ಉಡುಪಿ: ಸೋಮವಾರ ಉಡುಪಿಯ ಎಮ್‌ಜಿಎಮ್ ಕಾಲೇಜು ಮೈದಾನದಲ್ಲಿ ನಡೆಯಲಿರುವ ವಿರಾಟ್ ಹಿಂದೂ ಸಮಾವೇಶದ ಪೊಲೀಸ್ ಬಂದೋಬಸ್ತ್ ಪ್ರಯುಕ್ತ ಪೊಲೀಸ್ ಪಥಸಂಚಲನ ಭಾನುವಾರ ನಡೆಯಿತು.
ಉಡುಪಿಯ ಜೋಡುಕಟ್ಟೆಯಿಂದ ಪ್ರಾರಂಭವಾಗಿ ಡಯನಾ ಸರ್ಕಲ್, ತ್ರಿವೇಣಿ ಸರ್ಕಲ್, ಸರ್ವಿಸ್ ಬಸ್ ನಿಲ್ದಾಣ ಹಾಗೂ ಕಲ್ಸಂಕ ಮಾರ್ಗವಾಗಿ ಶ್ರೀ ಕೃಷ್ಣ ಮಠದವರೆಗೆ ನಡೆಸಲಾಯಿತು.
ಪಥಸಂಚಲನದಲ್ಲಿ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಆಣ್ಣಾಮಲೈ, ಹೆಚ್ವುವರಿ ಪೊಲೀಸ್ ಅಧೀಕ್ಷಕ ಸಂತೋಷ್ ಕುಮಾರ್ ಹಾಗೂ ಇತರೇ ಅಧಿಕಾರಿಗಳು ಮತ್ತು ವಿವಿಧ ಜಿಲ್ಲೆಗಳಿಂದ ಆಗಮಿಸಿದ ಅಧಿಕಾರಿ ಹಾಗೂ ಸಿಬ್ಬಂದಿಯವರುಗಳು ಈ ಪಥಸಂಚಲನದಲ್ಲಿ ಭಾಗವಹಿಸಿದರು.






