ಕನ್ನಡ ವಾರ್ತೆಗಳು

ಕ್ಯಾಂಪ್ಕೊ ವತಿಯಿಂದ “ಸಹಕಾರಿ ಕ್ಷೇತ್ರದಲ್ಲಿ ಮಹಿಳಾ ಸಬಲೀಕರಣ” ಮಹಿಳಾ ಕಾರ್ಯಗಾರ.

Pinterest LinkedIn Tumblr

karyagar_mahila_photo_1

ಮಂಗಳೂರು,ಮಾರ್ಚ್.13: ಮಹಿಳೆಯರು ತಮ್ಮನ್ನು ಸಹಕಾರಿ ಕ್ಷೇತ್ರದಲ್ಲಿ ತೊಡಗಿಸಿಕೊಂಡರೆ ಆರ್ಥಿಕ, ಸಾಮಾಜಿಕವಾಗಿ ಬದಲಾವಣೆ ಕಂಡು, ಘನತೆ, ಗೌರವ ಇನ್ನಷ್ಟು ಹೆಚ್ಚಿಸಲು ಸಾಧ್ಯವಿದೆ ಎಂದು ದಕ್ಷಿಣ ಕನ್ನಡ ಸಹಕಾರಿ ಹಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ.ರವಿರಾಜ ಹೆಗ್ಡೆ ಹೇಳಿದರು.ನಗರದ ಕ್ಯಾಂಪ್ಕೊ ಸಭಾಂಗಣದಲ್ಲಿ ಗುರುವಾರ ರಾಜ್ಯ ಸಹಕಾರ ಮಹಿಳಾ ಮಹಾಮಂಡಲ, ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಸಹಕಾರಿ ಬ್ಯಾಂಕ್ ಮತ್ತು ದ.ಕ. ಸಹಕಾರಿ ಹಾಲು ತ್ಪಾದಕರ ಒಕ್ಕೂಟ ವತಿಯಿಂದ ಜಿಲ್ಲೆಯ ಸಹಕಾರ ಸಂಘಗಳ ಆಡಳಿತ ಮಂಡಳಿಯ ಮಹಿಳಾ ಸದಸ್ಯರು ಮತ್ತು ಸಿಇಒಗಳಿಗೆ ‘ಸಹಕಾರಿ ಕ್ಷೇತ್ರದಲ್ಲಿ ಮಹಿಳಾ ಸಬಲೀಕರಣ’ ಎಂಬ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಹೈನುಗಾರಿಕೆಯು ಮಹಿಳೆಯರನ್ನು ಸಾಮಾಜಿಕ ಮತ್ತು ಆರ್ಥಿಕವಾಗಿ ಸಬಲೀಕರಣಗೊಳಿಸುವ ಪೂರಕ ವಾತಾವರಣ ಕಲ್ಪಿಸಿದೆ. ಹಾಲು ಒಕ್ಕೂಟ ವ್ಯಾಪ್ತಿಯ 700 ಸಂಘಗಳಲ್ಲಿ 147 ಮಹಿಳಾ ಸಂಘಗಳಿದ್ದು, 134 ಸಂಘಗಳು ಸ್ಟೆಪ್ ಯೋಜನೆ ಅಳವಡಿಸಿವೆ. 1.10 ಲಕ್ಷ ಸದಸ್ಯರ ಪೈಕಿ, 35 ಸಾವಿರ ಮಹಿಳಾ ಸದಸ್ಯರಿದ್ದಾರೆ ಎಂದು ಹೇಳಿದರು.

karyagar_mahila_photo_2 karyagar_mahila_photo_3 karyagar_mahila_photo_4 karyagar_mahila_photo_7 karyagar_mahila_photo_8

ರಾಜ್ಯ ಸಹಕಾರ ಮಹಿಳಾ ಮಂಡಲದ ಮಾಜಿ ಅಧ್ಯಕ್ಷೆ ಸರಳಾ ಬಿ.ಕಾಂಚನ್ ಕಾರ್ಯಾಗಾರ ಉದ್ಘಾಟಿಸಿದರು. ಜಿಲ್ಲಾ ಮಹಿಳಾ ಸಹಕಾರಿ ಬ್ಯಾಂಕ್ ಅಧ್ಯಕ್ಷೆ ಸುಜೀತಾ ವಿ. ಬಂಗೇರಾ ಅಧ್ಯಕ್ಷತೆ ವಹಿಸಿದ್ದರು.

ಹಾಲು ಒಕ್ಕೂಟದ ಪ್ರಧಾನ ವ್ಯವಸ್ಥಾಪಕ ಜಯಪ್ಪ, ಕ್ಯಾಂಪ್ಕೊ ವ್ಯವಸ್ಥಾಪಕ ನಿರ್ದೇಶಕ ಸುರೇಶ್ ಭಂಡಾರಿ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಹರೀಶ್ ಆಚಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಗರ್ಟ್ರೂಡ್ ವೇಗಸ್ ಉಪಸ್ಥಿತರಿದ್ದರು. ಜಿಲ್ಲಾ ಮಹಿಳಾ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷೆ ಕೆ.ಎನ್.ಪ್ರಫುಲ್ಲ ಆರ್. ರೈ ಸ್ವಾಗತಿಸಿದರು. ಪ್ರಧಾನ ವ್ಯವಸ್ಥಾಪಕಿ ಪ್ರತಿಭಾ ಶೆಟ್ಟಿ ವಂದಿಸಿದರು. ಜಿಲ್ಲಾ ಸಹಕಾರಿ ಯೂನಿಯನ್ ಸಿಇಒ ಸಾವಿತ್ರಿ ರೈ ಕೆ. ಕಾರ್ಯಕ್ರಮ ನಿರೂಪಿಸಿದರು.

Write A Comment