ಕನ್ನಡ ವಾರ್ತೆಗಳು

‘ನಿಮ್ಮೊಂದಿಗೆ ನಾವಿದ್ದೇವೆ’- ಬೈಂದೂರು ಅಕ್ಷತಾ ಮನೆಗೆ ದೇವಾಡಿಗ ಮುಖಂಡರ ಭೇಟಿ: ಕುಟುಂಬಿಕರಿಗೆ ಸಾಂತ್ವಾನ

Pinterest LinkedIn Tumblr

ಕುಂದಾಪುರ: ಕಳೆದ ವಾರವಷ್ಟೇ ಕಾಲೇಜಿನಿಂದ ಮನೆಗೆ ತೆರಳುತ್ತಿದ ವೇಳೆ ದುಷ್ಕರ್ಮಿಯಿಂದ ಕೊಲೆಯಾದ ಬೈಂದೂರಿನ ಹೇನಬೇರ್ ನಿವಾಸಿ ಅಕ್ಷತಾ ದೇವಾಡಿಗ ಅವರ ನಿವಾಸಕ್ಕೆ ದೇವಾಡಿಗ ಮುಖಂಡರು ಭೇಟಿ ನೀಡಿ ಕುಟುಂಬಿಕರಿಗೆ ಸಾಂತ್ವಾನ ಹೇಳಿದರು.

Devadiga Leaders_Visit_Byndoor (12) Devadiga Leaders_Visit_Byndoor (13) Devadiga Leaders_Visit_Byndoor (10) Devadiga Leaders_Visit_Byndoor (11) Devadiga Leaders_Visit_Byndoor (9) Devadiga Leaders_Visit_Byndoor (5) Devadiga Leaders_Visit_Byndoor (7) Devadiga Leaders_Visit_Byndoor (6) Devadiga Leaders_Visit_Byndoor (8) Devadiga Leaders_Visit_Byndoor (3) Devadiga Leaders_Visit_Byndoor (14) Devadiga Leaders_Visit_Byndoor (4) Devadiga Leaders_Visit_Byndoor (2)

ಈ ಸಂದರ್ಭ ಮಾತನಾಡಿದ ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಧರ್ಮಪಾಲ್ ದೇವಾಡಿಗ ಅವರು, ಇಡೀ ಸಮಾಜವನ್ನೇ ಬೆಚ್ಚಿಬೀಳಿಸುವ ನಡೆಯಬಾರದ ಘಟನೆ ನಡೆದು ಹೋಗಿದೆ, ಮಗಳನ್ನು ನಂಬಿಕೊಂಡು ಅವಳಿಗೆ ಉತ್ತಮ ವಿದ್ಯಾಭ್ಯಾಸ ನೀಡಬೇಕು ಎಂದುಕೊಂಡಿದ್ದ ಈಕೆಯ ಪೋಷಕರಿಗೆ ನ್ಯಾಯ ಸಿಗಲೇಬೇಕು. ಈ ನಿಟ್ಟಿನಲ್ಲಿ ಅಕ್ಷತಾಳ ಇಬ್ಬರು ಸಹೋದರಿಯರ ಉನ್ನತ ವ್ಯಾಸಂಗಕ್ಕೆ ದೇವಾಡಿಗ ಸಮಾಜ ಎಲ್ಲಾ ಸೌಲಭ್ಯಗಳನ್ನು ಒದಗಿಸುತ್ತದೆ. ಅಕ್ಷತಾ ಹೆಸರಿನಲ್ಲಿ ಮೆಮೊರಿಯಲ್ ಪಂಡ್ ನಿರ್ಮಿಸಿ ಸಹೋದರಿಯರಿಬ್ಬರ ವ್ಯಾಸಂಗಕ್ಕೆ ಹಾಗೂ ಅವರ ಭವಿಷ್ಯಕ್ಕೆ ಬೇಕಾದ ಹಣವನ್ನು ಸಂಗ್ರಹಿಸಲಾಗುತ್ತದೆ ಎಂದ ಅವರು ಇಂತಹ ಘಟನೆಯ ನಂತರವಾದರೂ ದೇವಾಡಿಗ ಸಮಾಜ ಎಚ್ಚೆತ್ತುಕೊಳ್ಳಬೇಕು, ಹಿಂದುಳಿದ ಜಾತಿ ಎಂಬ ಭಾವನೆಯನ್ನು ಮೊದಲು ಮನಸ್ಸಿನಿಂದ ತೆಗೆಯಬೇಕು ಎಂದರು.

ಶಾಸಕರೊಂದಿಗೆ ಮಾತುಕತೆ ನಡೆಸಿದ ಧರ್ಮಪಾಲ್ ದೇವಾಡಿಗ
ಇದೇ ಸಂದರ್ಭದಲ್ಲಿ ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿಯೊಂದಿಗೆ ಫೋನಿನಲ್ಲಿ ದೂರವಾಣಿ ಮೂಲಕ ಮಾತನಾಡಿದ ಧರ್ಮಪಾಲ್ ದೇವಾಡಿಗರು, ಹೇನಬೇರು ಪ್ರದೇಶದಲ್ಲಿ ದೇವಾಡಿಗ ಕುಟುಂಬಗಳು ಮೂಲಸೌಕರ್ಯ ವಂಚಿತರಾಗಿರುವ ಬಗ್ಗೆ ಗಮನ ಸೆಳೆದರು. ಅಲ್ಲದೇ ಅಕ್ಷತಾ ದೇವಾಡಿಗ ಕುಟುಂಬಕ್ಕೆ ಸರಕಾರದಿಂದ ಬಿಡುಗಡೆಯಾದ ಪರಿಹಾರ ಮೊತ್ತವನ್ನು ಶೀಘ್ರವೇ ಕೊಡಿಸುವಂತೆ ವಿನಂತಿಸಿದರು, ಮತ್ತು ಅಕ್ಷತಾ ಮನೆಯಲಿರುವ ಉನ್ನತ ವ್ಯಾಸಂಗ ಮಾಡಿದ ಯುವತಿಯೋರ್ವಳಿಗೆ ಕೆಲಸದ ವ್ಯವಸ್ಥೆ ಮಾಡುವ ಬಗ್ಗೆಯೂ ಶಾಸಕರ ಬಳಿ ಚರ್ಚಿಸಿದರು. ಈ ಸಂದರ್ಭ ಅವರೊಂದಿಗೆ ಮಾತನಾಡಿದ ಶಾಸಕರು ಪರಿಹಾರ ಮೊತ್ತ 5 ಲಕ್ಷವನ್ನು ಮುಂದಿನ ಹದಿನೈದು ದಿನಗಳೊಳಗಾಗಿ ಕೊಡಿಸುವ ಪ್ರಯತ್ನ ಮಾಡುತ್ತೇನೆ, ಅಲ್ಲದೇ ಅಕ್ಷತಾ ಮನೆಯಲ್ಲಿರುವ ಯುವತಿಗೆ ಉತ್ತಮ ಕೆಲಸವನ್ನು ಕೊಡಿಸುವ ಬಗ್ಗೆ ಈಗಾಗಲೇ ಕ್ರಮಕೈಗೊಂಡಿದ್ದೇನೆ, ಹೇನಬೇರ್ ರಸ್ತೆ ಅಭಿವೃದ್ಧಿಗೂ ಕ್ರಮಕೈಗೊಂಡಿದ್ದೇನೆಂದು ತಿಳಿಸಿದ್ದಾರೆ.

Devadiga Leaders_Visit_Byndoor (15) Devadiga Leaders_Visit_Byndoor (16) Devadiga Leaders_Visit_Byndoor (17) Devadiga Leaders_Visit_Byndoor (18) Devadiga Leaders_Visit_Byndoor (19) Devadiga Leaders_Visit_Byndoor (20) Devadiga Leaders_Visit_Byndoor (21)

ದೇವಾಡಿಗ ಸಮಾಜದವರೊಂದಿಗೆ ಮುಖಂಡರ ಚರ್ಚೆ

ಅಭಿವೃದ್ಧಿಗೆ ಶ್ರಮವಹಿಸೋಣ: ಯಾವುದೇ ಒಂದು ಅಭಿವೃದ್ಧಿ ಕೆಲಸವಾಗಬೇಕಾದಲ್ಲಿ ಆ ಕೆಲಸದ ಬೆನ್ನಹಿಂದೆ ಬಿದ್ದು ಅದು ಯಶಸ್ವಿಯಾಗುವವರೆಗೂ ಶ್ರಮವಹಿಸಿದಾಗ ಮಾತ್ರ ಆ ಕೆಲಸ ನಡೆಯಲು ಸಾಧ್ಯವಿದೆ. ಮೌನವಾಗಿ ಕುಳಿತರೇ ಯಾವ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ, ಅಭಿವ್ರಧಿಯೂ ಆಗುವುದಿಲ್ಲ. ನಮ್ಮ ಜವಬ್ದಾರಿಯನ್ನು ನಾವು ಅಚ್ಚುಕಟ್ಟಾಗಿ ನಿರ್ವಹಿಸಬೇಕೇ ಹೊರತು ಯಾರ ಮೇಲೆಯೂ ಅಪವಾದ ಹೊರಿಸಿ ಅವರು ಕಾರ್ಯ ಮಾಡಿಕೊಟ್ಟಿಲ್ಲ, ನಮ್ಮ ಜೊತೆಗಿಲ್ಲ ಎಂದು ಅವರತ್ತ ಬೆಟ್ಟು ಮಾಡುವುದು ಸರಿಯಲ್ಲ, ಸಂಘಟನೆಯನ್ನು ಬಲಗೊಳಿಸುವ ಕಾರ್ಯವಾಗಬೇಕು, ಯುವಕರು ಎಚ್ಚೆತ್ತುಕೊಳ್ಳಬೇಕು, ದಾರಿ ತಪ್ಪಿಸುವವರಿಂದ ದೂರವಿರಬೇಕು, ಮಹಿಳಾ ಮತ್ತು ಯುವ ದೇವಡಿಗ ಸಂಘಟನೆಗಳು ಮುಖ್ಯ ಸಂಘಟನೆಯ ಚೌಕಟ್ಟಿನಲ್ಲಿರಬೇಕು ಹಾಗಾದಾಗ ಮಾತ್ರವೇ ಎಲ್ಲವೂ ಸಸೂತ್ರವಾಗಿ ನಡೆಯಲು ಸಾಧ್ಯ. ಹೇನಬೇರು ಭಾಗದ ದೇವಾಡಿಗ ಕುಟುಂಬಗಳಿಗೆ ಸಹಕಾರ ನೀಡುವ ನಿಟ್ಟಿನಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರೋಂದಿಗೆ ಮಾತನಾಡಿ, ಗ್ರಾಮಾಭಿವೃದ್ಧಿ ಯೋಜನೆಯಿಂದ ಸಹಕಾರ ನೀಡುವಂತೆ ಒತ್ತಾಯಿಸುತ್ತೇವೆ ಎಂದು ಧರ್ಮಪಾಲ್ ದೇವಾಡಿಗ ಅವರು ಇದೇ ಸಂದರ್ಭ ಹೇಳಿದರು.

ಅಭಿವೃದ್ಧಿಯಲ್ಲಿ ರಾಜಕೀಯ ಬೇಡ- ಎಚ್. ಮೋಹನದಾಸ್
ಹತ್ಯೆಯಾದ ಅಕ್ಷತಾ ದೇವಾಡಿಗ ಅವರ ಕುಟುಂಬಕ್ಕೆ ಬೇಕಾದ ಸಹಕಾರವನ್ನು ಕೊಡಿಸಲಾಗುತ್ತದೆ. ಆಕೆಯ ಸಹೋದರಿಯರು ಯಾವ ಕ್ಷೇತ್ರದಲ್ಲಿ ಮುಂದುವರಿಯುತ್ತಾರೆಯೋ ಅದಕ್ಕೆ ಸಂಪೂರ್ಣ ಬೆಂಬ ನೀಡುತ್ತೇವೆ. ಹೇನಬೇರು ಭಾಗ ಮೂಲಸೌಕರ್ಯ ವಂಚಿತವಾಗಿದ್ದು ಈ ಬಗ್ಗೆ ನಮ್ಮ ಸಮಾಜದ ಸ್ಥಳಿಯ ಜನಪ್ರತಿನಿಧಿಗಳು ಎಚ್ಚೆತ್ತುಕೊಂದು ಈ ಬಗ್ಗೆ ಸಂಬಂದಪಟ್ಟವರ ಗಮನ ಸೆಳೆಯಬೇಕು. ಅಲ್ಲದೇ ಅಕ್ಷತಾ ಮೆಮೋರಿಯಲ್ ಪಂಡ್‌ಗೂ ಕೂಡ ಸಮಾಜದ ಎಲ್ಲಾ ಗ್ರಾ.ಪಂ. ಸದಸ್ಯರುಗಳು ಜವಬ್ದಾರಿ ತೆಗೆದುಕೋಂಡು ತಮ್ಮ ಮುಖಾಂತರವಾಗಿ ಅದಕ್ಕೆ ಹಣವನ್ನು ಒಟ್ಟುಗೂಡಿಸುವ ಕಾರ್ಯವನ್ನು ಮಾಡಬೇಕು. ಊರಿನ ಅಭಿವೃದ್ಧಿಯಲ್ಲಿ ಯಾವುದೇ ಪಕ್ಷ, ರಾಜಕೀಯವನ್ನು ಮಾಡದೇ ಸಂಘಟನೆ ಪ್ರಬಲಗೊಳಿಸಿ ಇದರ ಮೂಲಕವಾಗಿ ಸಮಾಜದ ಜನರನ್ನು ಒಗ್ಗೂಡಿಸಿ ನೊಂದವರ ಕಣ್ಣೀರು ಒರೆಸುವ ಕಾರ್ಯವನ್ನು ಜೊತೆಯಾಗಿ ಮಾಡೋಣ ಎಂದು ಮುಂಬೈ ದೇವಾಡಿಗ ಸಂಘದ ನಿಕಟಪೂರ್ವ ಅಧ್ಯಕ್ಷ ಹಿರಿಯಡಕ ಮೋಹನದಾಸ್ ಅವರು ಹೇಳಿದರು.

ಮುಂಬೈ ಸಂಘದಿಂದ ಸಂಪೂರ್ಣ ಸಹಕಾರ: ವಾಸು ದೇವಾಡಿಗ
ಅಕ್ಷತಾ ಕೊಲೆ ಪ್ರಕರಣ ನಿಜಕ್ಕೂ ಖಂಡನೀಯವಾಗಿದೆ. ಆಕೆಯ ಕುಟುಂಬಕ್ಕೆ ಈಗ ಬೇಕಾಗಿರುವುದು ಆತ್ಮಸ್ಥೈರ್ಯ. ಅಕ್ಷತಾ ಸಹೋದರಿಯರಿಬ್ಬರ ಮುಂದಿನ ವಿದ್ಯಾಭ್ಯಾಸ ಮತ್ತು ಮನೆಯ ಸಮಸ್ಯೆ ನಿವಾರಣೆಗೆ ಮುಂಬೈ ದೇವಾಡಿಗ ಸಂಘ ಸಂಪೂರ್ಣ ಸಹಕಾರ ನೀಡಲಿದೆ ಎಂದು ಮುಂಬೈ ದೇವಾಡಿಗ ಸಂಘದ ಅಧ್ಯಕ್ಷ ವಾಸು ದೇವಾಡಿಗ ಹೇಳಿದರು.

ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ತಡೆಯೋಣ: ಗಣೇಶ್ ಶೇರಿಗಾರ್
ಅತ್ಯಧಿಕ ವರದಕ್ಷಿಣೆಯ ಕೊರತೆ, ಹಣಕಾಸಿನ ತೊಂದರೆ ಮೊದಲಾದ ಸಮಸ್ಯೆಗಳಿಂದ ದೇವಾಡಿಗ ಸಮಾಜದ ಹೆಣ್ಣುಮಕ್ಕಳು ಮದುವೆಯಾಗುವುದು ವಿಳಂಭವಾಗುತ್ತಿದೆ, ಇದನ್ನು ಬಳಸಿಕೊಳ್ಳುವ ಕೆಲವು ದುಷ್ಟ ಶಕ್ತಿಗಳು ಇಂತಹಾ ಹೆಣ್ಣುಮಕ್ಕಳನ್ನು ತಮ್ಮ ಆಸೆಗೆ ಬಳಸಿಕೊಳ್ಳುವ ಹಲವು ಪ್ರಕರಣಗಳು ಇತ್ತೀಚೆಗೆ ಜಾಸ್ಥಿಯಾಗಿದೆ. ಈ ಬಗ್ಗೆ ಸೂಕ್ತ ಕ್ರಮಕೈಗೊಂಡು ಅಂತಹಾ ಘಟನೆಗಳಿಗೆ ಕಡಿವಾಣ ಹಾಕಬೇಕಿದೆ ಎಂದು ಮುಂಬೈ ದೇವಾಡಿಗ ಸಂಘದ ಜೊತೆ ಕಾರ್ಯದರ್ಶಿ ಗಣೇಶ್ ಶೇರಿಗಾರ್ ಹೇಳಿದ್ದಾರೆ.

Devadiga Leaders_Visit_Byndoor (24) Devadiga Leaders_Visit_Byndoor (26) Devadiga Leaders_Visit_Byndoor (23) Devadiga Leaders_Visit_Byndoor Devadiga Leaders_Visit_Byndoor (1) Devadiga Leaders_Visit_Byndoor (22) Devadiga Leaders_Visit_Byndoor (25) Devadiga Leaders_Visit_Byndoor (29) Devadiga Leaders_Visit_Byndoor (28) Devadiga Leaders_Visit_Byndoor (27)

ಈ ಸಂದರ್ಭದಲ್ಲಿ ಮುಂಬೈ ದೇವಾಡಿಗ ಸಂಘದ ಉಪಾಧ್ಯಕ್ಷ ರವಿ ಎಸ್. ದೇವಾಡಿಗ, ಮುಂಬೈ ಉದ್ಯಮಿ ಜನಾರ್ಧನ ಉಪ್ಪುಂದ, ದೇವಾಡಿಗ ಡಾಟ್‌ಕಾಮ್ ಸ್ಥಾಪಕರಾದ ಬಿ.ಜಿ. ಮೋಹನದಾಸ್, ಕರ್ನಾಟಕ ರಾಜ್ಯ ದೇವಾಡಿಗ ಸಂಘ ಮಂಗಳೂರು ಇದರ ಯುವಘಟಕದ ಅಧ್ಯಕ್ಷ ಅರುಣ್ ಪ್ರಶಾಂತ್, ಕರ್ನಾಟಕ ರಾಜ್ಯ ದೇವಾಡಿಗ ಸಂಘ(ರಿ) ಇದರ ಮಾಜಿ ಅಧ್ಯಕ್ಷ ಅಣ್ಣಯ್ಯ ಶೇರಿಗಾರ್, ಉಡುಪಿ ಜಿ.ಪಂ. ಶಿಕ್ಷಣ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷೆ ಗೌರಿ ದೇವಾಡಿಗ, ಬೈಂದೂರು ದೇವಾಡಿಗರ ಒಕ್ಕೂಟ (ರಿ.) ಗೌರವಾಧ್ಯಕ್ಷ ಕೆ. ನಾರಾಯಣ ದೇವಾಡಿಗ, ಅಧ್ಯಕ್ಷ ಕೆ.ಜಿ. ಸುಬ್ಬ ದೇವಾಡಿಗ, ದೇವಾಡಿಗ ಸಮಾಜ ಮುಖಂಡರಾದ ಗಿರೀಶ್ ಬೈಂದೂರು, ಎಸ್.ಡಿ. ಹೇನಬೇರು, ಏಕನಾಥೇಶ್ವರಿ ದೇವಸ್ಥಾನದ ಪ್ರಚಾರ ಸಮಿತಿ ಅಧ್ಯಕ್ಷ ನರಸಿಂಹ ದೇವಾಡಿಗ, ಯಡ್ತರೆ ಗ್ರಾ.ಪಂ. ಸದಸ್ಯ ಶಂಕರ ದೇವಾಡಿಗ ಮೊದಲಾದವರು ಉಪಸ್ಥಿತರಿದ್ದರು.

ದೇವಾಡಿಗ ನವೋದಯ ಸಂಘ ಬೆಂಗಳೂರು ಇದರ ಮಾಹಿತಿ ಕಾರ್ಯದರ್ಶಿ ಚರಣ್ ಬೈಂದೂರು ಸ್ವಾಗತಿಸಿ, ಪ್ರಸ್ತಾವನೆಗೈದರು. ಜನಾರ್ಧನ ದೇವಾಡಿಗ ಮರವಂತೆ ವಂದಿಸಿದರು.

Write A Comment