ಕನ್ನಡ ವಾರ್ತೆಗಳು

ಬಾವಿ-ಬೋರ್‌ವೆಲ್ ತೆಗೆಯಲು ಪಾಲಿಕೆ ಅನುಮತಿ ಅಗತ್ಯ

Pinterest LinkedIn Tumblr

 

suicide_deep_well

ಮಂಗಳೂರು, ಮೇ. 22: ಮಹಾನಗರ ಪಾಲಿಕೆ ವ್ಯಾಪ್ತಿಯ ಯಾವುದೇ ಜಾಗದಲ್ಲಿ ಬಾವಿ ಅಥವಾ ಕೊಳವೆಬಾವಿ ನಿರ್ಮಿಸುವ 15  ದಿನಗಳ ಮುಂಚಿತವಾಗಿ ಲಿಖಿತವಾಗಿ ಮಹಾನಗರಪಾಲಿಕೆಗೆ ತಿಳಿಸಿ ಅನುಮತಿ ಪಡೆಯಬೇಕಿದೆ.

ಸಾರ್ವಜನಿಕ ಕುಡಿಯುವ ನೀರಿನ ಮೂಲಗಳಿಂದ 500 ಮೀಟರ್ ಅಂತರದೊಳಗೆ ಬಾವಿ/ಕೊಳವೆಬಾವಿ ನಿರ್ಮಿಸಲು ಅವಕಾಶವಿರುವುದಿಲ್ಲ. ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಕೊಳವೆಬಾವಿ ಕೊರೆಯುವ ಎಲ್ಲಾ ರಿಂಗ್ ಯಂತ್ರಗಳ ಮಾಲಿಕರು ಅಂತರ್ಜಲ ಪ್ರಾಧಿಕಾರದಲ್ಲಿ ಕಡ್ಡಾಯವಾಗಿ ನೋಂದಾಯಿಸತಕ್ಕದ್ದು ಎಂದು ಮಂಗಳೂರು ಮಹಾನಗರಪಾಲಿಕೆಯ ಆಯುಕ್ತರು ತಿಳಿಸಿರುತ್ತಾರೆ.

Write A Comment