ಮೂಲ್ಕಿ, ಮಾರ್ಚ್.19 : ರಾಘವೇಶ್ವರ ಸ್ವಾಮೀಜಿಯವರ ವಿರೋಧಿ ಬಣಕ್ಕೆ ತೆರೆಮರೆಯಲ್ಲಿ ನೆರಳಾಗಿರುವ ರಾಜ್ಯದ ಗೃಹ ಸಚಿವರ ಸುಪುತ್ರನೇ ಈಗ ದಕ್ಷ ಅಧಿಕಾರಿಯಾಗಿ ಜನಮಾನಸದಲ್ಲಿದ್ದ ಡಿ.ಕೆ.ರವಿಯ ಸಂಶಯಾಸ್ಪದ ಸಾವಿನಲ್ಲಿಯೂ ಕೈವಾಡ ಇದೆ ಎಂಬ ಗುಮಾನಿ ರಾಜ್ಯದ ಜನತೆಗೆ ಮೂಡಿದ್ದು ಇದಕ್ಕೆಲ್ಲಾ ಪರೋಕ್ಷವಾಗಿ ಸಹಕಾರ ನೀಡುತ್ತಿರುವ ಗೃಹ ಸಚಿವ ಕೆ.ಜೆ.ಜಾರ್ಜ್ರವರ ಮೇಲೆ ಸಂಶಯ ವ್ಯಕ್ತವಾಗಿದೆ ಎಂದು ಕಸಾಪದ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಆರೋಪಿಸಿದ್ದಾರೆ.
ಉಂಟು ಕಾಲಿಕೆ ನೆಂಟರಿಷ್ಟರು ಬಂಟರಾಗಿಯೇ ಕಾಯ್ದರು ಕಂಟಕ ಬಂದಾಗ ನೆಂಟರಿಷ್ಟರು ಬಾರದು ಎಂಬ ದಾಸರ ಮಾತಿನಂತೆ ಗೃಹ ಸಚಿವರು ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳದೆ ಸದ್ಭಳಕೆ ಮಾಡಿಕೊಂಡಲ್ಲಿ ರಾಜ್ಯದ ಜನತೆ ಅವರನ್ನು ನೆನಪಿಸುತ್ತಾರೆ. ಅಧಿಕಾರವಿದೆ ಎಂದು ದರ್ಪ ಮೀರಿದರೇ ಸಂಕಷ್ಟಕ್ಕೆ ಸಿಲುಕಿ ನಂತರ ಹೊರಬಾರದೆ ಒದ್ದಾಡಬೇಕಾಗುತ್ತದೆ ಎಂದು ಸಲಹೆ ನೀಡಿರುವ ಪುನರೂರು. ಪ್ರಕರಣವನ್ನು ನಿಷ್ಪಕ್ಷವಾಗಿ ತನಿಖಾ ರೂಪದಲ್ಲಿ ಹೊರಬರಬೇಕಾದರೆ ಸಿಬಿಐ ತನಿಖೆಯೇ ಸೂಕ್ತವಾಗಿದ್ದು ಕೂಡಲೆ ಸಿಬಿಐಗೆ ನೀಡಿದಲ್ಲಿ ಜನರು ಸಹ ಸರ್ಕಾರವನ್ನು ಬೆಂಬಲಿಸುತ್ತಾರೆ.
ಪ್ರಕರಣದ ಸಾಕ್ಷಿಗಳನ್ನು ತಿರುಚಿದ ನಂತರ ಸಿಬಿಐಗೆ ನೀಡಿದಲ್ಲಿ ಜನ ಸಾಮಾನ್ಯರು ಸಹ ಪ್ರಕರಣದ ಗಂಭೀರತೆಯನ್ನು ಚೆನ್ನಾಗಿ ಬಲ್ಲವರಾಗಿದ್ದು ಗೃಹ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಅಪರಾಧಿ ಸ್ಥಾನಕ್ಕೆ ತಳ್ಳಲ್ಪಡುವುದು ನಿಶ್ಚಿತ ಎಂದು ಹರಿಕೃಷ್ಣ ಪುನರೂರು ಎಚ್ಚರಿಸಿದ್ದಾರೆ.
