ಕನ್ನಡ ವಾರ್ತೆಗಳು

ಜುಲೈ ಅಂತ್ಯಕ್ಕೆ ಶಿರಾಟ್ ಘಾಟ್ ಸಂಚಾರ ಪುನರಾರಂಭ

Pinterest LinkedIn Tumblr

siradighate26

ಸುಬ್ರಹ್ಮಣ್ಯ,ಜೂನ್.16 : ಶಿರಾಡಿ ಘಾಟ್ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಮಳೆ ಅಡ್ಡಿಪಡಿಸಿದ್ದರಿಂದ ವಿಳಂಬವಾಗಿದೆ. ಆಧುನಿಕ ಯಂತ್ರ ಹಾಗೂ ಪರ್ಯಾಯ ವ್ಯವಸ್ಥೆಗಳನ್ನು ಕಲ್ಪಿಸಿಕೊಂಡು ಶೀಘ್ರ ಕಾಮಗಾರಿ ಮುಗಿಸಿ, ಜುಲೈ ಅಂತ್ಯಕ್ಕೆ ಸಂಚಾರ ಮುಕ್ತಗೊಳಿಸಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಮುಖ್ಯ ಅಭಿಯಂತರ ಮೃತ್ಯುಂಜಯ ಸ್ವಾಮಿ ಹೇಳಿದ್ದಾರೆ.

ನಿರಂತರ ಮಳೆಯಿಂದ ತೊಂದರೆಯಾಗಿದೆ. ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ 25 ದಿನ ಮಳೆ ಬಂದ ಕಾರಣ ಕಾಮಗಾರಿ ಆಗಿಲ್ಲ. ಕಾಮಗಾರಿಯನ್ನು ಬೇಗನೆ ಮುಗಿಸಲು ಯತ್ನಿಸುತ್ತಿದ್ದೇವೆ. 9.5 ಕಿ.ಮೀ ಕಾಂಕ್ರಿಟೀಕರಣ ಪೂರ್ಣಗೊಂಡಿದ್ದು, 3.5 ಕಿ.ಮೀ ಮಾತ್ರ ಬಾಕಿಯಿದೆ ಎಂದರು.

Write A Comment