ಕನ್ನಡ ವಾರ್ತೆಗಳು

ಸೇಬು ಹಣ್ಣಿನ ಹಿರಿಮೆ ಸತ್ಯವಲ್ಲ

Pinterest LinkedIn Tumblr

arrange

ಹಣ್ಣು ತಿನ್ನುವುದರಿಂದ ಕಾಯಿಲೆ ಬರದು ಎಂಬ ನಂಬಿಕೆಗೆ ತಲೆಬುಡವಿಲ್ಲ

ವಾಷಿಂಗ್ಟನ್: ದಿನಕ್ಕೆ ಒಂದು ಸೇಬು ತಿನ್ನಿ, ವೈದ್ಯರಿಂದ ದೂರ ಇರಿ ಎಂಬ ನಂಬಿಕೆಗೆ ಯಾವುದೇ ತಲೆಬುಡವಿಲ್ಲ. ಸೇಬು ತಿಂದವರು ಮತ್ತು ತಿನ್ನದೇ ಇರುವವರು ವೈದ್ಯರನ್ನು ಭೇಟಿ ಮಾಡುವ ಸಂಖ್ಯೆಯಲ್ಲಿ ಯಾವುದೇ ಹೆಚ್ಚು ಕಡಿಮೆ ಇಲ್ಲ. ಆದರೆ ದಿನ ಸೇಬು ತಿನ್ನುವವರು ಗುಳಿಗೆ ನುಂಗುವುದು ಕಡಿಮೆ. ಇದು ಮಿಚಿಗನ್ ವಿವಿ ತಜ್ಞರ ಅಭಿಮತ.

ಪ್ರತಿದಿನ 149 ಗ್ರಾಂ ತೂಕದ ಸೇಬು ತಿನ್ನುವವರು ಹಾಗೂ ಈ ಹಣ್ಣನ್ನು ತಿನ್ನದೇ ಇರುವ 8 ಸಾವಿರಕ್ಕೂ ಹೆಚ್ಚು ಜನರನ್ನು ಸಮೀಕ್ಷೆಗೊಳಪಡಿಸಲಾಯಿತು. ಆದರೆ ತಿನ್ನುವವರು ಮತ್ತು ತಿನ್ನದೇ ಇರುವವರು ವೈದ್ಯರ ಬಳಿಗೆ ಹೋಗುವ ತುರ್ತು ಉಂಟಾಗುವ ಪ್ರಮಾಣದಲ್ಲಿ ಯಾವುದೇ ಗಮನಾರ್ಹ ವ್ಯತ್ಯಾಸ ಕಂಡುಬರಲಿಲ್ಲ. ಸಮೀಕ್ಷೆಗೊಳಪಟ್ಟವರ ಆರೋಗ್ಯ ಮಟ್ಟ ಮತ್ತು ಜನರ ಸಾಮಾಜಿಕ ಹಿನ್ನೆಲೆಯನ್ನು ಮುಖ್ಯವಾಗಿ ಪರಿಗಣಿಸಿ ಪರೀಕ್ಷೆಗೆ ಗುರಿಪಡಿಸಲಾಗಿತ್ತು. ಆದರೆ ಸೇಬು ತಿನ್ನುವವರು ಔಷಧ ನುಂಗುವುದನ್ನು ತಪ್ಪಿಸಿಕೊಳ್ಳುವ ಪ್ರವೃತ್ತಿ ಮಾತ್ರ ಕಂಡು ಬಂತು. ಇದು ಬಿಟ್ಟರೆ ಕಾಯಿಲೆ ಬಂದು ದವಾಖಾನೆಗಳಿಗೆ ಅಡ್ಮಿಟ್ ಆಗುವುದರಲ್ಲಾಗಲಿ, ಮನೋವೈದ್ಯರನ್ನು ಕಾಣುವ ವಿಷಯದಲ್ಲಾಗಲಿ ಯಾವುದೇ ಭಿನ್ನತೆ ಕಂಡುಬರಲಿಲ್ಲ ಎಂದು ಸಂಶೋಧನೆ ನಡೆಸಿದ ತಜ್ಞರಾದ ಅನ್ ಅರ್ಬರ್ ತಿಳಿಸಿದ್ದಾರೆ.

”ಸೇಬು ತಿನ್ನುವುದರಿಂದ ಸಿಗುವ ಲಾಭ ಅತ್ಯಲ್ಪ. ಇದರಿಂದ ಒಟ್ಟಾರೆ ಆರೋಗ್ಯದ ಮೇಲೆ ಮಾಡುವ ರಾಷ್ಟ್ರೀಯ ವೆಚ್ಚವೇನೂ ಕಡಿಮೆಯಾಗಿಲ್ಲ ಎಂಬುದು ನಮ್ಮ ಅಧ್ಯಯನದಿಂದ ದೃಢಪಟ್ಟಿದೆ,” ಎನ್ನುತ್ತಾರೆ ಅನ್ ಅರ್ಬರ್.

Write A Comment