ಕನ್ನಡ ವಾರ್ತೆಗಳು

ತಾಲೂಕಿನೆಲ್ಲೆಡೆ ಭರದಿಂದ ಸಾಗುತ್ತಿದೆ ವಾರಿಯರ್- ಈ ಚಿತ್ರಕಥೆಗೆ ಕುಂದಾಪುರ ಲೊಕೇಶನ್ ಸೂಪರ್

Pinterest LinkedIn Tumblr

ಕುಂದಾಪುರ: ಕರಾವಳಿಯ ಭಾಗದಲ್ಲಿ ಅದೆಷ್ಟೋ ಸಿನೆಮಾಗಳು ಚಿತ್ರೀಕರಣಗೊಂಡಿವೆ. ಅಲ್ಲದೇ ಪ್ರೇಕ್ಷಕರ ಮನಸ್ಸನ್ನು ಗೆದ್ದಿದೆ. ಕುಂದಾಪುರ ತಾಲೂಕಿನಲ್ಲಿ ಈ ಹಿಂದೆ ಚಿತ್ರೀಕರಣಗೊಂಡಿರುವುದಕ್ಕಿಂತಲೂ ಸುಂದರವಾದ, ರಮಣೀಯವಾದ ಸ್ಥಳಗಳು ಬೇಕಾದಷ್ಟಿವೆ. ಅವುಗಳನ್ನು ಉತ್ತಮವಾಗಿ ಬಳಸಿಕೊಳ್ಳುವ ಪ್ರಯತ್ನವನ್ನು ಇಲ್ಲೊಂದು ಚಿತ್ರತಂಡ ಸದ್ದಿಲ್ಲದೇ ಕೆಲವು ದಿನಗಳಿಂದ ಮಾಡುತ್ತಿದೆ.

ಯುವ ನಿರ್ದೇಶಕ ಆರ್ಯ ಅವರ ಕನಸಿನ ಕೂಸಾದ ಹಾಗೂ ನಿರ್ಮಾಪಕ ಪ್ರಭಾಕರ್ ನಿರ್ಮಾಣದ “ವಾರಿಯರ್” ಎಂಬ ಕನ್ನಡ ಚಿತ್ರದ ಚಿತ್ರೀಕರಣ ಕುಂದಾಪುರದ ಹಲವೆಡೆ ನಡೆಯುತ್ತಿದೆ. ಈ ಕುರಿತಾದ ಒಂದು ವರದಿಯಿದು.

 Varier_Movie_Kndpr (29)

Varier_Movie_Kndpr (28)

Varier_Movie_Kndpr

Varier_Movie_Kndpr (27)

Varier_Movie_Kndpr (10)

Varier_Movie_Kndpr (25) Varier_Movie_Kndpr (34) Varier_Movie_Kndpr (21)

ಕರಾವಳಿ ಹಾಗೂ ಮಲೆನಾಡನ್ನೇ ಮುಖ್ಯ ತಾಣಗಳನ್ನಾಗಿ ಆಯ್ಕೆ ಮಾಡಿಕೊಂಡ ಈ ವಾರಿಯರ್ ಕನ್ನಡ ಸ್ಕೋಪ್ ಚಿತ್ರೀಕರಣದ ಸಂದರ್ಭ ಹಳ್ಳಿಹೊಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಮಲಶಿಲೆಯ ಗುಹೆಯಲ್ಲಿ ಕಾಡುಮನುಷ್ಯರಿಂದ ಆರೈಕೆಗೊಳಗಾಗುತ್ತಿರುವ ಇಬ್ಬರು ನಾಯಕರ ಚಿತ್ರೀಕರಣ ಹಾಗೂ ಗಂಗೊಳ್ಳಿ ಭಾಗದ ಚಿತ್ರೀಕರಣದ ದೃಶ್ಯಗಳಿದು.

ಇತ್ತೀಚೆಗೆ ಬಹುತೇಕ ಚಿತ್ರಗಳು ತೆರೆಕಾಣುವಲ್ಲಿ ಸಾಕಷ್ಟು ಏಳು ಬೀಳುಗಳನ್ನು ಕಾಡುತ್ತಿದೆ. ಆ ಎಲ್ಲಾ ಸಮಸ್ಯೆಗಳನ್ನಿಟ್ಟುಕೊಂಡು ಪಂಚಭೂತಗಳನ್ನು ಕೇಂದ್ರೀಕರಿಸಿ ಪ್ರಕೃತಿ, ಗಾಳಿ ನೀರುಗಳ ನಡುವಿನ ಸಂಬಂಧಗಳು, ಮನುಷ್ಯನ ತುಮುಲಗಳನ್ನು ಹೇಗೆ ಸಮಾಜದಲ್ಲಿ ಕಾಣುತ್ತೇವೆ ಎಂಬುದನ್ನು ಪ್ರಾಮಾಣಿಕವಾಗಿ ಪ್ರೇಕ್ಷಕರ ಮುಂದಿಡುವ ಪ್ರಯತ್ನ ಮಾಡಲಾಗುತ್ತಿದೆ. ವಾರಿಯರ್ ಎಂದರೆ ಸಿಪಾಯಿ ಅಥವಾ ಯುದ್ಧ ಮಾಡುವವ ಅಥವಾ ಸೈನಿಕ ಎನ್ನುವ ಅರ್ಥವಿದ್ದು, ಹೋರಾಟ ಎನ್ನುವ ಕಲ್ಪನೆಯಲ್ಲಿ ಚಿತ್ರಕ್ಕೆ ಈ ಹೆಸರಿಡಲಾಗಿದೆ ಎಂಬುದು ನಿರ್ದೇಶಕರ ಮಾತು. ಕಥೆಗೆ ಕರವಾಳಿ ಭಾಗದ ದೃಶ್ಯಗಳು ಅಗತ್ಯವೆನಿಸಿದ್ದರಿಂದ ಬಹುತೇಕ ಕರಾವಳಿಯಲ್ಲಿ ಶೂಟಿಂಗ್ ನಡಿತಾ ಇದೆ.

Varier_Movie_Kndpr (33)  Varier_Movie_Kndpr (32) Varier_Movie_Kndpr (30)

Varier_Movie_Kndpr (31)

Varier_Movie_Kndpr (19) Varier_Movie_Kndpr (17) Varier_Movie_Kndpr (16) Varier_Movie_Kndpr (4) Varier_Movie_Kndpr (7) Varier_Movie_Kndpr (9) Varier_Movie_Kndpr (2) Varier_Movie_Kndpr (1) Varier_Movie_Kndpr (3) Varier_Movie_Kndpr (6) Varier_Movie_Kndpr (5) Varier_Movie_Kndpr (11) Varier_Movie_Kndpr (12) Varier_Movie_Kndpr (8) Varier_Movie_Kndpr (14) Varier_Movie_Kndpr (13) Varier_Movie_Kndpr (18) Varier_Movie_Kndpr (21) Varier_Movie_Kndpr (15) Varier_Movie_Kndpr (22) Varier_Movie_Kndpr (24) Varier_Movie_Kndpr (23)

ಚಿತ್ರದಲ್ಲಿ ಇಬ್ಬರು ಹೀರೋಗಳು ಮತ್ತು ಮೂವರು ಹಿರೋಯಿನ್ ಪಾತ್ರಗಳಿದ್ದು, ನಾಯಕ ನಟರಾಗಿ ಪ್ರಣವ್ ಹಾಗೂ ಪ್ರಶಾಂತ್, ಕನಸು ಮತ್ತು ಮನಸ್ಸುಗಳನ್ನು ಪ್ರತಿನಿಧಿಸುತ್ತಾರೆ. ಕಾಡು ಮನಷ್ಯರ ಪಾತ್ರಗಳೂ ಚಿತ್ರದಲ್ಲಿ ಬಹುಮುಖ್ಯ ಪಾತ್ರವಹಿಸಲಿದ್ದು, ಕನ್ನಡದ ಯುವ ನಟ ಸಂಜಯ್ ಖಳನಾಯಕನ ಪಾತ್ರವಹಿಸುತ್ತಿರುವುದು ಚಿತ್ರದ ಮೆರುಗನ್ನು ಹೆಚ್ಚಿಸುತ್ತಿದೆ. ನಾಯಕಿ ನಟಿಯರಾಗಿ ವೇದಿಕಾ ಶೆಟ್ಟಿ, ಪಾವನಾ ಹಾಗೂ ಸೋನು ನಿರ್ವಹಿಸುತ್ತಿದ್ದಾರೆ. ಹಾಸ್ಯದ ಪಾತ್ರದಲ್ಲಿ ಉಡುಪಿಯ ಸಾಸ್ತಾನ ಸಮೀಪದ ಖ್ಯಾತ ಕಲಾವಿದ ರಘು ಪಾಂಡೇಶ್ವರ ಮತ್ತು ಶೋಭಾ ನಿರ್ವಹಿಸಲಿದ್ದಾರೆ. ನಟಿ ವೇದಿಕಾ ಶೆಟ್ಟಿ ಅವರು ಉಡುಪಿ ಮೂಲದವರು. ಪ್ರಥಮವಾಗಿ ಬಣ್ಣ ಹಚ್ಚಿದರೂ ಕೂಡ ಉತ್ಸಾಹಿಯಾಗಿ ಚಿತ್ರೀಕರಣದಲ್ಲಿ ಮಿಂಚುತ್ತಿದ್ದಾರೆ. ಇನ್ನು ಈ ಚಿತ್ರದಲ್ಲಿ ಹಿರಿಯ ಕಲಾವಿದೆ ಹಾಗೂ ಖ್ಯಾತ ನಟಿ ಭವ್ಯಾ ಕೂಡ ಬಣ್ಣ ಹಚ್ಚಲಿದ್ದಾರೆ.

ಚಿತ್ರದ ನಿರ್ಮಾಪಕ ಮೈಸೂರಿನ ಪ್ರಭಾಕರ ಎಸ್., ಸಿನೆಮಾದ ಆಕ್ಷನ್‌ನ್ನು ಜಾನೀ ನಿರ್ವಹಿಸಲಿದ್ದು, ಕೊರಿಯಾಗ್ರಫಿಯನ್ನು ಗಿರೀಶ್, ಸಂಗೀತ ನಿರ್ದೇಶನವನ್ನು ನವನೀತ ಶ್ಯಾಂ ನಿರ್ವಹಿಸುತ್ತಿದ್ದಾರೆ. ಚಿತ್ರದಲ್ಲಿ ಐದು ಹಾಡುಗಳಿದ್ದು, ಆಕ್ಷನ್ ಇದೆ. ಪ್ರತಿಯೊಬ್ಬರೂ ಪರಸ್ಪರ ಹೊಂದಾಣಿಕೆಯಿಂದ ಕೆಲಸ ಮಾಡುತ್ತಿದ್ದಾರೆ.
ಸೋಮವಾರ ಕಮಲಶಿಲೆಯ ಗುಹೆಯಲ್ಲಿ ಚಿತ್ರದ ಕ್ಲೈಮಾಕ್ಸ್ ಹಂತದ ಚಿತ್ರೀಕರಣ ನಡೆದಿದ್ದು, ಮಂಗಳವಾರ ಗಂಗೊಳ್ಳಿ ಬಂದರು ಪ್ರದೇಶದಲ್ಲಿ ವಾರಿಯರ್ ಚಿತ್ರದ ಟೈಟಲ್ ಸಾಂಗ್ ಮತ್ತು ಖಳ ನಟ ಸಂಜಯ್ ಹಾಗೂ ಇತರರ ದೃಶ್ಯಗಳ ಚಿತ್ರೀಕರಣ ಭರದಿಂದ ಸಾಗುತಿದೆ.
ಸುಮಾರು ಮೂರೂವರೆ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ವಾರಿಯರ್ ಚಿತ್ರದ ಚಿತ್ರೀಕರಣ ಒಂದೇ ಶೆಡ್ಯೂಲ್‌ನಲ್ಲಿ ಮುಗಿಸುವ ಯೋಜನೆ ಹಮ್ಮಿಕೊಳ್ಳಲಾಗಿದ್ದು ಕಳೆದ ನಲ್ವತ್ತೆರಡು ದಿನಗಳಿಂದ ಚಿತ್ರೀಕರಣ ನಿರಂತರವಾಗಿ ನಡೆಯುತ್ತಿದೆ. ಶಿವಮೊಗ್ಗ, ಹಳೆನಗರ, ಹೊಸನಗರ, ಕುಂದಾಪುರ ಮರವಂತೆ ಕೊಲ್ಲೂರು, ಕಮಲಶಿಲೆಗಳಲ್ಲಿ ಚಿತ್ರೀಕರಣ ನಡೆದಿದ್ದು, ಶೇ.೯೦ರಷ್ಟು ಚಿತ್ರೀಕರಣ ಪೂರ್ಣಗೊಂಡಿದ್ದು, ಉಳಿದ ಭಾಗಗಳನ್ನು ಶೀಘ್ರ ಮುಗಿಸಲಾಗುತ್ತದೆ. ಎಲ್ಲವೂ ಸುಗಮವಾಗಿ ಸಾಗಿದರೆ ಜುಲೈ ಕೊನೆಯಲ್ಲಿ ಚಿತ್ರೀಕರಣ ತೆರೆಕಾಣುವ ಸಾಧ್ಯತೆ ಇದೆ ಎಂದು ವಾರಿಯರ್ ಚಿತ್ರದ ನಿರ್ದೇಶಕ ಯುವ ಕಲಾವಿದ ಆರ್ಯ ಹೇಳಿದ್ದಾರೆ.

ಚಿತ್ರ, ವರದಿ- ಯೋಗೀಶ್ ಕುಂಭಾಸಿ

Write A Comment