ಕನ್ನಡ ವಾರ್ತೆಗಳು

” ಸೊಸೈಟಿ” ಸೀರೆಯಲ್ಲಿ ಗೌರಿ ಖಾನ್ ಹಾಟ್ ಲುಕ್

Pinterest LinkedIn Tumblr

gauri_khan_saree_1

ಮುಂಬಯಿ,ಮಾರ್ಚ್.10 : ಬಾಲಿವುಡ್ ಬಾದ್‍ಶಾ ಶಾರುಖ್ ಖಾನ್ ಪತ್ನಿ ಗೌರಿ ಖಾನ್ ಸಾಮಾನ್ಯವಾಗಿ ಎಲ್ಲೂ ಹೆಚ್ಚಾಗಿ ಕಾಣಿಸಿಕೊಳ್ಳುವುದಿಲ್ಲ. ಆದರೆ ಈ ಭಾರಿ ಅವರು ಏಕಾಏಕಿ ಪತ್ರಿಕೆಯೊಂದರ ಮುಖಪುಟ ಅಲಂಕರಿಸಿದ್ದಾರೆ. ಸೀರೆಯಲ್ಲಿ ತಮ್ಮ ಹಾವಭಾವ, ಭಂಗಿಗಳನ್ನು ಆ ವಿಶೇಷ ಸಂಚಿಕೆಯಲ್ಲಿ ತೆರೆದಿಟ್ಟಿದ್ದಾರೆ. `ಸೊಸೈಟಿ’ ಎಂಬ ನಿಯತಕಾಲಿಕೆಯ ಮಾರ್ಚ್ ಸಂಚಿಕೆಯಲ್ಲಿ ಗೌರಿ ಖಾನ್‍ರ ಸೀರೆ ದೃಶ್ಯಗಳನ್ನು ಕಣ್ತುಂಬಿಕೊಳ್ಳಬಹುದು. 40ರ ಹರೆಯದಲ್ಲೂ ಗೌರಿ ಖಾನ್ ಹಾಟ್ ಲುಕ್ ಮೂಲಕ ಎಲ್ಲರ ಗಮನಸೆಳೆದಿದ್ದಾರೆ.

gauri_khan_saree_4 gauri_khan_saree_2

gauri_khan_saree_3

ಇಷ್ಟು ದಿನ ಗೌರಿ ಖಾನ್ ಎಂದರೆ ಶಾರುಖ್ ಪತ್ನಿ ಎಂದೇ ಎಲ್ಲರೂ ಗುರುತಿಸುತ್ತಿದ್ದರು. ಆದರೆ ಗೌರಿ ಅವರ ಮನಸ್ಸಿನಲ್ಲೂ ಒಬ್ಬ ಕಲಾವಿದೆ ಇದ್ದಾರೆ, ತಾನೇನು ಎಂಬುದನ್ನು ತೋರಿಸಬೇಕು ಎಂಬ ತುಡಿತ ಬಹುಶಃ ಅವರಲ್ಲಿ ಕಾಡುತ್ತಿತ್ತು ಎನ್ನಿಸುತ್ತದೆ. ಅದೀಗ `ಸೊಸೈಟಿ’ ಮೂಲಕ ನೆರವೇರಿದೆ. ಈ ಮೂಲಕ ಫ್ಯಾಷನ್ ಡಿಸೈನಿಂಗ್‍ನಲ್ಲೂ ತಮ್ಮ ಪ್ರತಿಭೆ ಪ್ರದರ್ಶಿಸಿದ್ದಾರೆ.

Write A Comment