ಕನ್ನಡ ವಾರ್ತೆಗಳು

ಅಪ್ಪ-ಅಮ್ಮನ ಮದುವೆಗೆ ಸಾಕ್ಷಿಯಾದ 8 ತಿಂಗಳ ಕೂಸು; ಕುಂದಾಪುರದಲ್ಲಿ ನಡೆಯಿತು ಪ್ರೇಮಿಗಳ ಮಾಂಗಲ್ಯಂ ತಂತುನಾನೆನಾ…!

Pinterest LinkedIn Tumblr

ಕುಂದಾಪುರ: ಇವರಿಬ್ಬರೂ ಹಳೆ ಪ್ರೇಮಿಗಳು. ಇಬ್ಬರು ದುಡುಕಿದ ಪರಿಣಾಮ ಎಂಟು ತಿಂಗಳ ಹೆಣ್ಣು ಮಗುವಿದೆ, ಆದ್ರೇ ಅಪ್ರಾಪ್ತೆಯಾದ ಕಾರಣ ಈ ಹಿಂದೆ ಮದುವೆಯಾಗಿರಲಿಲ್ಲ, ಇದೀಗ ಮನೆಯವರ ಹಾಗೂ ಪೊಲೀಸರ ಸಮಕ್ಮದಲ್ಲಿ ಇಬ್ಬರ ಮದುವೆ ಕುಂದಾಪುರ ಪೊಲೀಸ್ ಲೈನ್ ಸಮೀಪದಲ್ಲಿರುವ ರಕ್ತೇಶ್ವರೀ ದೇವಸ್ಥಾನದಲ್ಲಿ ಶುಕ್ರವಾರ ಮಧ್ಯಾಹ್ನ ಸಿಂಪಲ್ಲಾಗಿ ನಡೀತು. ಕೂತೂಹಲಕಾರಿಯಾಗಿದ್ದ ಈ ಪ್ರೇಮಪ್ರಸಂಗ ಕೊನೆಗೂ ಸುಖಾಂತ್ಯಗೊಂಡ ಒಂದು ಸ್ಟೋರಿಯಿಲ್ಲಿದೆ.

Lover-Mariage_Kundapur (29) Lover-Mariage_Kundapur (25) Lover-Mariage_Kundapur (18) Lover-Mariage_Kundapur (17) Lover-Mariage_Kundapur (12) Lover-Mariage_Kundapur (9) Lover-Mariage_Kundapur (5) Lover-Mariage_Kundapur (6) Lover-Mariage_Kundapur (7) Lover-Mariage_Kundapur (3) Lover-Mariage_Kundapur Lover-Mariage_Kundapur (33)

Picture 001 (1)

ಆಕೆ ಮೂಲತಃ ಹಟ್ಟಿಯಂಗಡಿವಳು ಹೆಸರು ಸ್ವಾತಿ, ಈವನು ಶಶಿಕುಮಾರ್ ಶಿವಮೊಗ್ಗದ ಸಾಗರ ಮೂಲದವನು. ಸಾಗರದಲ್ಲಿ ಸಂಬಂಧಿಕರ ಮನೆಗೆ ತೆರೆಳಿದ ವೇಳೆ ಇಬ್ಬರ ನಡುವೆ ಅದ್ಯೇಗೋ ಪ್ರೇಮಾಂಕುರವಾಗಿತ್ತು. ಆದರೇ ಆಕೆ ಅಪ್ರಾಪ್ತೆ. ಒಂದೆರಡು ವರ್ಷದಿಂದ ನಡೆಯುತ್ತಿದ್ದ ಇವರಿಬ್ಬರ ಪ್ರೀತಿಗೆ ಹುಡುಗಿ ಮನೆಯಲ್ಲಿ ಗ್ರೀನ್ ಸಿಗ್ನಲ್ ಸಿಕ್ಕಿದ್ದೇ ಯುವ ಜೋಡಿಗಳು ಕೊಂಚ ಮೈ ಮರೆತೇ ಬಿಟ್ಟಿದ್ರು. ಫಲವಾಗಿ ಈಕೆ ಗರ್ಭವತಿಯೂ ಆದಳು. ಈ ವಿಚಾರ ತಿಳಿಯುತ್ತಿದ್ದಂತೆಯೇ ಶಶಿ ಇವಳನ್ನು ದೂರ ಮಾಡಲು ಹೊರಟಿದ್ದ ಅಲ್ಲದೇ 7-8 ತಿಂಗಳು ಈಕೆಯನ್ನು ಕಾಂಟೇಕ್ಟ್ ಮಾಡಿರಲಿಲ್ಲ. ಈಕೆ ಕಳೆದ ಆಗಸ್ಟ್ ತಿಂಗಳಿನಲ್ಲಿ ತುಂಬು ಗರ್ಬಿಣಿಯಾಗಿದ್ದಳು. ಗಂಡನಿಲ್ಲದೇ ಮಗುವನ್ನು ಹೆರುವುದು ಆಕೆಗೆ ಕಷ್ಟವಾಗಿತ್ತು. ಅದಕ್ಕಾಗಿಯೇ ತನ್ನ ತಾಯಿ ಪ್ರೇಮಾಳೊಂದಿಗೆ ಸೇರಿಕೊಂಡು ಫ್ಲಾನ್ ಮಾಡಿ ಸಾಗರಕ್ಕೆ ಹೊರಡುತ್ತಾಳೆ. ಆದರೇ ಓಮ್ನಿ ಕಾರಿನಲ್ಲಿ ತೆರಳುವಾಗ ಮಾರ್ಗ ಮಧ್ಯೆ ಈಕೆಗೆ ಪ್ರಸವ ವೇದನೆಯಾಗಿ ಕಾರನ್ನು ನಿಲ್ಲಿಸಿ ಸಮೀಪದ ಕಾಡಿಗೆ ತಾಯಿ ಮಗಳು ತೆರಳುತ್ತಾರೆ. ಅಲ್ಲಿಯೇ ಆಕೆಗೆ ಹೇರಿಗೆಯೂ ಆಗುತ್ತೆ. ತಾಯಿ ಮಗಳಿಬ್ಬರೂ ಕೊಂಚ ಕ್ರೂರತ್ವವನ್ನು ತಾಳಿ ಆ ಮಗುವನ್ನು ಅದೇ ಕಾಡಿನಲ್ಲಿ ಬಿಟ್ಟು ತಮ್ಮ ಊರು ಹಟ್ಟಿಯಂಗಡಿಗೆ ವಾಪಾಸ್ಸಾಗುತ್ತಾರೆ.

Lover-Mariage_Kundapur (4) Lover-Mariage_Kundapur (8)

(ಫೈಲ್ ಫೋಟೋ)

ಈ ವಿಚಾರ ಅದ್ಯೇಗೋ ಬಾಯಿಂದ ಬಾಯಿಗೆ ಬಿದ್ದು ಕುಂದಾಪುರದ ಚಾಲುಕ್ಯ ಪತ್ರಿಕೆ  ಸಂಪಾದಕ ಚಂದ್ರಮ ತಲ್ಲೂರು ಹಾಗೂ ವಿಜಯವಾಣಿ ವರದಿಗಾರ ಜಯಶೇಖರ್ ಅವರಿಗೆ ತಿಳಿಯುತ್ತೆ. ಅವರು ಕಾರ್ಯಾಚರಣೆ ನಡೆಸಿ ಅದೇ ಓಮ್ನಿ ಕಾರಿನ ಚಾಲಕನ ಮೂಲಕ ಸ್ಥಳಕ್ಕೆ ತೆರಳಿ ಮಗುವನ್ನು ಪತ್ತೆ ಹಚ್ಚುತ್ತಾರೆ. ಆಗಸ್ಟ್ ತಿಂಗಳೆನ್ನುವುದು ಮಳೆಯ ತಿಂಗಳು. ಈ ನವಜಾತ ಶಿಶು ಒಂದು ರಾತ್ರಿ ಒಂದು ಸಂಪೂರ್ಣ ಹಗಲು ಅದೇ ಮಳೆಯಲ್ಲಿ ತೊಯ್ದು ಹೋಗಿತ್ತು. ಕೂಡಲೇ ಮಗುವನ್ನು ಕುಂದಾಪುರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ನೀಡಲಾಗಿತ್ತು. ಅಂದಿನ ಕುಂದಾಪುರ ಡಿವೈ‌ಎಸ್ಪಿ ಸಿ.ಬಿ. ಪಾಟೀಲ್, ವೃತ್ತನಿರೀಕ್ಷಕ ದಿವಾಕರ್, ಕುಂದಾಪುರ ತಹಶಿಲ್ದಾರ್ ಗಾಯತ್ರಿ ಅವರು ಈ ವಿಚಾರದ ಬಗ್ಗೆ ಗಂಭೀರವಾಗಿ ಪರಿಗಣಿಸಿ ಆರೋಪಿಯನ್ನು ಬಂಧಿಸುವ ಬಗ್ಗೆ ಕಾರ್ಯೋನ್ಮುಕರಾಗಿದ್ದರು. ಬಳಿಕ ಆತನ ಬಂಧನವೂ ಆಗಿತ್ತು. ಮಗುವಿಗೆ ಉತ್ತಮ ಚಿಕಿತ್ಸೆ ಕೊಡಿಸಿ ನಾಗರಪಂಚಮಿಯಂದು ಜನಿಸಿದ ಮಗುವಿಗೆ “ಪಂಚಮಿ” ಎಂದು ಹೆಸರಿಡಲಾಗಿತ್ತು. ಈ ಪ್ರಕರಣ ಮಕ್ಕಳ ಕಲ್ಯಾಣ ಸಮಿತಿ ಬರುವ ಕಾರಣ ವಿಚಾರಣೆ ವೇಳೆ ತಾಯಿ ಅಪ್ರಾತೆಯೆಂದು ತಿಳಿದು ಸಿ.ಡಬ್ಲ್ಯೂಸಿ ಸಂಸ್ಥೆಯು ಮಗುವನ್ನು ಹಟ್ಟಿಯಂಗಡಿಯ ನಮ್ಮಭೂಮಿ ಪುನರ್ವಸತಿ ಕೇಂದ್ರಕ್ಕೆ ನೀಡಿದ್ದರು.

Lover-Mariage_Kundapur (32) Lover-Mariage_Kundapur (30) Lover-Mariage_Kundapur (31) Lover-Mariage_Kundapur (28) Lover-Mariage_Kundapur (27) Lover-Mariage_Kundapur (26) Lover-Mariage_Kundapur (24) Lover-Mariage_Kundapur (23) Lover-Mariage_Kundapur (22) Lover-Mariage_Kundapur (21) Lover-Mariage_Kundapur (19) Lover-Mariage_Kundapur (20) Lover-Mariage_Kundapur (16) Lover-Mariage_Kundapur (15) Lover-Mariage_Kundapur (13) Lover-Mariage_Kundapur (14) Lover-Mariage_Kundapur (11) Lover-Mariage_Kundapur (10) Picture 001 (1) Lover-Mariage_Kundapur (34)

ಇದೇ ಫೆಬ್ರವರಿ 25ಕ್ಕೆ ಮಗುವಿನ ತಾಯಿ ಸ್ವಾತಿ 18 ವರ್ಷ ತುಂಬಿದ ಕಾರಣ ಆಕೆಗೆ ಮಗುವ ಪಡೆಯುವ ಹಕ್ಕಿದ್ದು, ಕಾನೂನಾತ್ಮಕವಾಗಿ ಮಗು ಪಡೆಯಲು ಮದುವೆಯಾಗಬೇಕಾಗಿದೆ. ಕೂಡಲೇ ಎರಡೂ ಕಡೆಯವರು ಮಾತುಕತೆ ನಡೆಸಿ ಮದುವೆ ನಿಶ್ಚಯಿಸಿದ್ದಾರೆ. ಆಮಂತ್ರಣ ಪತ್ರಿಕೆಯನ್ನು ಸಿದ್ದಪಡಿಸಿ ತಮಗೆ ಬೇಕಾಗುವ ಹಾಗೂ ತಮಗೆ ಉಪಕಾರ ಮಾಡಿದ ಪೊಲಿಸರಿಗೆ ಮಾಹಿತಿ ನೀಡಿದ್ದರು.  ಮಧ್ಯಾಹ್ನ 12.15 ಕ್ಕೆ ಸುಮೂಹೂರ್ತದಲ್ಲಿ ಠಾಣೆ ಸಮೀಪದಲಿಯೇ ಇರುವ ಶ್ರೀ ರಕ್ತೇಶ್ವರೀ ದೇವಸ್ಥಾನದಲ್ಲಿ ಇಬ್ಬರ ಮದುವೆ ಹಿಂದೂ ಸಂಪ್ರದಾಯದಂತೆ ಶಾಸ್ತ್ರೋಕ್ತವಾಗಿ ನಡೆಯಿತು. ಮದುವೆಗೆ ಇಬ್ಬರ 8 ತಿಂಗಳ ಮಗು “ಪಂಚಮಿ” ಸಾಕ್ಷಿಯಾದಳು.

ಅಲ್ಲದೇ ಮದುಮಗ ಶಶಿಕುಮಾರ ಕಡೆಯಿಂದ ತಾಯಿ ತುಂಗಮ್ಮ, ಅಜ್ಜಿ ನೀಲಮ್ಮ, ಸೋದರ ಮಾವ ಶಿವಪ್ಪ, ಬಾವ ನಂದಿ, ಮದುಮಗಳು ಸ್ವಾತಿ ಕಡೆಯಿಂದ ಆಕೆಯ ತಾಯಿ ಪ್ರೇಮಾ, ನಮ್ಮಭೂಮಿ ಸಂಸ್ಥೆಯ ಪದ್ಮಾವತಿ, ರತ್ನಾ ಇದ್ದರು. ಬಂಧು ಮಿತ್ರರಾಗಿ ಕುಂದಾಪುರ ಪೊಲಿಸರು ಆಗಮಿಸಿ ಇಬ್ಬರನ್ನು ಹಾರೈಸಿದರು.

ಮದುವೆಯ ಬಳಿಕ ಇಬ್ಬರು ಸ್ಥಳೀಯ ರಿಜಿಸ್ಟಾರ್ ಆಫೀಸಿನಲ್ಲಿ ತಮ್ಮ ಮದುವೆಯ ನೊಂದಣಿ ಮಾಡಿಸಿದ್ದರು. ಸಾಗರದ ತನ್ನೂರಿಗೆ ಪತ್ನಿ ಮತ್ತು ಮಗುವನ್ನು ಕರೆದೊಯ್ಯುತ್ತೇನೆ, ಅಲ್ಲದೇ ಇಬ್ಬರನ್ನು ಪ್ರೀತಿಯಿಂದ ಸಾಕುತ್ತೇನೆ ಎಂದು ಶಶಿಕುಮಾರ್ ಈ ಸಂದರ್ಭ ತಿಳಿಸಿದ್ದಾನೆ.

ವರದಿ- ಯೋಗೀಶ್ ಕುಂಭಾಸಿ

Write A Comment