ಕನ್ನಡ ವಾರ್ತೆಗಳು

ಭಗವದ್ಗೀತೆ ಬಗ್ಗೆ ಅವಹೇಳನ ಮಾಡಿದ ಪ್ರೊ.ಭಗವಾನ್ ವಿರುದ್ಧ ಕ್ರಮ ಕೈಗೊಳ್ಳಲು ಶ್ರೀರಾಮ ಸೇನೆ ಅಗ್ರಹ.

Pinterest LinkedIn Tumblr

Rama_sene_Press_1

ಮಂಗಳೂರು,ಎಪ್ರಿಲ್.04 : ಶ್ರೀ ರಾಮನ ಬಗ್ಗೆ ಕೇವಲವಾಗಿ ಮಾತನಾಡಿದಲ್ಲದೇ, ಕಳೆದ ಕೆಲ ದಿನಗಳ ಹಿಂದೆ ಇದೇ ಭಗವಾನ್ ಭಗವದ್ಗೀತೆಯನ್ನು ಸುಟ್ಟು ಹಾಕುವುದಾಗಿ ಹೇಳಿದ್ದರು. ಈ ಮೂಲಕ ಸತತವಾಗಿ ಹಿಂದುಗಳ ಭಾವನೆಯೊಂದಿಗೆ ಆಟವಾಡುತ್ತಿದ್ದ  ಪ್ರೊ. ಭಗವಾನ್ ವಿರುದ್ಧ ರಾಜ್ಯ ಸರ್ಕಾವು  ಕ್ರಮ ಜರುಗಿಸಬೇಕೆಂದು ಶ್ರೀರಾಮ ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ಶನಿವಾರ  ಸುದ್ದಿಗೋಷ್ಠಿ ನಡೆಸಿ  ಒತ್ತಾಯಿಸಿದ್ದಾರೆ.

Rama_sene_Press_2 Rama_sene_Press_3 Rama_sene_Press_4 Rama_sene_Press_5

ಭಗವಾನ್ ವಿರುದ್ಧ ಕ್ರಮ ಜರುಗಿಸಲು ಸರಕಾರ ಹಿಂದೇಟು ಹಾಕುತ್ತಿದೆ. ಇದರ ವಿರುದ್ಧ ಮುಂದಿನ ದಿನಗಳಲ್ಲಿ ಶ್ರೀರಾಮ ಸೇನೆ ವತಿಯಿಂದ ಜಿಲ್ಲಾ ಉಸ್ತುವಾರಿ ಸಚಿವರಿಗೆ ಕಛೇರಿಗೆ ಮುತ್ತಿಗೆ ಹಾಕುವ ಕೆಲಸವನ್ನು ಮಾಡಲಾಗುವುದು ಎಂದರು. ಅಲ್ಲದೇ ದೇಶಾದ್ಯಂತ ಗೋಹತ್ಯೆಯನ್ನು ಈ ಕೂಡಲೇ ನಿಷೇಧಿಸಬೇಕು. ಈ ಬಗ್ಗೆ ಕಠಿಣ ಕಾನೂನು ಜಾರಿಗೆ ತರಬೇಕೆಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯ ಕಾರ್ಯದರ್ಶಿ ಪ್ರವೀಣ್ ವಾಲ್ಕೆ, ಆನಂದ್ ಶೆಟ್ಟಿ ಅಡ್ಯಾರ್, ಜೀವನ್ ನೀರ್ ಮಾರ್ಗ, ದುರ್ಗಾ ಸೇನೆಯ ಅಧ್ಯಕ್ಷೆ ವಿಜಯ ಶ್ರೀ ಗಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Write A Comment