ಕನ್ನಡ ವಾರ್ತೆಗಳು

ಬೈಕ್‌ಗೆ ಲಾರಿ ಢಿಕ್ಕಿ: ಇಬ್ಬರು ಮೃತ್ಯು

Pinterest LinkedIn Tumblr

ujire_baik_acdent

ಉಜಿರೆ,ಮಾರ್ಚ್.23 : ಉಜಿರೆ ಸಮೀಪ ಬೈಕ್ ಗೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವಕರು ಮೃತಪಟ್ಟ ಫಟನೆ ಭಾನುವಾರ ಸಂಭವಿಸಿದೆ.ಮೃತ ಯುವಕರು ಮುಂಡಾಜೆ ಸಮೀಪ ಹೇಡ್ಯ ನಿವಾಸಿಗಳಾದ ಸುಂದರ(30) ಹಾಗೂ ಹರೀಶ(25) ಎಂಬವರಾಗಿದ್ದಾರೆ.

ಅಪಘಾತದಲ್ಲಿ ಗಂಭೀರವಾಗಿ ಗಾಯಗೂಂಡ ಇವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾದರೂ ಆ ವೇಳೆಗೆ ಅವರಿಬ್ಬರೂ ಮೃತಪಟ್ಟಿದ್ದರು. ಇವರಿಬ್ಬರು ಹತ್ತಿರದ ಸಂಬಂಧಿಕರಾಗಿದ್ದಾರೆ. ಇಬ್ಬರೂ ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು ಆಗಿದ್ದಾರೆ.

ಈ ಪ್ರಕರಣವು ಬೆಳ್ತಂಗಡಿ ಠಾಣೆಯಲ್ಲಿ ದಾಖಲಾಗಿರುತ್ತದೆ.

Write A Comment