ಕನ್ನಡ ವಾರ್ತೆಗಳು

ಪುರಭವನ ದುರಸ್ತಿ ಕಾಮಗಾರಿ ವಿಳಂಬ ಖಂಡಿಸಿ ಸಿಪಿಎಂ ವತಿಯಿಂದ ಪ್ರತಿಭಟನೆ

Pinterest LinkedIn Tumblr

cpim_protest_twnhall_1

ಮಂಗಳೂರು,ಜೂನ್.12 : ಇಲ್ಲಿನ ಪುರಭವನದ ದುರಸ್ತಿ ಕಾಮಗಾರಿಯನ್ನು ತಕ್ಷಣ ಪೂರ್ಣಗೊಳಿಸಿ ಸಾಂಸ್ಕೃತಿಕ ಚಟುವಟಿಕೆಗೆ ನೀಡದಿದ್ದರೆ ಮುಂದಿನ ದಿನಗಳಲ್ಲಿ ಕಲಾವಿದರನ್ನು ಒಗ್ಗೂಡಿಸಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಸಿಪಿಎಂನ ಮಂಗಳೂರು ನಗರ ದಕ್ಷಿಣ ಸಮಿತಿ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.

ಸುವರ್ಣ ಮಹೋತ್ಸವದ ಸಂಭ್ರಮ ದಲ್ಲಿ ಇರಬೇಕಾಗಿದ್ದ ಪುರಭವನ ಇಂದು ಕಾಂಗ್ರೆಸ್‌ನ ಜನಪ್ರತಿನಿಧಿಗಳ ದ್ವೇಷದ ರಾಜಕೀಯಕ್ಕೆ ಬಲಿಯಾಗಿದೆ. ದುರಸ್ತಿ ಕಾರ್ಯ ಆರಂಭಿಸಿ 9 ತಿಂಗಳಾದರೂ, ಜನಪ್ರತಿನಿಧಿಗಳು ಕಾಲಹರಣ ಮಾಡುತ್ತಿದ್ದಾರೆ. ಹೀಗಾಗಿ, ಕಲಾವಿದರನ್ನು ಒಟ್ಟು ಸೇರಿಸಿ ಬೃಹತ್‌ ಪ್ರತಿಭಟನೆ ಹಮ್ಮಿಕೊಳ್ಳು ವುದಾಗಿ ತಿಳಿಸಿದರು.

cpim_protest_twnhall_2

ಪುರಭವನ ಕಾಮಗಾರಿ ವಿಳಂಬವು ಕಾಂಗ್ರೆಸ್‌ ನೇತೃತ್ವದ ಮಹಾನಗರ ಪಾಲಿಕೆಯ ದುರಾಡಳಿತಕ್ಕೆ ಹಿಡಿದ ಕೈಗ ನ್ನಡಿಯಾಗಿದೆ. ಪುರಭವನದ ವಿಚಾರ ದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು ಮೌನ ವಹಿಸಿರು ವುದು ಅನುಮಾನಕ್ಕೆ ಎಡೆಮಾಡಿದೆ. ತಕ್ಷಣ ಜಿಲ್ಲಾಧಿಕಾರಿ ಮಧ್ಯಪ್ರವೇಶಿಸಿ, ಪುರಭವನದ ಕಾಮಗಾರಿ ಶೀಘ್ರವಾಗಿ ಮುಗಿಸು ವಂತೆ ಮುತುವರ್ಜಿ ವಹಿಸಬೇಕು ಎಂದು ಒತ್ತಾಯಿಸಿದರು.

ಮುಖಂಡರಾದ ಯೋಗೀಶ್ ಜಪ್ಪಿನಮೊಗರು, ಜಯಂತಿ ಬಿ. ಶೆಟ್ಟಿ, ಸಂತೋಷ್ ಶಕ್ತಿನಗರ, ಪ್ರೇಮನಾಥ್ ಜಲ್ಲಿಗುಡ್ಡೆ, ನವೀನ್ ಕೊಂಚಾಡಿ, ಸುರೇಶ್ ಬಜಾಲ್, ರವಿಚಂದ್ರ ಕೊಂಚಾ ಡಿ, ಸಂತೋಷ್ ಬಜಾಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Write A Comment