ಮಂಗಳೂರು,ಮೇ.14: ಪಂಚಾಯತ್ ರಾಜ್ ಯೋಜನೆಯನ್ನು ಬಲಿಷ್ಠಗೊಳಿಸಿ ಜನರ ಕೈಗೆ ಅಧಿಕಾರ ನೀಡಿ ಗ್ರಾಮೀಣ ಪ್ರದೇಶವನ್ನು ಅಭಿವೃದ್ಧಿ ಪಡಿಸುವ ಭರವಸೆ ನೀಡಿ ಅಧಿಕಾರಕ್ಕೆ ಬಂದಿರು ಕಾಂಗ್ರೆಸ್, ಇದೀಗ ಜನ ವಿರೋಧಿ ಕಾನೂನು ಅನುಷ್ಠಾನಕ್ಕೆ ತರುವ ಮೂಲಕ ಜನರನ್ನು ವಂಚಿಸುತ್ತಿದೆ ಎಂದು ಮಾಜಿ ಸಚಿವ ಕೃಷ್ಣ ಪಾಲೇಮಾರ್ ಆರೋಪಿಸಿದರು.ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಾಣಿಜ್ಯ ಮತ್ತು ವಾಸದ ಮನೆಗೆ ನಿರ್ಮಾಣಕ್ಕೆ ಹೊಸ ಕಾನೂನು ರೂಪಿಸುವ ನೆಪದಿಂದ ಜನರಿಗೆ ಮನೆ ನಿರ್ಮಾಣಕ್ಕೆ ಅನುಮತಿ ನೀಡಲಾಗುತ್ತಿಲ್ಲ, ಪಂಚಾಯತ್‍ನಿಂದ ಎಲ್ಲಾ ಅಧಿಕಾರವನ್ನು ಕಸಿದು ಕೊಳ್ಳಲಾಗು ತ್ತಿದ್ದು ಕಾಯ್ದೆಯ ಹೆಸರಿನಿಂದ ವಿದ್ಯುತ್ ಸಂಪರ್ಕಕ್ಕೆ ಅನುಮತಿ ನೀಡುವ ಅಧಿಕಾರವೂ ಪಂಚಾಯತ್‍ಗೆ ಇಲ್ಲವಾಗಿದೆ.
ಮುಳಿಹುಲ್ಲಿನ ಮನೆ ನಿರ್ಮಾಣ ಮಾಡಬೇಕಾದರೂ, ಮಣ್ಣಿನ ಗೋಡೆಯ ಮನೆ ನಿರ್ಮಾಣ ಮಾಡಬೇಕಾದರೂ ವಿವಿಧ ಸ್ಥರದ ಇಂಜಿನಿಯರ್ ಗಳಿಂದ ಮಂಜೂರಾತಿ ಪಡೆಯ ಬೇಕಿದೆ ಇದು ನಿಜವಾಗಿಯೂ ಹಾಸ್ಯಸ್ಪದ ಎಂದು ಪಾಲೇಮಾರ್ ತಿಳಿಸಿದರು.
9,11 ಪ್ರಮಾಣ ಪತ್ರ ಕಡ್ಡಾಯದ ಆದೇಶ ತಂದು ಬಡವರಿಗೆ ತೊಂದರೆ ನೀಡಿದ ಸರಕಾರ ಈ ಪತ್ರವನ್ನು ನೀಡಲು ತಾಲೂಕು ಪಂಚಾಯತ್ ಮೂಡಾ ಮತ್ತು ನಗರ ಆಡಳಿತ ಸಂಸ್ಥೆಗೆ ಅಧಿಕಾರ ನೀಡಿದ್ದೂ ಇಲ್ಲಿಯೂ ಪಂಚಾಯತ್ ಅಧಿಕಾರವನ್ನು ಕಡಿಮೆ ಮಾಡಲಾಗಿದೆ. ವಿವಿಧ ಯೋಜನೆಗಳಿಗೆ ಹಣ ಮೀಸಲಿಟ್ಟರೂ ಅದು ಇನ್ನೂ ವಿನಿಯೋಗ ಹಾಗಿಲ್ಲ, ಕುಡಿಯುವ ನೀರಿಗಾಗಿ ಬೋರ್‌ವೆಲ್ ತೋಡಲಾಗಿದೆಯಾದರೂ ಒಂದರಲ್ಲೂ ನೀರು ಬರುತ್ತಿಲ್ಲ, ಇದು ಸರಕಾರದ ಬೇಜವಬ್ದಾರಿ ವರ್ತನೆಯಾಗಿದೆ ಇಂತಹ ಸರಕಾರಕ್ಕೆ ಜನರೇ ಉತ್ತರ ನೀಡುತ್ತಾರೆ ಎಂದು ಅವರು ತಿಳಿಸಿದರು

