ಕನ್ನಡ ವಾರ್ತೆಗಳು

ಉಳ್ಳಾಲ ಉರೂಸ್ ಪ್ರಯುಕ್ತ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮ

Pinterest LinkedIn Tumblr

Haroon_Ahsani_photo_1

ಉಳ್ಳಾಲ.ಎ.17 : ದ್ಸಿಕ್ರ್ ಮತ್ತು ಸ್ವಲಾತ್‌ಗಳನ್ನು ಹೇಳುವವರು ಮತ್ತು ಅದರ ಮೇಲೆ ಹೆಚ್ಚು ಆಸಕ್ತಿ ಹೊಂದಿದವರು ಅಹ್ಲ್ ಸುನ್ನತ್ ಜಮಾ‌ಅತ್‌ನ ಜನರಾಗಿದ್ದಾರೆ. ದ್ಸಿಕ್ರ್ ಮತ್ತು ಸ್ವಲಾತ್‌ನ ಮಹತ್ವನ್ನು ಅರ್ಥಮಾಡಿಕೊಂಡು ಕುರಾನ್ ಓದುವುದು ದ್ಸಿಕ್ರ್, ಸ್ವಲಾತ್‌ನಲ್ಲಿ ನಿರತರಾಗಿ ಅಲ್ಲಾಹನ ಆರಾಧನೆಯಲ್ಲಿ ತೊಡಗಬೇಕು. ಉತ್ತಮ ಸಂಪ್ರದಾಯಗಳನ್ನು ಬೆಳೆಸಿಕೊಂಡು ನಮಾಜ್‌ನಲ್ಲಿ ತನ್ನ ಜೀವನದ ಹಾದಿಯಲ್ಲಿ ಬೆಳೆಸಿಕೊಂಡು ಬರಬೇಕೆಂದು ಎಂದು ಹಾರೂನ್ ಅಹ್ಸನಿ ಹೇಳಿದರು.

ಅವರು ಉಳ್ಳಾಲ ಉರೂಸ್ ಪ್ರಯುಕ್ತ ನಡೆದ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಅಲ್ಲಾಹನ ಪ್ರಾರ್ಥನೆಯಲ್ಲಿ ನಿರಂತರವಾಗಿ ತೊಡಗಿ ಕೊಂಡವರಿಗೆ ಪರಲೋಕದಲ್ಲಿ ರಕ್ಷಣೆ ಇದೆ. ಈಮಾನ್ ಹೃದಯದಲ್ಲಿ ಇದ್ದರೆ ದಾರಿ ತಪ್ಪಿಹೋಗಲು ಸಾಧ್ಯವಿಲ್ಲ. ಇಸ್ಲಾಂನ ಬಗ್ಗೆ ಕೂಲಂಕಷವಾಗಿ ಅರ್ಥಮಾಡಿಕೊಂಡವರು ನೂತನ ಸಿದ್ದಾಂತವನ್ನು ಸಾರಲು ಸಾಧ್ಯವಿಲ್ಲ ಎಂದರು.

Haroon_Ahsani_photo_2

ಜಾಮೀಯ ಅಝೀಝಿಯಾ ಅರೆಬಿಕ್ ಕಾಲೇಜಿನ ಪ್ರಾಂಶುಪಾಲರಾದ ಮಾಡವನ ಇಬ್ರಾಹಿಂ ಕುಟ್ಟಿ ಮುಸ್ಲಿಯಾರ್ ಧಾರ್ಮಿಕ ಉಪನ್ಯಾಸ ನೀಡಿದರು.ಖಾಝಿ ಪಝಲ್ ಕೋಯಮ್ಮ ತಂಙಳ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ದರ್ಗಾ ಅಧ್ಯಕ್ಷ ಯು.ಎಸ್. ಹಂಝ ಅತಿಥಿಗಳನ್ನು ಸ್ವಾಗತಿಸಿದರು. ಹೈದರ್ ಮದನಿ ಅಝರಿಯ ದುವಾ ನೆರವೇರಿಸಿದರು.

ಮುಖ್ಯ ಅತಿಥಿಗಳಾಗಿ ಯು.ಟಿ. ಇಲ್ಯಾಸ್ ಕಲ್ಲಾಪು, ಬಿಲಾಲ್ ಮಹಮ್ಮದ್ ಹಾಜಿ, ಕೋಶಾಧಿಕಾರಿ ಬಾವಾ ಹಾಜಿ ಅಝಾದ್‌ನಗರ, ಅಝೀಝ್ ಹಾಜಿ ಅಝಾದ್‌ನಗರ, ದರ್ಗಾ ಕಾರ್ಯದರ್ಶಿ ಯು.ಟಿ. ಇಲ್ಯಾಸ್, ಉಪಾಧ್ಯಕ್ಷ ಅಹ್ಮದ್ ಅಶ್ರಫ್ ರೈಟ್‌ವೇ, ನಾಝಿಂ ಮುಕಚೇರಿ, ಅಬ್ಬಾಸ್ ಹಾಜಿ ಅಝಾದ್ ನಗರ, ಯು.ಎಚ್. ಅಹ್ಮದ್ ಸಿ.ಎ., ಇಮಾಂ ಬಾಸಿತ್ ಮದನಿ ಅಝಾದ್ ನಗರ, ಇಸ್ಮಾಯಿಲ್ ಮುಕಚೇರಿ, ಮೋಂಙಂ ಫೈಝಿ ಮೊದಲಾದವರು ಉಪಸ್ಥಿತರಿದ್ದರು.

ullalla_urus_photo_1 ullalla_urus_photo_2 ullalla_urus_photo_3 ullalla_urus_photo_4 ullalla_urus_photo_5

ಉಳ್ಳಾಲ: ಇಲ್ಲಿನ ಸಯ್ಯಿದ್ ಮದನಿ ಅರೆಬಿಕ್ ಕಾಲೇಜ್ ರಾಜ್ಯದಲ್ಲಿ ಹೆಸರುಗಳಿಸಲು ತಾಜುಲ್‌ಉಲಮಾ ಅವರೇ ಕಾರಣಕರ್ತರಾಗಿದ್ದಾರೆ. ಉಳ್ಳಾಲ ಈಗ ಲೋಕ ಪ್ರಸಿದ್ದಿಯಾಗಿದೆ. ಇಲ್ಲಿ ವಿದ್ಯಾಭ್ಯಾಸ ಪಡೆದು ಮದನಿ ಪದವಿ ಪಡಕೊಂಡವರಿಗೆ ಉತ್ತಮ ಸ್ಥಾನ ಇದೆ. ಇಲ್ಲಿ ಅರೆಬಿಕ್ ಕಾಲೇಜ್, ಶಿಕ್ಷಣ ಬೆಳೆಯಲು ತಾಜುಲ್ ಉಲಮಾರವರ ಪಾತ್ರ ಬಹಳಷ್ಟಿದೆ. ಎಂದು ಸಿ.ಕೆ. ಕುಂಜ್ಞಾಲಿ ಮದನಿ ಗೂಡಲ್ಲೂರು ಹೇಳಿದರು

ಅವರು ಉಳ್ಳಾಲದಲ್ಲಿ ದರ್ಗಾ ಉರೂಸ್ ಪ್ರಯುಕ್ತ ಗುರುವಾರ ನಡೆದ ಮದನಿ ಸಂಗಮದಲ್ಲಿ ಮುಖ್ಯ ಭಾಷಣಗಾರರಾಗಿ ಮಾತನಾಡಿದರು. ತಾಜುಲ್‌ಉಲೇಮಾ ಅವರ ಜೀವನ ಕಾಲದಲ್ಲಿ ಕಾಲಹರಣ ಮಾಡಿದವರಲ್ಲ. ಸಿಕ್ಕಿದ ಸಮಯದಲ್ಲಿ ಅವರು ಧಾರ್ಮಿಕ ಗ್ರಂಥಗಳನ್ನು ಅಧ್ಯಯನ ಮಾಡುತ್ತಿದ್ದರು. ಶಿಕ್ಷಣಕ್ಕೆ ಮಹತ್ವ ಕೊಡುತ್ತಿದ್ದರು. ಅವರ ಎಲ್ಲಾ ಪ್ರಯತ್ನಗಳಿಂದ ಅರೆಬಿಕ್ ಕಾಲೇಜ್ ಉಳ್ಳಾಲದಲ್ಲಿ ಬೆಳೆದು ನಿಂತಿದೆ. ಈ ಕಾಲೇಜ್‌ನಲ್ಲಿ ಶಿಕ್ಷಣ ಪಡೆಯುವವರಿಗೆ ಅಪಾರ ಗೌರವ ಕೂಡಾ ಇದೆ. ಇಲ್ಲಿ ವಿದ್ಯಾರ್ಥಿಗಳಿಗೆ ಬೋಧನೆ ಮಾಡಲು ಅರ್ಹರಾದ ಗುರುಗಳು ಕೂಡಾ ಇದ್ದಾರೆ. ಪ್ರವಾದಿಯವರು ಇಸ್ಲಾಂ ಧರ್ಮ ಬೋದನೆಯ ವಿಚಾರದಲ್ಲಿ ಏನೆಲ್ಲ ಉಪದೇಶ ನೀಡಿದ್ದಾರೆಯೋ ಅದೇ ಹಾದಿಯಲ್ಲಿ ಶಿಕ್ಷಣ ಉಳ್ಳಾಲದಲ್ಲಿ ಮುಂದುವರಿಯುತ್ತಿರುವುದು ಶ್ಲಾಘನೀಯ ಎಂದರು.

ullalla_urus_photo_6 ullalla_urus_photo_7 ullalla_urus_photo_8 ullalla_urus_photo_9

ಅಹ್ಮದ್ ಬಾವ ಮುಸ್ಲಿಯಾರ್ ಮಾತನಾಡಿ,ತಾಜುಲ್ ಉಲಮಾ ಅವರಿಗೆ ಉಳ್ಳಾಲದಲ್ಲಿ ನೆಲೆಕಲ್ಪಿಸಿಕೊಡುವ ದೃಷ್ಟಿಯಿಂದ ಉಳ್ಳಾಲದಲ್ಲಿ ಸಯ್ಯದ್ ಮದನಿ ಅರೆಬಿಕ್ ಕಾಲೇಜ್‌ಗೆ ಚಾಲನೆ ನೀಡಲಾಯಿತು. ಅವರ ನೇತೃತ್ವದಲ್ಲಿ ಧಾರ್ಮಿಕ ಶಿಕ್ಷಣ ಪಡೆದು ಮದನಿ ಪದವು ಪಡೆದುಕೊಂಡು ಹೋದವರು ಉತ್ತಮ ಜೀವನ ನಡೆಸುತ್ತಿದ್ದಾರೆ ಎಂದರು. ಅಸ್ಸಯ್ಯಿದ್ ಅಬೂಬಕರ್ ಚೆರುಕುಂಞಿ ತಂಙಳ್ ದುವಾ ನೆರವೇರಿಸಿದರು. ಉಳ್ಳಾಲ ದರ್ಗಾ ಅಧ್ಯಕ್ಷ ಯು.ಎಸ್. ಹಂಝ ಅತಿಥಿಗಳನ್ನು ಸ್ವಾಗತಿಸಿದರು. ಶೈಖುನಾ ಆಶಿಕುರ್ರಸೂಲ್ ತಾಯಿಕ್ಕೋಡ್ ಉಸ್ತಾದ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಯ್ಯದ್ ಜಮಲುಲ್ಲೈಲಿ ತಂಙಳ್ ಕಾಜೂರು ಪ್ರಾಸ್ತಾವಿಕ ಭಾಷಣ ಮಾಡಿದರು.ಎಸ್‌ಎಂಎ ಕಾಲೇಜ್‌ನ ಪ್ರೊಫೆಸರ್ ಅಬ್ದುರ್ರಶೀದ್ ಮದನಿ ಆಲಪ್ಪುಝ ಅಭಿನಂದನಾ ಭಾಷಣ ಮಾಡಿದರು.

ಈಸಂದರ್ಭದಲ್ಲಿ ಅರೆಬಿಕ್ ಕಾಲೇಜಿನ ಪ್ರಿನ್ಸಿಪಾಲ್ ತಾಯಿಕ್ಕೋಡ್ ಉಸ್ತಾದ್, ಅರೆಬಿಕ್ ಕಾಲೇಜಿನ ಪ್ರೊಫೆಸರ್‌ಗಳಾದ ಅಸ್ಸಯ್ಯದ್ ಅಬೂಬಕರ್ ಚೆರುಕುಂಞಿ ತಂಙಳ್, ಅಹ್ಮದ್ ಬಾವಾ ಮುಸ್ಲಿಯಾರ್, ಅಬ್ದುರ್ರಶೀದ್ ಮದನಿ ಆಲಪುಝ್ಝ , ವಕ್ಫ್ ಸಲಹಾ ಸಮಿತಿ ಸದಸ್ಯ ಹನೀಫ್ ಹಾಜಿ, ಮಂಗಳೂರು ವಿವಿಯಲ್ಲಿ ಪದವೀದರಾಗಿದ್ದುಕೊಂಡು ಉತ್ತಮ ಸ್ಥಾನ ಪಡೆದ ಸಿನಾನ್ ಮದನಿ ಅಲ್‌ಹಝರಿ ಕಲ್ಲಡ್ಕರವರನ್ನು ಸನ್ಮಾನಿಸಲಾಯಿತು.

ಅಬೂಬಕರ್ ಸಿದ್ದೀಕ್ ತಂಙಳ್ ಮುರಾ, ಸಯ್ಯಿದ್ ಅಬೂಬಕರ್ ತಂಙಳ್ ಕುಡುವಳ್ಳಿ, ಜೆಪ್ಪು ಅಬ್ದುಲ್ ರಹ್ಮಾನ್ ಮದನಿ, ಬಶೀರ್ ಮದನಿ ಅಲ್‌ಕಾಮಿಲಿ ಕೂಳೂರು, ಪಿ.ಕೆ.ಮಹಮ್ಮದ್ ಮದನಿ ಉಚ್ಚಿಲ,ಇಸ್ಮಾಯಿಲ್ ಮದನಿ ನೆಕ್ಕಿಲಾಡಿ,ಮಹಮ್ಮದ್ ಮದನಿ ಪಟ್ಟಾಬಿ, ಇಸ್ಮಾಯಿಲ್ ಮದನಿ ಯುರೋಪ್, ಅಬ್ದುಲ್ ಖಾದರ್ ಮದನಿ ಪಲ್ಲಂಗೋಡ್,ಹೈದರ್ ಮದನಿ ಅಝ್‌ಹರಿಯಾ, ಅಬ್ಬಾಸ್ ಮದನಿ ಬಂಡಾಡಿ, ಮುಹಿದ್ದೀನ್ ಮದನಿ ಕಟ್ಟತ್ತಿಲ, ಅಝೀಝ್ ಮದನಿ ಬಿಜಾಪುರ, ಬಾಸಿತ್ ಮದನಿ ಉಳ್ಳಾಲ, ಮಹಮ್ಮದ್ ಮದನಿ ಸಾಮಣಿಗೆ, ಸಲೀಂ ಬೈರಿಕಟ್ಟೆ, ಮಹಮ್ಮದ್ ಮದನಿ ಮರ್ಸಿನ್, ಜಲಾಲ್ ಮದನಿ ಉಳ್ಳಾಲ, ರಿಯಾಝ್ ಮದನಿ ಬಂಟ್ವಾಳ, ಇಸ್ಮಾಯಿಲ್ ಬುಖಾರಿ ಮದನಿ ನೂಜಿ, ಹಮೀದ್ ಮದನಿ ಬೊಳಂತೂರು, ಮುಸ್ತಫಾ ಮದನಿ ಉಳ್ಳಾಲ ಹಮೀದ್ ಮದನಿ ಬೊಳ್ಮಾರ್,ಇಬ್ರಾಹಿಂ ಮದನಿ ಮಂಚಿ, ಸಲಾಂ ತಂಙಳ್ ಪೂಂಜಾಲ್‌ಕಟ್ಟೆ,ಹಮೀದ್ ಪೈಝಿ ಬಂಗಾಡಿ, ಅಶ್ರಫ್ ಅಹ್ಮದ್ ರೈಟ್ವೇ, ನಾಝಿಂ ಮುಕಚೇರಿ, ಹಮೀದ್ ಕಲ್ಲಾಪು, ಅಝೀಝ್ ಸಖಾಫಿ ಉಳ್ಳಾಲ ಮೊದಲಾದವರು ಉಪಸ್ಥಿತರಿದ್ದರು. ಮಹಮ್ಮದ್ ಸಾಬೀತ್ ಮಾರ್ಗತಲೆ ಕಿರಾ‌ಅತ್ ಪಠಿಸಿದರು. ಆರ್.ಕೆ. ರಫೀಕ್ ಮದನಿ ಕಾರ್ಯಕ್ರಮ ನಿರೂಪಿಸಿದರು.

_ ಆರೀಫ್ ಕಲ್ಲಕಟ್ಟ

Write A Comment