ಕನ್ನಡ ವಾರ್ತೆಗಳು

ಕನ್ನಡಿಗ ಕಲಾವಿದರ ಪರಿಷತ್ತು ವತಿಯಿಂದ ಸಾಂಸ್ಕೃತಿಕ ಮಹೋತ್ಸವ

Pinterest LinkedIn Tumblr

Mumbai_news_photo_1

ವರದಿ : ಈಶ್ವರ ಎಂ. ಐಲ್
ಚಿತ್ರ,: ದಿನೇಶ್ ಕುಲಾಲ್

ಮುಂಬಯಿ : “ಕಲಾವಿದರ ಏಕತೆಗಾಗಿ ಹುಟ್ಟಿದ ಸಂಸ್ಥೆ ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಇದರಲ್ಲಿ ಖ್ಯಾತ ಕಲಾವಿದರು ಕೂಡಾ ಸದಸ್ಯತನದಿಂದ ದೂರವಿರುವುದು ವಿಷಾದನೀಯ. ಇದರಲ್ಲಿ ಸದಸ್ಯರಾದ ಅನೇಕ ಕಲಾವಿದರಿಗೆ ಆರ್ಥಿಕ ಸಹಾಯ, ಸಹಕಾರ ನೀಡುತ್ತಿರುವೆವು. ಕಲಾವಿದರ ಸದಸ್ಯತನವು ಈ ಪರಿಷತ್ತಿನ ಶಕ್ತಿ” ಎಂದು ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಇದರ ಅಧ್ಯಕ್ಷ ಸುರೇಂದ್ರ ಕುಮಾರ್ ಹೆಗ್ಡೆಯವರು ನುಡಿದರು.

ಮಾ. 14ರಂದು ಮೀರಾರೋಡ್ ನ ಪಲಿಮಾರು ಮಠದಲ್ಲಿ ಪರಿಷತ್ತಿನ ಸಾಂಸ್ಕೃತಿಕ ಮಹೋತ್ಸವವು ಜರಗಿದ್ದು ಅಧ್ಯಕ್ಷ ಸ್ಥಾನದಿಂದ ಸುರೇಂದ್ರ ಕುಮಾರ್ ಹೆಗ್ಡೆಯವರು ಮಾತನಾಡುತ್ತಿದ್ದರು.

Mumbai_news_photo_2 Mumbai_news_photo_3 Mumbai_news_photo_4 Mumbai_news_photo_5

ಪಲಿಮಾರು ಮಠದ ರಮಣ ಆಚಾರ್ಯ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಹೋಟೇಲು ಉದ್ಯಮಿ ಬಾಬು ಎಸ್. ಶೆಟ್ಟಿ ಅವರು ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡುತ್ತಾ ಕಲಾರಾಧನೆಯಿಂದ ಪ್ತ್ರೀತಿ, ವಿಶ್ವಾಸಗಳು ಇಮ್ಮಡಿಯಾಗುತ್ತದೆ ಎಂದರು.

ಜಯಶ್ರಿಕೃಷ್ಣ ಪರಿಸರ ಪ್ರೇಮಿ ಸಮಿತಿಯ ಅಧ್ಯಕ್ಷ ಹರೀಶ್ ಕುಮಾರ್ ಶೆಟ್ಟಿಯವರು ಮಾತನಾಡುತ್ತಾ ಕಲಾವಿದರು ಈ ಸಂಘಟನೆಯಿಂದ ದೂರವಿರದೆ ಎದರ ಎಲ್ಲಾ ಯೋಜನೆಗೆ ಸ್ಪಂದಿಸಬೇಕಾಗಿದೆ, ಎಂದರು. ನಮ ಜವನೆರ್ ಸಂಸ್ಥೆಯ ಅಧ್ಯಕ್ಷ ಚೇತನ್ ಶೆಟ್ಟಿ ಅವರು ಈ ಸಂದರ್ಭದಲ್ಲಿ ಮಾತನಾಡಿದರು.

ಜಿ. ಟಿ. ಆಚಾರ್ಯ ಅವರು ಪ್ರಸ್ತಾವಿಕ ನುಡಿಗಳನ್ನಾಡಿದರು. ಮಾಜಿ ಕಾರ್ಯದರ್ಶಿ ಕರ್ನೂರು ಮೋಹನ್ ರೈ ಕಾರ್ಯಕ್ರಮವನ್ನು ನಿರೂಪಿಸಿದರು. ಗೌ. ಪ್ರಧಾನ ಕಾರ್ಯದರ್ಶಿ ರಾಜು ಶ್ರೀಯಾನ್ ಅಭಾರ ಮನ್ನಿಸಿದರು. ಸಭಾ ಕಾರ್ಯಕ್ರಮದ ಬಳಿಕ ವಿವಿದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.

Write A Comment