ಕನ್ನಡ ವಾರ್ತೆಗಳು

ಇಂದಿರಾ ಕೊಲೆ ಪ್ರಕರಣ: ಆರೋಪಿಗೆ ಕಠಿಣ ಆಗಬೇಕು; ಕುಂದಾಪುರದಲ್ಲಿ ಮಹಿಳಾ, ಮಕ್ಕಳ ಮಿತ್ರರ ಆಗ್ರಹ

Pinterest LinkedIn Tumblr

ಕುಂದಾಪುರ: ಬೀಜಾಡಿ ನಿವಾಸಿ ಇಂದಿರಾ ಮೊಗವೀರ ಅವರ ಅಮಾನವೀಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತಪ್ಪಿತಸ್ಥರಿಗೆ ತಕ್ಷಣ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿ ಕುಂದಾಪುರ ತಾಲೂಕು ಮಹಿಳಾ ಮತ್ತು ಮಕ್ಕಳ ಮಿತ್ರರು ಪ್ರತಿಭಟನೆ ನಡೆಸಿ, ಸಹಾಯಕ ಆಯುಕ್ತರು ಮತ್ತು ಪೊಲೀಸ್ ವೃತ್ತ ನಿರೀಕ್ಷಕರಿಗೆ ಮನವಿ ಸಲ್ಲಿಸಿದರು.

Kundapura_Ladies_Protest Kundapura_Ladies_Protest (1) Kundapura_Ladies_Protest (2) Kundapura_Ladies_Protest (3) Kundapura_Ladies_Protest (4) Kundapura_Ladies_Protest (5) Kundapura_Ladies_Protest (6) Kundapura_Ladies_Protest (7) Kundapura_Ladies_Protest (8) Kundapura_Ladies_Protest (9) Kundapura_Ladies_Protest (10) Kundapura_Ladies_Protest (11) Kundapura_Ladies_Protest (12) Kundapura_Ladies_Protest (13) Kundapura_Ladies_Protest (14) Kundapura_Ladies_Protest (15) Kundapura_Ladies_Protest (16) Kundapura_Ladies_Protest (17) Kundapura_Ladies_Protest (18) Kundapura_Ladies_Protest (19) Kundapura_Ladies_Protest (20) Kundapura_Ladies_Protest (21)

ಬುಧವಾರ ಕುಂದಾಪುರ ಶಾಸ್ತ್ರೀವೃತ್ತದಿಂದ ಸಹಾಯಕ ಆಯುಕ್ತರ ಕಛೇರಿಯ ತನಕ ಮೆರವಣಿಗೆಯಲ್ಲಿ ಸಾಗಿದ ಮಹಿಳಾ ಮತ್ತು ಮಕ್ಕಳ ಮಿತ್ರರು ಮತ್ತು ಸಿ.ಡಬ್ಲ್ಯೂಸಿ ಸಂಸ್ಥೆಯ ಸಿಬ್ಬಂದಿಗಳು ಇಂಥಹ ಅವಘಡಗಳು ಮತ್ತೆ ನಡೆಯಲು ಅವಕಾಶ ಮಾಡಿಕೊಡಬಾರದು, ಆರೋಪಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದರು.

ತಾಲೂಕಿನಲ್ಲಿ ಮಹಿಳೆಯರು ಮತ್ತು ಮಕ್ಕಳಿಗೆ ಎಲ್ಲಾ ರೀತಿಯ ಶೋಷಣೆ ದೌರ್ಜನ್ಯಗಳಿಂದ ರಕ್ಷಣೆಯ ಬಗ್ಗೆ ತಾಲೂಕಿನ ೨೦೧೪ರ ಸೆಪ್ಟೆಂಬರ್‌ನಲ್ಲಿ ನಡೆದ ಮಹಿಳಾ ಮತ್ತು ಮಕ್ಕಳ ರಕ್ಷಣೆ ಕುರಿತು ವಿಶೇಷ ಗ್ರಾಮ ಸಭೆಗಳಲ್ಲಿ ಬಂದ ಸಮಸ್ಯೆಗಳು ಮತ್ತು ಅವುಗಳಿಗೆ ಆಗಬೇಕಾದ ಪರಿಹಾರಗಳಲ್ಲಿ ತುರ್ತಾಗಿ ಆಗಬೇಕಾದ ಕ್ರಮಗಳನ್ನು ಕೂಡಲೆ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು.

ಅಕ್ರಮ ಮದ್ಯ ಮಾರಾಟದಿಂದ ಇಂಥಹ ಕೃತ್ಯಗಳು ಘಟಿಸುತ್ತಿದ್ದು, ಅಕ್ರಮ ಮದ್ಯಮಾರಾಟವನ್ನು ಕಟ್ಟು ನಿಟ್ಟಾಗಿ ನಿರ್ಬಂದಿಸಬೇಕು, ಅಯಕಟ್ಟಿನ ಸ್ಥಳಗಳಲ್ಲಿ ಪೊಲೀಸ್ ಬೀಟ್‌ನ್ನು ನಿರಂತರ ವ್ಯವಸ್ಥೆ ಮಾಡಬೇಕು ನಿರಂತರ ಜನಸಂಪರ್ಕ ಸಭೆಗಳ ವ್ಯವಸ್ಥೆ ಮಾಡಬೇಕು ಹಾಗೂ ಬೀಜಾಡಿ ಇಂದಿರಾ ಸಾವಿಗೆ ಕಾರಣನಾದವನಿಗೆ ಕಠಿಣ ಶಿಕ್ಷೆ ವಿಧಿಸುವುದರ ಜೊತೆಗೆ ಆತನೊಂದಿಗೆ ಇನ್ನೂ ಇಬ್ಬರು ಇದ್ದಾರೆ ಎನ್ನಲಾಗುತ್ತಿದ್ದು ಅವರ ವಿಚಾರಣೆಯೂ ನಡೆಯಬೇಕಿದೆ ಎಂದು ಪ್ರತಿಭಟನಾ ನಿರತರು ಆಗ್ರಹಿಸಿದರು.

ಸಹಾಯಕ ಆಯುಕ್ತೆ ಚಾರುಲತಾ ಸೋಮಲ್ ಮತ್ತು ವೃತ್ತ ನಿರೀಕ್ಷಕ ದಿವಾಕರ್ ಮನವಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಪ್ರಭಾವತಿ ಶೆಟ್ಟಿ, ಫಿಲೋಮಿನಾ, ರವೀಂದ್ರ ದೊಡ್ಮನೆ, ದೇವಿ ಗೋಳಿಹೊಳೆ ಮತ್ತು ನಮ್ಮ ಭೂಮಿ ಕಾರ್ಯಕರ್ತರು ಉಪಸ್ಥಿತರಿದ್ದರು.

Write A Comment