ಕನ್ನಡ ವಾರ್ತೆಗಳು

ನಿಮ್ಮದು ಸ್ವಲೀನ ಮಗುವೇ?

Pinterest LinkedIn Tumblr

bhec18autism2

-ಡಾ. ಸುಜ್ಞಾನಿ
ಅಜಯ್‌ ತನ್ನದೇ  ಪ್ರಪಂಚದಲ್ಲಿ ಇರುವಂತೆ ತೋರುತ್ತದೆ. ಆತನ ಹೆಸರು ಕರೆದಾಗ ನಮ್ಮತ್ತ ನೋಡುವುದಿಲ್ಲ. ಅವನೊಂದಿಗೆ ಮಾತನಾಡಿದರೆ, ನಾವು ಹೇಳುವುದನ್ನು  ಕೇಳಿಸಿ ಕೊಳ್ಳುವಂತೆ ಕಾಣುವುದಿಲ್ಲ. ಆಟದ ಸಾಮಾನುಗಳೊಂದಿಗೆ ಆಡಲು ಆಸಕ್ತಿ ತೋರಿಸುವುದಿಲ್ಲ. ಅವನು ತನ್ನ ಬೇಕು ಬೇಡಗಳನ್ನು ವ್ಯಕ್ತಪಡಿಸುವುದಿಲ್ಲ. ಏನಾದರೂ ಬೇಕಾದಾಗ ತಾಯಿಯ ತೋಳನ್ನು ಹಿಡಿದು ಅದರತ್ತ ಜಗ್ಗುತ್ತಾನೆ. ಅವನು ಮೊದಮೊದಲು ತೊದಲು ಮಾತುಗಳನ್ನು ಆಡುತಿದ್ದ, ಈಗ ಯಾವ ಪದವನ್ನು ಹೇಳುವುದಿಲ್ಲ. ಅವನು ಉದ್ರೇಕವಾದಾಗ ತನ್ನ ಕೈಗಳನ್ನು ರೆಕ್ಕೆಯಂತೆ ಬಡಿಯುತ್ತಾನೆ. ಅಜಯ್‌ ಆಟಿಸಂ (ಸ್ವಲೀನ) ಇರುವ ಮಗು.

ಆಟಿಸಂ ಇರುವ ಮಕ್ಕಳು, ಬೆಳವಣಿಗೆಯ ಮೂರು ಮುಖ್ಯ ಕ್ಷೇತ್ರದಲ್ಲಿ ತೊಂದರೆ ಅನುಭವಿಸುತ್ತಾರೆ.
1. ಸಾಮಾಜಿಕ ವ್ಯವಹಾರದಲ್ಲಿ
2. ಮಾತು ಮತ್ತು ಸಂವಹನದಲ್ಲಿ
3. ಆಲೋಚನೆಯಲ್ಲಿ ವೈವಿಧ್ಯ ಮತ್ತು ಕಲ್ಪನೆಯ ಕೊರತೆ.

ಆಟಿಸಂ ಮಕ್ಕಳು ಸದಾ ಒಂಟಿಯಾಗಿರುತ್ತಾರೆ. ಬೇರೆ ಮಕ್ಕಳೊಂದಿಗೆ ಬೆರೆಯುವುದಿಲ್ಲ, ಮುಖಾಮುಖಿಯಾಗಿ ನೋಡುವುದಿಲ್ಲ ಮತ್ತು ಭಾವನೆಗಳಿಗೆ ಸ್ಪಂದಿಸುವುದಿಲ್ಲ. ಈ ಮಕ್ಕಳು ನಿಧಾನವಾಗಿ ಮಾತನಾಡಲು ಕಲಿತುಕೊಳ್ಳುತ್ತಾರೆ. ಕೆಲವು ಮಕ್ಕಳಿಗೆ ಮಾತನಾಡಲು ಬರುವುದಿಲ್ಲ ಮತ್ತು ಇನ್ನೂ ಕೆಲವು ಮಕ್ಕಳು ಪದಗಳ ಅರ್ಥ ತಿಳಿಯದೆ  ಒಂದೇ ಪದವನ್ನು ಮೇಲಿಂದ ಮೇಲೆ ಉಚ್ಚರಿಸುತ್ತಿರುತ್ತಾರೆ. ಈ ಮಕ್ಕಳು ಒಂದೇ ರೀತಿಯ ಚಟುವಟಿಕೆಗಳನ್ನು ಮಾಡಲು ಇಷ್ಟಪಡುತ್ತಾರೆ. ವಿಚಿತ್ರವಾಗಿ ಅಂಗಾಂಗಗಳನ್ನು ತೇಲಿಸುತ್ತಿರುತ್ತಾರೆ.

ಸದಾ ಒಂಟಿಯಾಗಿರುತ್ತಾರೆ
*ಆಟಿಸಂ ಮಕ್ಕಳು ಸದಾ ಒಂಟಿಯಾಗಿರುತ್ತಾರೆ.
*ಬೇರೆ ಮಕ್ಕಳೊಂದಿಗೆ ಬೆರೆಯುವುದಿಲ್ಲ,
*ಮುಖಾಮುಖಿಯಾಗಿ ನೋಡುವುದಿಲ್ಲ ಮತ್ತು ಭಾವನೆಗಳಿಗೆ ಸ್ಪಂದಿಸುವುದಿಲ್ಲ.
*ಈ ಮಕ್ಕಳು ನಿಧಾನವಾಗಿ ಮಾತನಾಡಲು ಕಲಿತುಕೊಳ್ಳುತ್ತಾರೆ.

ಇಂಥ ಮಕ್ಕಳಿಗೆ ನಾವು ಹೇಗೆ ಸಹಾಯ ಮಾಡಬಹುದು?
ಆಟಿಸಂ ಮಕ್ಕಳನ್ನು ಇತರರೊಂದಿಗೆ ಬೆರೆಯಲು, ವ್ಯವಹರಿಸಲು ಮತ್ತು ಸಂವಹನ ಮಾಡಲು ಕಲಿಸಬೇಕು. ಮಾತು ಕಲಿಸಲು ವಾಗ್ದೋಷ ಚಿಕಿತ್ಸಕರ ಸಹಾಯ ಪಡೆಯಿರಿ. ಮಕ್ಕಳ ಮನೋವೈದ್ಯರಿಂದ ಅಥವಾ ಮನೋಶಾಸ್ತ್ರಜ್ಞರಿಂದ ಅತ್ಯಂತ ಪ್ರಭಾವಶಾಲಿಯಾದ ವರ್ತನ ಚಿಕಿತ್ಸೆ ಪಡೆದುಕೊಂಡು, ಆಟಿಸಂ ಮಕ್ಕಳಿಗೆ ಮನೆಯಲ್ಲೇ ತರಬೇತಿ ಕೊಡಬೇಕು. ಆಟಿಸಂ ಇರುವ ಮಕ್ಕಳ ಪೋಷಕರು ಆಟಿಸಂ ಸಂಘ ಸಂಸ್ಥೆಗಳೊಡನೆ ಸಂಪರ್ಕ ಹೊಂದಬೇಕು. ಹೆಚ್ಚಿನ ಮಾಹಿತಿಗೆ www.autism.org ಸಂಪರ್ಕಿಸಿ .

Write A Comment