ಕನ್ನಡ ವಾರ್ತೆಗಳು

ಗ್ರಾ.ಪಂ.ಚುನಾವಣೆ : ಪ್ರಥಮ ಹಂತದ ಫಲಿತಾಂಶ ಪ್ರಕಟ : ಬೆಂಬಲಿಗರಿಂದ ಸಂಭ್ರಮಾಚರಣೆ

Pinterest LinkedIn Tumblr

First_Counting_End_1

ಮಂಗಳೂರು: ಗ್ರಾಮ ಪಂಚಾಯತ್ ಚುನಾವಣೆಯ ಮತ ಎಣಿಕೆ ಭರದಿಂದ ಸಾಗಿದ್ದು, ಮತ ಎಣಿಕೆಯ ಪ್ರಥಮ ಹಂತ ಮುಕ್ತಾಯವಾಗಿದೆ. ಮತ ಎಣಿಕೆ ಪೂರ್ಣಗೊಂಡ 181 ಕ್ಷೇತ್ರಗಳ ಫಲಿತಾಂಶ ಪ್ರಕಟವಾದ ನಂತರ ಗೆಲುವು ಸಾಧಿಸಿದ ಅಭ್ಯರ್ಥಿಗಳ ಬೆಂಬಲಿಗರು ಮತೆಣಿಕೆ ಕೇಂದ್ರದ ಮುಂದೆ ಸಂಭ್ರಮಿಸಿದರು.

ಬಂಟ್ವಾಳದ ಪಂಜಿಕಲ್ಲಿನಲ್ಲಿ 8 ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಜಯಭೇರಿ ಸಾಧಿಸಿದರೆ, ಮೂಲ್ಕಿಯ ಕಿಲಪ್ಪಾಡಿಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಶಾಂತ ಎಂಬುವವರು ತನ್ನ ಸೊಸೆ ಕಾಂಗ್ರೆಸ್ ಬೆಂಬಲಿತ ಮಲ್ಲಿಕಾ ಎಂಬವರ ವಿರುದ್ಧ 9 ಮತಗಳ ಜಯಭೇರಿ ಸಾಧಿಸಿದ್ದಾರೆ. ಶಾಂತ 266 ಹಾಗೂ ಮಲ್ಲಿಕಾ 257 ಮತಗಳಿಸಿದ್ದರು.

First_Counting_End_2 First_Counting_End_3 First_Counting_End_4 First_Counting_End_5 First_Counting_End_6 First_Counting_End_7 First_Counting_End_8 First_Counting_End_9 First_Counting_End_10 First_Counting_End_11 First_Counting_End_12 First_Counting_End_13 First_Counting_End_14 First_Counting_End_15 First_Counting_End_16 First_Counting_End_17

ಮನ್ನಬೆಟ್ಟು ವಾರ್ಡ್1 ರ ಮೀನಾಕ್ಷಿ, ಕಾಂಗ್ರೆಸಿನ ದೇವಿ ಪ್ರಸಾದ್ ಶೆಟ್ಟಿ, ಬೆಳಪು ವಾರ್ಡ್‍ನಿಂದ ಸುರೇಂದ್ರ ಜೋಕಟ್ಟೆ ಪಂಚಾಯತ್‍ನಿಂದ, ಬಿಜೆಪಿಯ ವಿದ್ಯಾ ಶೆಟ್ಟಿ ಬೊಳಿಯಾರ್ ವಾರ್ಡ್ 1 ರಿಂದ ಸ್ವತಂತ್ರ ಅಭ್ಯರ್ಥಿ ಇಖ್ಬಾಲ್‍ರವರು ಕೊಣಾಜೆಯಿಂದ, ಜೆರಿ ಡಿಸೋಜ ರವರು ಬೆಳ್ಮಾಣ್ ಪಂಚಾಯತ್‍ನಿಂದ ವಿಜಯಿಯಾಗಿದ್ದಾರೆ. ಬೆಳ್ತಂಗಡಿ ತಾಲೂಕಿನ ಶಿಬಜೆ ಮತ್ತು ಕಳಮಂಜದಲ್ಲಿ ಬಿಜೆಪಿಯ ಅಭ್ಯರ್ಥಿಗಳು ಗೆದ್ದಿದ್ದರೆ, ಹೊಸಂಗಡಿಯಲ್ಲಿ ಕಾಂಗ್ರೆಸಿನ ಎಲ್ಲಾ ಆಭ್ಯರ್ಥಿಗಳು ಗೆದ್ದಿದ್ದಾರೆ. ಪದವೆಟ್ಟುವಿನಲ್ಲಿ ಕಾಂಗ್ರೆಸಿನ 5 ಸೀಟುಗಳು ಗೆದ್ದಿದ್ದರೆ ಬಿಜೆಪಿಯ 4 ಸೀಟುಗಳು ಗೆದ್ದಿವೆ.

ಪಂಚಾಯತ್ ಚುನಾವಣಾ ಕಣದಲ್ಲಿದ್ದ ಜಿಲ್ಲಾ ಪಂಚಾಯತ್ ಸದಸ್ಯೆ ಸರಸ್ವತಿ ಕಾಮತ್ ಅವರಿಗೆ ಹೀನಾಯ ಸೋಲಾಗಿದೆ.

ಗ್ರಾಮ ಸಂಗ್ರಾಮದ ಆರಂಭಿಕ ಸುತ್ತಿನ ಮುನ್ನಡೆ ಪ್ರವೃತ್ತಿ ಇಂತಿದೆ. ಪ್ರಥಮ ಹಂತದಲ್ಲಿ ಮುನ್ನಡೆ ಸಾಧಿಸಿದ ಪಕ್ಷಗಳು : ಮಂಗಳೂರು ತಾ.ಪಂಚಾಯತ್ ಸಮಬಲ,ಬಂಟ್ವಾಳದಲ್ಲಿ ಬಿಜೆಪಿ,ಬೆಳ್ತಂಗಡಿಯಲ್ಲಿ ಕಾಂಗ್ರೆಸ್,ಪುತ್ತೂರಿನಲ್ಲಿ ಕಾಂಗ್ರೆಸ್ ಆರಂಭಿಕ ಸುತ್ತಿನಲ್ಲಿ ಮುನ್ನಡೆ ಸಾಧಿಸಿದೆ.

Write A Comment