ಕನ್ನಡ ವಾರ್ತೆಗಳು

ಪಿಸಿಆರ್ ವಾಹನಗಳಿಗೆ ಎಚ್‍ಡಿ ಕಂಟ್ರೋಲೇಬಲ್ ಕ್ಯಾಮಾರ ಆಳವಡಿಕೆ.

Pinterest LinkedIn Tumblr

Pcr_police_jeep

ಮಂಗಳೂರು,ಜೂನ್.15  ಮಂಗಳೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಎಲ್ಲಾ ಪಿಸಿಆರ್ ವಾಹನಗಳಿಗೆ ಎಚ್‍ಡಿ ಕಂಟ್ರೋಲೇಬಲ್ ಕ್ಯಾಮಾರಗಳನ್ನು ಪ್ರಾಯೋಗಿಕವಾಗಿ ಅಳವಡಿಸುವ ಕಾರ್ಯ ಆರಂಭವಾಗಿದ್ದು, ಸದ್ಯ ರಾಜ್ಯದ ಹಲವೆಡೆ ಇದರ ಪ್ರಯೋಗ ಆರಂಭವಾಗಿದೆ. ಪ್ರಾಯೋಗಿಕವಾಗಿ ಪಾಂಡೇಶ್ವರ, ಉಳ್ಳಾಲ ಹಾಗೂ ಸುರತ್ಕಲ್ ಠಾಣೆಯ ಪಿಸಿಆರ್ ವಾಹನಗಳಿಗೆ ಈಗಾಗಲೇ ಇದನ್ನು ಅಳವಡಿಸಲಾಗಿದೆ.

ಈ ಕ್ಯಾಮಾರಗಳು ಅಧಿಕ ಪಿಕ್ಚರ್ ಕ್ಲಾರಿಟಿ ಹೊಂದಿದ್ದು, ವಾಹನದ ಒಳಗಿನಿಂದಲೇ 360 ಡಿಗ್ರಿ ಸುತ್ತಳತೆಯಲ್ಲಿ 400 ಮೀ,ವರೆಗೆ ಕಾರ್ಯ ನಿರ್ವಹಣೆ ಮಾಡಬಲ್ಲುದಾಗಿದೆ.ಇನ್ನು ಇದರ ಸಂಪೂರ್ಣ ಚಿತ್ರಣ ಪಿಸಿಆರ್ ವಾಹನದೊಳಗಿನ ಮಾನಿ ಟರ್‍ನಲ್ಲಿ ಮೂಡುವ ಮೂಲಕ ಸಂಪೂರ್ಣ ಮಾಹಿತಿ ಪಡೆಯುವ ವ್ಯವಸ್ಥೆ ಕಲ್ಪಿಸಲಾಗಿದೆ. ಸದ್ಯ ಇದೊಂದು ಅಪಘಾತ ತಡೆಯಲು ಮಂಗಳೂರು ಪೊಲೀಸರು ಕೈಗೊಂಡ ವಿನೂತನ ಪ್ರಯೋಗವಾಗಿದೆ. ಆದರೆ ಇದು ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತೆ ಅನ್ನೋದನ್ನು ಕಾದು ನೋಡಬೇಕಿದೆ.

Write A Comment