ಕನ್ನಡ ವಾರ್ತೆಗಳು

ಪವರ್ ಕಟ್ ಸಮಸೈಗೆ ಇಲ್ಲಿದೆ ಸೊಲ್ಯೂಷನ್ : ಅಖಿಲ್ ಎನರ್ಜಿ ಸೊಲ್ಯೂಷನ್ ಶೋರೂಮ್ ಶುಭಾರಂಭ

Pinterest LinkedIn Tumblr

Akhil_Energy_Borg_1

ವರದಿ / ಚಿತ್ರ : ಸತೀಶ್ ಕಾಪಿಕಾಡ್

ಮಂಗಳೂರು : ಸೋಲಾರ್ ಮೂಲಕ ವಿದ್ಯುತ್ ತಯಾರಿಸುವ ಅಂತರಾಷ್ಟ್ರೀಯ ಕಂಪನಿ ಬೋರ್ಗ್ (BORG) ನ ಅಧಿಕೃತ ವಿತರಕ ಸಂಸ್ಥೆ ಅಖಿಲ್ ಎನರ್ಜಿ ಸೊಲ್ಯೂಷನ್ ಶೋರೂಮ್ ( ಎಕ್ಸ್‌ಕ್ಲೂಸಿವ್ ಬೋರ್ಗ್ ಪವರ್ ಸ್ಟೋರ್ ) ಮಂಗಳೂರಿನ ಎಂ.ಜಿ.ರಸ್ತೆಯ ಎಸ್ಸೆಲ್ ಸೆಂಟರ್‌ನಲ್ಲಿ ಎಪ್ರಿಲ್ 5ನೇ ರವಿವಾರ ಶುಭಾರಂಭಗೊಂಡಿತು.

ಬೋರ್ಗ್ ಸಂಸ್ಥೆಯ ನಿರ್ದೇಶಕ ಶ್ರೀ ಕ್ರಿಸ್ತೋಫರ್ ಹಾಗೂ ಬೋರ್ಗ್ (BORG INDIA) ಇಂಡಿಯಾ ಸಂಸ್ಥೆಯ ಡೆಪ್ಯೂಟಿ ಜನರಲ್ ಮ್ಯಾನೇಜರ್ ( ಡಿಜಿ‌ಎಂ) ಸುಮಂತ್ ಗುಹಾ ಇವರು ದೀಪ ಬೆಳಗಿಸುವ ಮೂಲಕ ನೂತನ ಸಂಸ್ಥೆಯನ್ನು ಉದ್ಘಾಟಿಸಿದರು,

ಈಗಾಗಲೇ ಭಾರತದಲ್ಲಿ ಹಲವಾರು ಮನೆಗಳಲ್ಲಿ ಸೋಲಾರ್ ಅಳವಡಿಸಿರುವುದು ಎಲ್ಲರಿಗೂ ತಿಳಿದಂತಹ ವಿಷಯ. ಆದರೆ ಇಲ್ಲಿ ಹೆಚ್ಚಿನವರು ಬಿಸಿ ನೀರು ಕಾಯಿಸಲು ಮಾತ್ರ ಸೋಲಾರ್ ಅನ್ನು ಹೆಚ್ಚಾಗಿ ಬಳಸುವುದನ್ನು ನಾವು ಕಾಣ ಬಹುದು. ಆದರೆ ಒಂದು ಮನೆ ಅಥವಾ ಕಚೇರಿ ವಿದ್ಯುತ್ ಸಂಪರ್ಕವೇ ಇಲ್ಲದೇ ಕೂಡ ಸಂಪೂರ್ಣ ವಿದ್ಯುತ್ ಬಳಕೆ ಮಾಡಿಕೊಂಡು ಮುನ್ನಡೆಯ ಬಹುದು ಎಂಬುವುದನ್ನು ಬೋರ್ಗ್ ಸಂಸ್ಥೆಯವರು ನಿರೂಪಿಸಿದ್ದಾರೆ. ಬೋರ್ಗ್ ಸಂಸ್ಥೆಯ ಮೂಲಕ ಅವಿಷ್ಕಾರಗೊಂಡಿರುವ ಈ ಉತ್ಪನ್ನ ( ಸೋಲಾರ್ – ಸೌರ ಶಕ್ತಿ) ವನ್ನು ನಾವು ನಮ್ಮ ಮನೆಗೆ ಅಳವಡಿಸಿದರೆ ನಮಗೆ ಅಗತ್ಯವಿರುವ ಲೈಟ್, ಫ್ಯಾನ್, ಟಿ.ವಿ.ಫ್ರಿಡ್ಜ್, ಎ.ಸಿ. ಕಂಪ್ಯೂಟರ್ ಮುಂತಾದ ಎಲ್ಲಾ ರೀತಿಯ ವಿದ್ಯುತ್ ಆಧಾರಿತ ಉಪಕರಣಕಗಳಿಗೆ ಈ ಮೂಲಕ ವಿದ್ಯುತ್ ಸಂಪರ್ಕ ಪಡೆಯ ಬಹುದು. ಇಲ್ಲಿ ಕರೆಂಟ್ ಹೋಗುವ ಭಯವಿಲ್ಲ. ಒಂದು ವೇಳೆ ವಿಪರಿತ ಮಳೆ ಸಂದರ್ಭ ಅಥವಾ ರಾತ್ರಿ ಹೊತ್ತು ಸೂರ್ಯನ ಬೆಳಕು ಇಲ್ಲದ ಸಮಯದಲ್ಲೂ ಭಯವಿಲ್ಲ. ಈ ಉಪಕರಣದ ಜೊತೆ ಇನ್‌ವರ್ಟರ್ ಜೋಡಣೆ ಕೂಡ ಮಾಡಲಾಗುವುದು. ಇದರಿಂದ ಹಗಲಿನಲ್ಲಿ ಶೇಖರಣೆಗೊಂಡ ವಿದ್ಯುತ್ ರಾತ್ರಿ ನಮಗೆ ಅಗತ್ಯವಿರುವ ಸಂದರ್ಭದಲ್ಲಿ ಬಳಸ ಬಹುದು.

Akhil_Energy_Borg_2 Akhil_Energy_Borg_3 Akhil_Energy_Borg_4 Akhil_Energy_Borg_5 Akhil_Energy_Borg_6 Akhil_Energy_Borg_7 Akhil_Energy_Borg_8 Akhil_Energy_Borg_9 Akhil_Energy_Borg_10

ಈಗಾಗಲೇ ಕೆಲವೊಂದು ಶಾಲಾ – ಕಾಲೇಜುಗಳು ಕೂಡ ಬೋರ್ಗ್‌ನ ಈ ಉತ್ಪನ್ನವನ್ನು ಅಳವಡಿಸಲು ಮುಂದೆ ಬಂದಿದ್ದು, ಶಾಲಾ – ಕಾಲೇಜುಗಳಿಗೆ ರಜೆ ಇರುವ ಸಂದರ್ಭದಲ್ಲಿ ಉತ್ಪಾದನೆಯಾಗುವ ವಿದ್ಯುತ್ ಅನ್ನು ಖರಿದಿಸಲು ಮೆಸ್ಕಾಂನಂತಹ ಸಂಸ್ಥೆಗಳು ಮುಂದೆ ಬಂದಿದೆ ಎಂದು ಸುಮಂತ್ ಗುಹಾ ಅವರು ಹೇಳಿದರು.

ಕೆನಾರ ಬ್ಯಾಂಕಿನ ನಿವೃತ ಜನರಲ್ ಮ್ಯಾನೇಜರ್ ಶ್ರೀ ಕೆ.ಬಾಲಚಂದ್ರ ರಾವ್, ಚಾರ್ಟಡ್ ಅಕೌಂಟೆಂಟ್ ಶ್ರೀ ಎಸ್.ಎಸ್.ನಾಯಕ್, ಡಾ| ಗಣೇಶ್. ಪೈ ಮುಂತಾದವರು ಅತಿಥಿಗಳಾಗಿ ಭಾಗವಹಿಸಿ ನೂತನ ಸಂಸ್ಥೆಗೆ ಶುಭಾ ಹಾರೈಸಿದರು.

ಅಖಿಲ್ ಎನರ್ಜಿ ಸೊಲ್ಯೂಷನ್ ಆಡಳಿತ್ ನಿರ್ದೇಶಕ, ಮ್ಯಾಕನಿಕಲ್ ಇಂಜಿನಿಯರ್ ಅಖಿಲ್ ಡಿ.ಪೈ ಅತಿಥಿಗಳನ್ನು ಸ್ವಾಗತಿಸಿದರು. ಸಂಸ್ಥೆಯ ಪಾಲುದಾರರಾದ ಶ್ರೀ ದಿನೇಶ್ ವಿ. ಪೈ, ಶ್ರೀಮತಿ ದಿವ್ಯ ಡಿ. ಪೈ ಉಪಸ್ಥಿತರಿದ್ದರು.

Akhil_Energy_Borg_11 Akhil_Energy_Borg_12 Akhil_Energy_Borg_13a Akhil_Energy_Borg_14 Akhil_Energy_Borg_15 Akhil_Energy_Borg_16 Akhil_Energy_Borg_17 Akhil_Energy_Borg_18 Akhil_Energy_Borg_19a Akhil_Energy_Borg_20a

Akhil_Energy_Borg_21

ಬೋರ್ಗ್‌ನಿಂದ ಕ್ರಾಂತಿಕಾರಿಕ ಅವಿಷ್ಕಾರ :

ಟೆಕ್ಸಾಸ್‌ನ ಹೋಸ್ಟನ್‌ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಬೋರ್ಗ್ ಸಂಸ್ಥೆ ಪರ್ಯಾಯ ಹಸಿರು ಶಕ್ತಿಯನ್ನು ಜೀವನ ಶೈಲಿಯಲ್ಲಿ ಅಳವಡಿಸುವ ಮೂಲಕ ಈಗಾಗಲೇ ವಿಶ್ವದಾದ್ಯಂತ ಪ್ರಸಿದ್ಧಿ ಪಡೆದಿದೆ. ದಶಕದ ಹಿಂದೆ ಅಮೇರಿಕದ ವಾಷಿಂಗ್‌ಟನ್ ಡಿ.ಸಿ.ಯ NASA’s Heliphysics Science Labortorry  ಯ ವ್ಯಾಪಕ ಸಂಶೋಧನೆಯಿಂದ ಈ ಹಸಿರು ಶಕ್ತಿಯನ್ನು ಉತ್ಪಾದಿಸುವ ಮೂಲಕ ಅಂತರಾಷ್ಟ್ರೀಯ ಗುಣಮಟ್ಟದ ಪರ್ಯಾಯ ಶಕ್ತಿಯನ್ನು ನೀಡುವಲ್ಲಿ ಬೋರ್ಗ್ ಸಂಸ್ಥೆ ಕ್ರಾಂತಿಕಾರಕ ಬದಲಾವಣೆಯನ್ನು ಮಾಡಿತ್ತು. ಬೋರ್ಗ್ ಸಂಸ್ಥೆ ಉತ್ಪನ್ನಗಳು CE, ISO,TUV   ಮತ್ತು IEL ಪ್ರಮಾಣಿತವಾಗಿದ್ದು, ಎಲ್ಲಾ ಅಂತಾರಾಷ್ಟ್ರೀಯ ಗುಣಮಟ್ಟದ ಪರೀಕ್ಷ್ಗೆ ಒಳಪಟ್ಟಿದೆ. ಉತ್ತರ ಅಮೇರಿಕಾ, ಯೂರೋಪ್, ಚೀನಾ, ದಕ್ಷಿಣ ಅಫ್ರಿಕಾ, ಅಗ್ನೇಯ ಏಷಿಯಾ ಮುಂತಾದ ದೇಶಗಳಲ್ಲಿ ಶಾಖೆಗಳನ್ನು ಹೊಂದಿರುವ ಈ ಸಂಸ್ಥೆ ಇದೀಗ ಭಾರತದ ಮನೆಗಳಿಗೆ ಹೊಂದಿಕೊಳ್ಳುವಂತಹ ವಿಶೇಷವಾದ ಅಸ್ತ್ರ ಹೋಮ್ ಸರಣಿ ಶ್ರೇಣಿಯನ್ನು ಬಿಡುಗಡೆಗೊಳಿಸಿದೆ.

ಬೋರ್ಗ್‌ನ ಉತ್ಪನ್ನಗಳು ವಿದ್ಯುತ್ ಸರಬರಾಜಿನ ಮೇಲೆ ಅವಲಂಬಿತವಾಗುವದಿಲ್ಲ. ಇದು ವಿದ್ಯುತ್ ಉಪಯೋಗಿಸಿದೇ ಮೈಕ್ರೋ ಸೋಲಾರ್ ಪವರ್ ಪ್ಲಾಟ್ಸ್‌ಗಳಾಗಿದ್ದು, ಸೂರ್ಯನ ಬೆಳಕಿನಿಂದಲೇ ವಿದ್ಯುತ್ ಉತ್ಪಾದಿಸುವ ಉಪಕರಣವಾಗಿರುತ್ತದೆ ಎಂದು ಅಖಿಲ್ ಡಿ.ಪೈ ಅವರು ಈ ಬಗ್ಗೆ ಮಾಹಿತಿ ನೀಡಿದರು.

ಹೆಚ್ಚಿನ ವಿವರಗಳಿಗೆ E-mail : akhilenergy707@gmail.com  ಅಥವಾ ಮೊಬೈಲ್ ಸಂಖ್ಯೆ 9972190722 ಅನ್ನು ಸಂಪರ್ಕಿಸುವಂತೆ ಕೋರಲಾಗಿದೆ.

Write A Comment