ಮಂಗಳೂರು,ಎಪ್ರಿಲ್.27 : ಮಂಗಳೂರಿನ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಒಲಿಂಪಿಕ್ `ರಾಷ್ಟ್ರೀಯ ಫೆಡರೇಶನ್ ಕಪ್ ಅಥ್ಲೆಟಿಕ್ಸ್ ಕೂಟ’ ಏ. 30ರಿಂದ ಮೇ 4ರ ತನಕ ನಡೆಯಲಿದ್ದು ಕ್ರೀಡಾಕೂಟದ ಸಿದ್ಧತೆಯನ್ನು ದ.ಕ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಅವರು ಸೋಮವಾರ ಮಂಗಳಾ ಕ್ರೀಡಾಂಗಣದಲ್ಲಿ ಪರಿಶೀಲಿಸಿದರು.
ಮಂಗಳಾ ಕ್ರೀಡಾಂಗಣದಲ್ಲಿ ನಡೆಯುವ ಈ ರಾಷ್ಟ್ರ ಮಟ್ಟದ ಕ್ರೀಡಾಕೂಟಕ್ಕೆ ಕ್ರೀಡಾಂಗಣದಲ್ಲಿ ಅಗತ್ಯ ಕಾಮಗಾರಿಗಳು ಭರದಿಂದ ಸಾಗುತ್ತಿದೆ. ಈ ಕ್ರೀಡಾಕೂಟದಲ್ಲಿ ವಿವಿಧ ರಾಜ್ಯಗಳ 700 ಕ್ರೀಡಾಪಟುಗಳು ಸೇರಿದಂತೆ ಎರಡು ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಲಿದ್ದಾರೆ. 47 ವಿವಿಧ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಮುಂದೆ ನಡೆಯುವ ಏಷ್ಯಾನ್, ಒಲಿಂಪಿಕ್ಸ್ನಂತಹ ಮಹತ್ವದ ಕ್ರೀಡಾಕೂಟಕ್ಕೆ ಕ್ರೀಡಾಳುಗಳ ಆಯ್ಕೆ ಇಲ್ಲಿಯೇ ನಡೆಯಲಿದೆ
