂದಿದ ಬಳಿಕ ಜಾಹೀರಾತು, ಪ್ರಸರಣದ ಕಡೆಗೆ ಪತ್ರಿಕೆಗಳ ಮಾಲಕರು ಒತ್ತು ನೀಡುತ್ತಿದ್ದಾರೆ ಎಂದು ಗುರುರಾಜ್ ವಿವರಿಸಿದರು.

ಸಮಾರಂಭದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಪತ್ರಕರ್ತ ಮನೋಹರ ಪ್ರಸಾದ್ ಉಪಸ್ಥಿತರಿದ್ದರು. ಪಿ.ಬಿ.ಹರೀಶ್ ರೈ ಕಾರ್ಯಕ್ರಮ ನಿರೂಪಿಸಿದರು. ಸಂಘದ ಕಾರ್ಯದರ್ಶಿ ಶ್ರೀನಿವಾಸ ಇಂದಾಜೆ ವಂದಿಸಿದರು.

Patrika_dhinacharane_2 Patrika_dhinacharane_3 Patrika_dhinacharane_4 Patrika_dhinacharane_5 Patrika_dhinacharane_6 Patrika_dhinacharane_7 Patrika_dhinacharane_8 Patrika_dhinacharane_9 Patrika_dhinacharane_10 Patrika_dhinacharane_11 Patrika_dhinacharane_12 Patrika_dhinacharane_13 Patrika_dhinacharane_14

ಉಮೇಶ್ ರಾವ್ ಎಕ್ಕಾರ್‌ಗೆ ಗೌರವ – ಸಮ್ಮಾನ:

ಕಾರ್ಯಕ್ರಮದಲ್ಲಿ ಕಳೆದ ಐವತ್ತು ವರ್ಷಗಳಿಂದ ಪತ್ರಿಕೆಗಳ ಸಂಗ್ರಹದ ಹವ್ಯಾಸವನ್ನು ಬೆಳೆಸುತ್ತ ಬಂದ ಉಮೇಶ್ ರಾವ್ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.

ಉಮೇಶ್ ರಾವ್ ಎಕ್ಕಾರ್‌ ಅವರ ಬಳಿ ದೇಶ ವಿದೇಶಗಳ ಸಾವಿರಾರು ಪತ್ರಿಗಳ ಸಂಗ್ರಹವಿದ್ದು, ಪತ್ರಿಕಾದಿನಾಚರಣಾ ಪ್ರಯುಕ್ತ ಈ ಪತ್ರಿಕೆಗಳ ಪ್ರದರ್ಶನವನ್ನು ಪತ್ರಿಕಾ ಭವನದಲ್ಲಿ ಅಯೋಜಿಸಲಾಗಿತ್ತು.ಬೇರೆ ಬೇರೆ ದೇಶಗಳ ಬೇರೆ ಬೇರೆ ಭಾಷೆಯ ಸುಮಾರು 3 ಸಾವಿರಕ್ಕೂ ಹೆಚ್ಚಿನ ಪತ್ರಿಕೆಗಳ ಅಭೂತಪೂರ್ವ ಸಂಗ್ರಹ ರಾಯರ ಬಳಿ ಇದೆ.

ಹೆಚ್ಚಿನ ಎಲ್ಲ ಪತ್ರಿಕೆಗಳ ಪ್ರಥಮ ಪ್ರತಿಯನ್ನು ಕಾಪಾಡಿಕೊಂಡು ಬಂದಿರುವ ರಾವ್ ಅವರು, ನಮ್ಮ ದೇಶದ ಹಳೆಯ ಪತ್ರಿಕೆಗಳ ಸಂಗ್ರಹ ನಮ್ಮಲ್ಲಿ ಇಲ್ಲ ಆದರೆ ಲಂಡನ್ ನಂತಹ ಹೊರ ದೇಶದ ಸಂಗ್ರಹಾಲಯದಲ್ಲಿ ನೋಡಸಿಗುತ್ತದೆ, ನಮ್ಮಲ್ಲಿಯೂ ಅಂಥ ವ್ಯವಸ್ಥೆ ಆಗಬೇಕು ಎಂದು ಹೇಳಿದರು.

Patrika_dhinacharane_15 Patrika_dhinacharane_16 Patrika_dhinacharane_17 Patrika_dhinacharane_18 Patrika_dhinacharane_19 Patrika_dhinacharane_20 Patrika_dhinacharane_21 Patrika_dhinacharane_22 Patrika_dhinacharane_23 Patrika_dhinacharane_24 Patrika_dhinacharane_25 Patrika_dhinacharane_26 Patrika_dhinacharane_27 Patrika_dhinacharane_28 Patrika_dhinacharane_29 Patrika_dhinacharane_30 Patrika_dhinacharane_31 Patrika_dhinacharane_32 Patrika_dhinacharane_33 Patrika_dhinacharane_34 Patrika_dhinacharane_35 Patrika_dhinacharane_36 Patrika_dhinacharane_37 Patrika_dhinacharane_38

ಇವರ ಬಳಿ, 1884ರ ಕ್ರೈಸ್ತ ಸಭಾ ಪತ್ರ ಬಳಿಯಿರುವ ಅತ್ಯಂತ ಹಳೆಯ ಸಂಗ್ರಹ, ಮತ್ರವಲ್ಲದೆ ಎರಡು ಆಣೆ ಬೆಲೆಯ 1911 ಸುಪಂಥ 1922ರ ಆತ್ಮಾಹ್ಲಾದಿನೀ ಮಾಸಿಕ, 1927 ಸುವಾಸಿನಿ, 1932ರ ಸದ್ಬೋಧ ಚಂದ್ರಿಕೆ, 1934ರ ಮಕ್ಕಳ ಪುಸ್ತಕ, 1948 ಮದ್ರಾಸು ಸಮಾಚಾರ 1951 ಜಯಕರ್ನಾಟಕ, 1965ರ ಕಡೆಂಗೋಡ್ಲು ಶಂಕರಭಟ್ಟ ಸಂಪಾದನೆಯ ರಾಷ್ಟ್ರಮತ, 1966ರಲ್ಲಿ ದಿ| ಎಂ. ವ್ಯಾಸ ಅವರು ಸಂಪಾದಿಸುತ್ತಿದ್ದ ಅಜಂತ, 1966ರ ಗೋಕುಲ, ಮಾತ್ರವಲ್ಲದೆ ತುಳುನಾಡು, ತುಳುರಾಜ್ಯ, ಉರಲ್, ಸುಯಿಲ್, ಮದಿಪು, ತೂಟೆ, ತುಳುಬೊಳ್ಳಿ, ತುಳುವರ್ತಮಾನ, ತೆಂಬರೆ, ಎಂಕ್ಲೆನ ಚಾವಡಿ, ತುಳುವೆರೆ ಕೇದಗೆ, ತುಳುವೆರೆ ತುಡರ್, ತುಳುಸಿರಿ, ಪತ್ತಾಯ, ಪೊಸಕುರಲ್ ಮುಂತಾದ ತುಳು ಪತ್ರಿಕೆಗಳು ಕಲಾಕಿರಣ್, ಮಿತ್ರ್, ಜೀವಿತ್, ದಿರ್ವೆನಂತಹ ಕೊಂಕಣಿ ಪತ್ರಿಕೆಗಳು, ದೇವನಾಗರಿ ಲಿಪಿಯಲ್ಲಿರುವ ಕನ್ನಡ ಪತ್ರಿಕೆ, ದಿ ಇಲ್ಲಸ್ಟ್ರೇಟೆಡ್ ವೀಕ್ಲಿ, ಲಂಕೇಶ್ ಪತ್ರಿಕೆ, ಉದಯವಾಣಿ, ಸುಧಾಗಳಂತಹ ಪತ್ರಿಕೆಗಳ ಮೊತ್ತಮೊದಲ ಸಂಚಿಕೆಗಳು, ಕಡತೋಕಾ ಮಂಜುನಾಥ ಭಾಗವತರು ಸಂಪಾದಿಸುತ್ತಿದ್ದ ಯಕ್ಷಗಾನ, ಬಾಲಗಂಗಾಧರ ತಿಲಕ್ರ ಕೇಸರಿ, ಅಮೆರಿಕಾ, ಮಲೇಶಿಯಾ ಕಾಶ್ಮೀರ, ಅಂಡಮಾನ್ ನಿಕೋಬಾರ್, ಚೀನಾ, ಆಸ್ಟ್ರೇಲಿಯಾ, ಮೊದಲಾದ ದೇಶಗಳ ಪ್ರಖ್ಯಾತ ಪತ್ರಿಕೆಗಳ ಬಹುದೊಡ್ಡ ಸಂಗ್ರಹವೇ ಇವೆ.

Write A Comment