ಮಯನ್ಮಾರ್,ಮಾರ್ಚ್.14 : ಮಯನ್ಮಾರ್ ದೇಶದಲ್ಲಿ 1941ರ ಬಳಿಕ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಆದರೆ 2014 ರಲ್ಲಿ ವಿಜ್ಞಾನಿಗಳು ಹಲವು ಜಾತಿಯ ಪಕ್ಷಿಗಳ ಹುಡುಕಾಟಕ್ಕಾಗಿ ಬಲೆ ಹಾಕಿದಾಗ ಈ ಪಕ್ಷಿ ಸಿಕ್ಕಿ ಬಿದ್ದಿದೆ.ಇಂತಹ ಹಲವು ಜಾತಿಯ ಪಕ್ಷಿಗಳನ್ನ ಹುಡುಕಲೆಂದೇ ವೈಲ್ಡ್ ಲೈಫ್ ಲೈಫ್ ಕನ್ಸರ್ವೇಷನ್ ಸೊಸೈಟಿ ಸದಸ್ಯರು ಕೆಲವು ಸಂಗೀತದ ಮೊರೆ ಹೋಗಿದ್ದರು. ಬಲೆ ಹಾಕಿದ್ದ ಜಾಗದಲ್ಲಿ ಕೆಲವು ಶಬ್ದಗಳ ಮೂಲಕ ಪಕ್ಷಿಗಳನ್ನು ಹತ್ತಿರ ಕರೆಯಲಾಯಿತು ಎಂದು ಸಂಘದ ಸದಸ್ಯರು ತಿಳಿಸಿದ್ದಾರೆ. ಸೆಂಟ್ರಲ್ ಬಾಗೋ ಪ್ರದೇಶದಲ್ಲಿ ಈ ಪಕ್ಷಿ ಕಂಡು ಬಂದಿದೆ.
ಈ ಜಾತಿಯ ಪಕ್ಷಿಯನ್ನು “ಜರ್ಡಾಂನ್ ಬಬ್ಬಲರ್” ಎಂದು ಆಂಗ್ಲ ಭಾಷೆಯಲ್ಲಿ ಕರೆಯಲಾಗುತ್ತದೆ. ಇಂತಹ ಪಕ್ಷಿಗಳು ಸಾಮಾನ್ಯ ವಾಗಿ ಭಾರತ, ನೇಪಾಳ, ಪಾಕಿಸ್ತಾನ ಮತ್ತು ಮಯನ್ಮಾರ್‍ದಲ್ಲಿ ಕಂಡು ಬರುತ್ತದೆ ಎಂದು ಅವರು ಹೇಳಿದ್ದಾರೆ.ಆದರೆ 1941ರ ಬಳಿಕ ಮಯನ್ಮಾರ್‍ಲ್ಲಿ ಈ ಪಕ್ಷಿ ಕಂಡು ಬಂದಿರಲಿಲ್ಲ. ಈ ಪಕ್ಷಿ ನಿಜವಾಗಿಯೂ ಯಾವ ಜಾತಿಗೆ ಸೇರಿದ ಪಕ್ಷಿ ಅಥವಾ ಇದು ಹೊಸದಾಗಿ ಕಂಡು ಬಂದಿರುವ ಪಕ್ಷಿ ಇರಬಹುದಾ ಎಂದು ತಿಳಿದುಕೊಳ್ಳಲು ಈ ಪಕ್ಷಿಯನ್ನು ಡಿಎನ್‍ಎ ಪರೀಕ್ಷೆಗೆ ಒಳಪಡಿಸಲಾಗಿದೆ.