ಕನ್ನಡ ವಾರ್ತೆಗಳು

ಸ್ಪೆಕ್ಟ್ರಂ ಹರಾಜು ಮುಕ್ತಾಯ : ಕೇಂದ್ರದ ಬೊಕ್ಕಸಕ್ಕೆ 1.10 ರು. ಕೋಟಿ ಜಮೆ.

Pinterest LinkedIn Tumblr

spectrum_auction_ended

ನವದೆಹಲಿ,ಮಾರ್ಚ್.26  : ಹತ್ತೊಂಭತ್ತು ದಿನಗಳಿಂದ ನಡೆಯುತ್ತಿದ್ದ ಸ್ಪೆಕ್ಟ್ರಂ ಹರಾಜು ಬುಧವಾರ ಮುಕ್ತಾಯಗೊಂಡಿದೆ. ಅದರಿಂದಾಗಿ ಕೇಂದ್ರದ ಬೊಕ್ಕಸಕ್ಕೆ ಬರೋಬ್ಬರಿ ರು. 1.10 ಲಕ್ಷ ಕೋಟಿ ಜಮೆಯಾಗಿದೆ. ಸುಪ್ರೀಂಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ತರಂಗಾಂತರಗಳ ಮರು ಹರಾಜು ಪ್ರಕ್ರಿಯೆ ನಡೆದಿತ್ತು. ಈಗ ಪೂರ್ತಿಯಾಗಿರುವ ಹರಾಜಿನಿಂದಾಗಿ ಮೊಬೈಲ್ ಕರೆಗಳ ದರದಲ್ಲಿ ಭಾರಿ ಪ್ರಮಾಣದಲ್ಲಿ ಏರಿಕೆಯಾಗುವ ಸಾಧ್ಯತೆಗಳಿವೆ.

ಭರ್ಜರಿ ಆದಾಯ: ಕರ್ನಾಟಕ ವೃತ್ತದಿಂದ ಒಟ್ಟು ರು. 2196.55 ಕೋಟಿ ಆದಾಯ ಕೇಂದ್ರದ ಬೊಕ್ಕಸಕ್ಕೆ ಬಂದಿದೆ. ಕರ್ನಾಟಕ ವೃತ್ತದಲ್ಲಿ 800 ಮೆಗಾಹಟ್ರ್ಸ್ ತರಂಗಾಂತರದಿಂದ ರು. 378.75 ಕೋಟಿ, 900 ಮೆಗಾಹಟ್ರ್ಸ್ ತರಂಗಾಂತರದಿಂದ ರು. 122.65 ಕೋಟಿ, 1800 ಮೆಗಾಹಟ್ರ್ಸ್ ತರಂಗಾಂತರದಿಂದ ರು. 37.37 ಕೋಟಿ ಹಾಗೂ 2100 ಮೆಗಾಹಟ್ರ್ಸ್ ತರಂಗಾಂತರದಿಂದ ಅತಿ ಹೆಚ್ಚು ಅಂದರೆ ರು. 1658.78 ಕೋಟಿ ಆದಾಯ ಬಂದಿದೆ.

Write A Comment