ಕನ್ನಡ ವಾರ್ತೆಗಳು

ಉಡುಪಿ; ವಿರಾಟ್ ಹಿಂದೂ ಸಮಾಜೋತ್ಸವ ಹಿನ್ನೆಲೆ, ವ್ಯಾಪಕ ಬಂದೋಬಸ್ತ್; ಹಲವೆಡೆ ಚೆಕ್-ಪೋಸ್ಟ್ ; ಮಾ.9ಕ್ಕೆ ಜಿಲ್ಲೆಯಲ್ಲಿ ಮಧ್ಯ ನಿಷೇಧ

Pinterest LinkedIn Tumblr

ಉಡುಪಿ: ಮಾ.9 ಸೋಮವಾರದಂದು ಉಡುಪಿ ಜಿಲ್ಲೆಯ ಉಡುಪಿ ತಾಲೂಕಿನ ಕುಂಜಿಬೆಟ್ಟು ಎಂ.ಜಿ.ಎಂ ಮೈದಾನದಲ್ಲಿ ‘ವಿರಾಟ್ ಹಿಂದೂ ಸಮಾಜೋತ್ಸವ’ ಕಾರ್ಯಕ್ರಮ ನಡೆಯಲಿದ್ದು ಈ ಬಗ್ಗೆ ಉಡುಪಿ ಜಿಲ್ಲಾ ಪೊಲೀಸರು ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ.

udupi-police

ಹಿಂದೂ ಸಮಾಜೋತ್ಸವದ ಪೂರ್ವಿಭಾವಿಯಾಗಿ ಶೋಭಯಾತ್ರೆಯು ಅಂದು ಮದ್ಯಾಹ್ನ 2 ಗಂಟೆಗೆ ಉಡುಪಿ ಜೋಡುಕಟ್ಟೆಯಿಂದ ಲಯನ್ಸ್ ಸರ್ಕಲ್, ಡಯಾನ ಸರ್ಕಲ್, ಕೆ.ಎಂ ಮಾರ್ಗ, ಹನುಮಾನ್ ವೃತ್ತ, ಸರ್ವಿಸ್ ಬಸ್ಸು ನಿಲ್ದಾಣ, ಶೀರಿಬೀಡು ಜಂಕ್ಷನ್, ಸಿಟಿ ಬಸ್ಸು ನಿಲ್ದಾಣ, ಕಲ್ಸಂಕ, ಕಡಿಯಾಳಿ, ಕುಂಜಿಬೆಟ್ಟು, ಮಾರ್ಗವಾಗಿ ಕುಂಜಿಬೆಟ್ಟು ಎಂ.ಜಿ.ಎಂ ಮೈದಾನದ ಸಭಾ ಕಾರ್ಯಕ್ರಮ ಸ್ಥಳಕ್ಕೆ ತಲುಪಲಿದೆ. ಈ ಶೋಭಯಾತ್ರೆಯ ನಂತರ ಸಭಾ ಕಾರ್ಯಕ್ರಮವು ಕುಂಜಿಬೆಟ್ಟು ಎಂಜಿ‌ಎಂ ಮೈದಾನದಲ್ಲಿ ನಿರ್ಮಿಸಿರುವ ವೇದಿಕೆಯಲ್ಲಿ ನಡೆಯಲಿದೆ.

ASP_Annamalai_Kundapura-3

ಸಂಪೂರ್ಣ ಭದ್ರತೆ: ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ತೆ ಕಾಪಾಡುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಂಡಿದ್ದಾರೆ. 6  ಡಿವೈ‌ಎಸ್ಪಿ, 20 ಸರ್ಕಲ್ ಇನ್ಸ್‌ಪೆಕ್ಟರ್, 75 ಉಪನಿರೀಕ್ಷಕರು (ಎಸ್ಸೈ), 145 ಸಹಾಯಕ ಉಪನಿರೀಕ್ಷಕರು (ಎ.ಎಸ್ಸೈ), 1005 ಪೊಲೀಸ್ ಕಾನ್ಸ್‌ಟೇಬಲ್, 48 ಡಬ್ಲ್ಯೂ.ಪಿ.ಸಿ. ಹಾಗೂ 100 ಮಂದಿ ಗೃಹರಕ್ಷಕ ದಳ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಅಲ್ಲದೇ 15 ಕೆ.ಎಸ್.ಆರ್.ಪಿ., ಮತ್ತು 24 ಡಿ.ಎ.ಆರ್. ವಾಹನಗಳು ಸ್ಥಳದಲ್ಲಿ ಮೊಕ್ಕಾಂ ಹೂಡಲಿದೆ.

ಜಿಲ್ಲೆಗಳಲ್ಲಿರುವ ಕ್ಯೂ‌ಆರ್ಟಿ ತಂಡಗಳನ್ನು ಈ ಸಂದರ್ಭ ಬಳಸಿಕೊಳ್ಳಲಾಗುವುದು. ಅಲ್ಲದೇ ಕಾರ್ಯಕ್ರಮದ ವೇಳೆಯಲ್ಲಿ ಎಲ್ಲಾ ಆಗು ಹೋಗುಗಳ ಮೇಲೆ ಕಣ್ಗಾವಲಿಡಲು ಸಿಸಿ ಕೆಮೆರಾಗಳನ್ನು ಅಳವಡಿಸಲಾಗಿದೆ. ಜಿಲ್ಲೆಯ ಗಡಿಭಾಗ ಸೇರಿದಂತೆ ಆಯಕಟ್ಟಿನ ಇತರೆಡೆಗಳಲ್ಲಿ 22 ಚೆಕ್ ಪೋಸ್ಟ್ ಗಳನ್ನು ತೆರೆಯಲಾಗುವುದು.

ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಮಾ.9 ಸೋಮವಾರ ಬೆಳಿಗ್ಗೆ 6.೦೦ ಗಂಟೆಯಿಂದ ಮಾ.10 ರಂದು ಬೆಳಿಗ್ಗೆ 6.೦೦ ಗಂಟೆಯವರೆಗೆ ಜಿಲ್ಲೆಯಾದ್ಯಂತ ಪಾನ ನಿಷೇಧ ಜ್ಯಾರಿಗೊಳಿಸಲಾಗಿದೆ.

police

(ಸಾಂದರ್ಭಿಕ ಚಿತ್ರ)

ಹಿಂದೂ ಸಮಾಜೋತ್ಸವದ ವೇಳೆ ಯಾವುದೇ ಅಹಿತಕರ ಘಟನೆಗಳಾಗದಂತೆ ಸೂಕ್ತ ಬಂದೋಬಸ್ತ್ ಮಾಡಲಾಗಿದ್ದು ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ಸಾರ್ವಜನಿಕರಿಗೆ ಜಿಲ್ಲಾ ಪೊಲೀಸ್ ಅಧೀಕ್ಷಕ ಅಣ್ಣಾ ಮಲೈ ಐ.ಪಿ.ಎಸ್ ಅವರು ಮನವಿ ಮಾಡಿದ್ದಾರೆ.

Write A Comment